HomePage_Banner
HomePage_Banner
HomePage_Banner
HomePage_Banner

ಆಲಂಕಾರು ಗ್ರಾ.ಪಂ ಮಾಜಿ ಅಧ್ಯಕ್ಷ, ಜ್ಯೋತಿಷಿ ದಿ.ಎನ್.ರಾಮಮೂರ್ತಿ ಆಚಾರ್ ರವರ ನುಡಿನಮನ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಆಲಂಕಾರು: ಪ್ರಖ್ಯಾತ ಜ್ಯೋತಿಷಿಗಳೂ, ಪ್ರಗತಿಪರ ಕೃಷಿಕರೂ , ಜನ ಸಂಘದ ನಿಷ್ಠಾವಂತ ಕಾರ‍್ಯಕರ್ತರಾದ ಆಲಂಕಾರು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ,ಮಂಡಲ ಪಂಚಾಯತ್ ಸದಸ್ಯರಾಗಿ, ಆಲಂಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ, ಕಾರ‍್ಯದರ್ಶಿಗಳಾಗಿ ಸೀಮಾ ದೇವಸ್ಥಾನವಾದ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯ ಪ್ರಧಾನ ಕಾರ‍್ಯದರ್ಶಿಗಳಾಗಿ ಸುಮಾರು ೨೮ ವರ್ಷಕ್ಕೂ ಮೇಲ್ಪಟ್ಟು ಕ್ಷೇತ್ರದಲ್ಲಿ ಸರ್ವಾಂಗೀಣ ಬೆಳವಣಿಗೆಯಲ್ಲಿ ಪ್ರಧಾನ ಜವಾಬ್ದಾರಿಯನ್ನು ನಿರ್ವಹಿಸಿ, ೧೯೮೨ರಲ್ಲಿ ಸ್ಥಾಪನೆಗೊಂಡ ಶ್ರೀ ದುರ್ಗಾಂಬಾ ಕಲಾ ಸಂಗಮದ ಸ್ಥಾಪಕ ಸಂಚಾಲಕರಾಗಿ,ದುರ್ಗಾಂಬಾ ವಿದ್ಯಾವರ್ಧಕ ಸಂಘದ ಪದಾಧಿಕಾರಿಯಾಗಿ , ಶ್ರೀ ದುರ್ಗಾಂಬಾ ಕಲಾ ಸಂಗಮದಲ್ಲಿ ಹಿರಿಯ ಅರ್ಥಧಾರಿಗಳಾಗಿ, ಕಿರಿಯರಿಗೆ ಮಾರ್ಗದರ್ಶಿಗಳಾಗಿದ್ದು ೨೫ನೇ ವರ್ಷದ ರಜತ ಸಂಭ್ರಮ ಸಮಿತಿಯಲ್ಲಿ ಅಧ್ಯಕ್ಷರಾಗಿ ಕಲಾ ಸೇವೆಯನ್ನು ಮಾಡಿದ ಜ್ಯೋತಿಷಿಗಳಾಗಿ ಅನೇಕ ದೇವಸ್ಥಾನ, ದೇವಸ್ಥಾನಗಳಲ್ಲಿ ಮಾರ್ಗದರ್ಶಕರಾಗಿ ಹಿತ ಚಿಂತಕರಾಗಿ ಎಲ್ಲರ ಒಳಿತನ್ನು ಬಯಸಿದ ಆಲಂಕಾರು ಗ್ರಾಮದ ಬೇರಿಕೆ ಮಧ್ವಕುಟೀರದ ಎನ್.ರಾಮಮೂರ್ತಿ ಆಚಾರ್ ರವರು ಆ.4 ರಂದು ನಿಧನರಾಗಿದ್ದು ಅವರ ನುಡಿ ನಮನ ಕಾರ್ಯಕ್ರಮ ಶ್ರೀ ಕ್ಷೇತ್ರ ಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ದುರ್ಗಾಂಬಾ ಕಲಾ ಸಂಗಮ ವತಿಯಿಂದ ಎನ್.ರಾಮಮೂರ್ತಿ ಆಚಾರ್ ಬೇರಿಕೆ ನಾಗರಿಕ ನುಡಿ ನಮನ – 2021 ನಡೆಯಿತು. ರಾಮಮೂರ್ತಿ ಆಚಾರ್ ರವರ ಸಂಬಂಧಿಕರಾದ ಬೆಂಗಳೂರಿನ ಸುಬ್ರಹ್ಮಣ್ಯ ಆಚಾರ್ ರವರು ದೀಪ ಬೆಳಗಿಸಿ, ದಿ|. ಎನ್‌.