HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ ದಿನದಂದು ಅಂಗಡಿ ತೆರೆದು ಪ್ರತಿಭಟಿಸಲು ಉಪ್ಪಿನಂಗಡಿ ವರ್ತಕ ಸಂಘ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ನಾವು ಯಾವುದೇ ರಾಜಕೀಯ ಪಕ್ಷ ಅಲ್ಲ.‌ ನಮ್ಮದು ವರ್ತಕ ಪಕ್ಷ ಎಂದು‌ ಒಕ್ಕೊರಳ ಅಭಿಪ್ರಾಯ
  • ಎಲ್ಲಾ ವರ್ತಕರು‌ ಒಟ್ಟಾಗಿ ಕೇಸ್ ಎದುರಿಸೋಣ
    ಪುತ್ತೂರು: ವೀಕೆಂಡ್ ಕರ್ಫ್ಯೂ ದಿನದಂದು ಎಲ್ಲಾ ವರ್ತಕರು ಅಂಗಡಿ ತೆರೆದು ಪ್ರತಿಭಟಿಸಲು ಉಪ್ಪಿನಂಗಡಿಯ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ನಿರ್ಣಯ ಅಂಗೀಕರಿಸಿದೆ.

ಸೆ.1ರಂದು ಸಂಜೆ ಉಪ್ಪಿನಂಗಡಿಯ ಪ್ರಥ್ವಿ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನಡೆದ ಸಂಘದ ವಿಶೇಷ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಗಿದೆ.
ಅಧ್ಯಕ್ಷ ಪ್ರಶಾಂತ್ ಡಿ ಕೋಸ್ತ ಅಧ್ಯಕ್ಷತೆ ವಹಿಸಿದ್ದರು.‌

ವೀಕೆಂಡ್ ಕರ್ಫ್ಯೂ ದಿನ ಅಂಗಡಿ ವ್ಯವಹಾರ ನಡೆಸುವುದು, ದಂಡ ವಿಧಿಸಿದರೆ, ಕೇಸ್ ಹಾಕಿದರೆ ಎಲ್ಲಾ ವರ್ತಕರು ಒಟ್ಟಾಗಿ ಎದುರಿಸುವುದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಅಲ್ಲದೆ ಈ ವಿಚಾರದಲ್ಲಿ ಸಮಸ್ಯೆ ಉಂಟಾದರೆ ವರ್ತಕರು ತಕ್ಷಣ ಸಂಪರ್ಕಿಸಲು ವರ್ತಕರ ತಂಡವೊಂದನ್ನು ರಚಿಸಲಾಯಿತು. ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್ ವಿವಿಧ ಕಾರ್ಯಕ್ರಮ‌ ನಿರ್ವಹಿಸಿದರು.‌ ಹಲವು ವರ್ತಕರು ಸಭೆಯಲ್ಲಿ‌ ಸಲಹೆ ಸೂಚನೆ ನೀಡಿದರು.‌ ಸುದ್ದಿಯಲ್ಲಿ ಪ್ರತೀ ದಿನ ವೀಕೆಂಡ್ ಕರ್ಫ್ಯೂ ನಿಂದ ಆಗುವ ತೊಂದರೆ ಬಗ್ಗೆ ವರ್ತಕರ ಬರಹಗಳು ಪ್ರಕಟ ಆಗುತ್ತಿದೆ. ಆದರೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ವರ್ತಕರು ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.

ಶಾಸಕರು, ಸಂಸದರು ಆಡಳಿತ ನಡೆಸುವವರು. ಅವರೇ ಕಾನೂನು ರೂಪಿಸುವವರು. ಹಾಗಾಗಿ ವೀಕೆಂಡ್ ಕರ್ಫ್ಯೂ ತೆರವು ಮಾಡುವಂತೆ‌ ಜನಪ್ರತಿನಿಧಿಗಳಿಗೆ ಮೊದಲು ಮನವಿ ಮಾಡುವ ಎಂದು ಆಗ್ರಹ ವ್ಯಕ್ತವಾಯಿತಲ್ಲದೆ ಎಲ್ಲಾ ವರ್ತಕರು ಅಂಗಡಿಗಳನ್ನು ತೆರೆದಿಟ್ಟು ವೀಕೆಂಡ್ ಕರ್ಫ್ಯೂ ವಿರೋಧಿಸೋಣ, ಕೇಸ್ ಆದರೆ ವರ್ತಕ ಸಂಘದ ನೇತೃತ್ವದಲ್ಲಿಯೇ ಎದುರಿಸೋಣ ಎಂದು ಒಕ್ಕೊರಳ ಅಭಿಪ್ರಾಯ ವ್ಯಕ್ತವಾಯಿತು. ಮಂಗಳೂರಿನ ಸಂದೀಪ್ ಕಾಮತ್ ಅವರು ವರ್ತಕರ ನೋವಿನ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ನಮ್ಮದು ಯಾವುದೇ ರಾಜಕೀಯ ಪಕ್ಷ ಅಲ್ಲ.‌ನಮ್ಮದು ವರ್ತಕ ಪಕ್ಷ ಎಂದು‌ ಒಕ್ಕೊರಳ ಅಭಿಪ್ರಾಯ
ಕೇಳಿ ಬಂತಲ್ಕದೆ ಮದ್ಯಕ್ಕೆ ಅವಕಾಶ ಇದೆ, ಬಟ್ಟೆ, ಚಪ್ಪಲಿಗೆ ಅವಕಾಶ ಯಾಕೆ ಇಲ್ಲ ಎಂಬ ಪ್ರಶ್ನೆ ಕೇಳಿ ಬಂತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.