ರಾಮಮೂರ್ತಿ ಆಚಾರ್ ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ನುಡಿನಮನ ಕಾರ್ಯಕ್ರಮ ನಡೆಯಿತು. ರಾಮಕುಂ ಜೇಶ್ವರ ಪದವಿ ಪೂರ್ವ ಕಾಲೇಜಿನ ನಿವೃತ್ತ ಕನ್ನಡ ಉಪನ್ಯಾಸಕ ರಾದ ಗಣರಾಜ್ ಕುಂಭ್ಳೆಯವರು ನುಡಿ ನಮನ ಸಲ್ಲಿಸಿ ದಿ|.ಎನ್. ರಾಮಮೂರ್ತಿ ಆಚಾರ್ ರವರು ಸಮಧಾನ ಚಿತ್ತದವರಾಗಿದ್ದು ಸಾಮಾಜಿಕ,ಧಾರ್ಮಿಕ,ಸಹಕಾರಿ,ರಾಜಕೀಯ,ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರು .ಒಬ್ಬ ಒಳ್ಳೆಯ ಜ್ಯೋತಿಷಿಯಾಗಿ ಕಷ್ಟದಲ್ಲಿರುವವರಿಗೆ ಸಹಾಯ ಹಸ್ತವನ್ನು ಚಾಚಿದವರು. ಶ್ರೀ ಕ್ಷೇತ್ರಶರವೂರು ದುರ್ಗಾ ಪರಮೇಶ್ವರಿ ದೇವಸ್ಥಾನದ ಅಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾಗಿ 28 ವರ್ಷಗಳ ಕಾಲ ಅತ್ಯಂತ ಬಹಳ ಜವಾಬ್ದಾರಿಯಿಂದ ಕೆಲಸ ಕಾರ್ಯ ನಿರ್ವಹಿಸಿದವರು ರಾಮಮೂರ್ತಿ ಆಚಾರ್ ನ ಹೇಸರಿನ ಹಿಂದೆ ರಾಮ ಎನ್ನುವ ಹೇಸರಿದೆ ಅದರಂತಯೇ ಅವರು ರಾಮದೇವರ ಅದರ್ಶ ವನ್ನು ಹೊಂದಿದ್ದರು. ಯಕ್ಷಗಾನದ ಅರ್ಥದಾರಿಯಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿ ಹೃದಯಾತರಂಗದಿಂದ ಕೆಲಸಮಾಡಿದವರು . ದೇವಸ್ಥಾನದಲ್ಲಿ ಸಂಸ್ಕಾರ ವನ್ನು ಉಳಿಸುವ ಕೆಲಸ ಗಳು ದೇವಸ್ಥಾನದ ವತಿಯಿಂದ ನಡೆಯಬೇಕು, ಸದಾಚಾರದ ಸಂಸ್ಕೃತಿಯನ್ನು ದೇವಸ್ಥಾನದವರು ಉಳಿಸಿದರೆ ಆ ಕ್ಷೇತ್ರ ಅಭಿವೃದ್ದಿಯಾಗುತ್ತದೆ. ಭಕ್ತರು ಕೂಡ ಆ ಕ್ಷೇತ್ರಕ್ಕೆ ಅಕರ್ಷಣೆಗೊಳಗಾಗುತ್ತಾರೆ. ಇಂತಹ ಕೆಲಸವನ್ನು ರಾಮಮೂರ್ತಿ ಆಚಾರ್ ರವರು ಮಾಡುತ್ತಿದ್ದರು ಎಂದು ತಿಳಿಸಿ ಅವರಿಗೆ ನುಡಿ ನಮನ ಸಲ್ಲಿಸಿದರು.

ದುರ್ಗಾಂಬಾ ಕಲಾ ಸಂಗಮದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ ರವರು ಮಾತನಾಡಿ ರಾಮಮೂರ್ತಿ ಆಚಾರ್ ರವರು ಸಜ್ಜನ ವ್ಯಕ್ತಿಯಾಗಿ ಶ್ರೀ ಕ್ಷೇತ್ರಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಅಭಿವೃದ್ದಿಯಲ್ಲಿ ಅವರ ಪಾತ್ರ ಬಹಳ ಹಿರಿದಾಗಿದ್ದು ಎಲ್ಲರಿಗೂ ಅಚ್ಚುಮೆಚ್ಚಿನವರಾಗಿದ್ದರು. ಜ್ಯೋತಿಷ್ಯದಲ್ಲಿ ಕೂಡ ಯಶಸ್ವಿಯಾಗಿ, ಸಮಾಜಕ್ಕೆ ಒಬ್ಬ ಮಾರ್ಗದರ್ಶಕರಾಗಿಬೆಳೆದವರು ಎಂದು ತಿಳಿಸಿ ಅವರ ಅತ್ಮಕ್ಕೆ ಭಗವಂತ ಚಿರಶಾಂತಿ ಕರುಣಿಸಲೆಂದು ಪ್ರಾರ್ಥಿಸಿದರು.ದುರ್ಗಾಂಬಾ ವಿದ್ಯಾ ವರ್ಧಕ ಸಂಘದ ಅಧ್ಯಕ್ಷರಾದ ದಯಾನಂದ ರೈ ಮನವಳಿಕೆ ಗುತ್ತುರವರು ಮಾತನಾಡಿ ರಾಮಮೂರ್ತಿ ಆಚಾರ್ ರವರು ಅಪಾರ ಅನುಭವ ವುಳ್ಳ ವ್ಯಕ್ತಿ ಯಾಗಿದ್ದರು. ಜನನ ದಿಂದ ಮರಣದ ತನಕ ಒಬ್ಬ ವ್ಯಕ್ತಿ ಹೇಗೆ ಬದುಕಿದ್ದ ಎನ್ನುವ ನೆಲೆಯ ಮೇಲೆ ಸಮಾಜ ಅತನನ್ನು ಗೌರವಿಸುತ್ತದೆ. ದುರ್ಗಾಂಬಾ ವಿದ್ಯಾವರ್ಧಕ ಸಂಘದಲ್ಲಿ ಕಾರ್ಯದರ್ಶಿ ಯಾಗಿ,ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು ಒಬ್ಬ ಅದರ್ಶ ವ್ಯಕ್ತಿ ಸಮಾಜದಲ್ಲಿ ಗುರುತಿಸಿಕೊಂಡವರು. ಅವರ ಅಗಲಿವಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಹೇಳಿ ಅವರ ಅತ್ಮಕ್ಕೆ ಚಿರಶಾಂತಿಯನ್ನು ಕೋರಿದರು. ಆಲಂಕಾರು ಗ್ರಾ.ಪಂ ಅಧ್ಯಕ್ಷ ಸದಾನಂದ ಆಚಾರ್ಯ ಮಾತನಾಡಿ ರಾಮಮೂರ್ತಿ ಆಚಾರ್ ರವರು ಬಹಳ ಸೌಮ್ಯ ಸ್ವಭಾವದವರಾಗಿದ್ದು ಅವರ ಅಡಳಿತಾವಧಿಯಲ್ಲಿ ಆಲಂಕಾರು ಗ್ರಾ.ಪಂ ಗೆ 23 ಎಕ್ರೆ ಜಾಗವನ್ನು ಪಂಚಾಯತ್ ಗೆ ಮೀಸಲು ಇಟ್ಟವರು ಇದರಿಂದಾಗಿ ದ.ಕ ಜಿಲ್ಲೆಯಲ್ಲೆ ಪಂಚಾಯತ್ ಗೆ ಅತೀ ಹೆಚ್ಚು ಜಾಗವಿರುವ ಪಂಚಾಯತ್ ಎಂದರೆ ಆಲಂಕಾರು ಪಂಚಾಯತ್ ಎಂದು ಹೆಗ್ಗಳಿಕೆ ಪಡೆಯಲು ಸಾಧ್ಯವಾಯಿತು ಎಂದು ತಿಳಿಸಿದರು. ದುರ್ಗಾಂಬಾ ಕಲಾ ಸಂಗಮ ಅಧ್ಯಕ್ಷ ಗೋಪಾಲಕೃಷ್ಣ ಭಟ್ ನೈಮಿಷ ಮಾತನಾಡಿ ಸಮಾಜಕೋಸ್ಕರ ತ್ಯಾಗ ಮಾಡಿದವರನ್ನು ನೆನಪಿಟ್ಟುಕೊಳ್ಳುವುದು ಸಮಾಜದ ಅದ್ಯ ಕರ್ತವ್ಯ ವಾಗಬೇಕು .ರಾಮಮೂರ್ತಿ ಆಚಾರ್ ರವರು ಸಮಾಜಕೋಸ್ಕರ ಸಂಪತ್ತನ್ನು ಆಯುಷ್ಯವನ್ನು ಧಾರೆ ಎರೆದವರು,ನೋವಿಗೆ ಸ್ಪಂದನೆ ನೀಡಿದವರು, ದುರ್ಗಾಂ ಬಾ ಕಲಾ ಸಂಗಮಕ್ಕೆ ಅಡಿಪಾಯ ಹಾಕಿದವರು,ಅವರ ಚೈತನ್ಯಯುತೆ,ಸ್ಪೂರ್ತಿ ಯುತ ನಡೆ ಸಮಾಜಕ್ಕೆ ಮಾದರಿಯಾಗಲಿ ಎಂದು ತಿಳಿಸಿದರು.

ಸಭಾಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ದಾಮೋದರ ಗೌಡ ಕಕ್ವೆ ಮಾತನಾಡಿ ಶ್ರೀ ಕ್ಷೇತ್ರ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಅಪಾರ ವಾದ ಸೇವೆಯನ್ನು ಮಾಡಿದವರು ರಾಮಮೂರ್ತಿ ಆಚಾರ್ ರವರು ,ಸಮಾಜದ ಹಿತ ಚಿಂತಕರಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಅವರಿಗೆ ಸೀಮೆಯ ಸಮಸ್ತ ಭಕ್ತಾಧಿಗಳ ಪರವಾಗಿ ನುಡಿ ನಮನ ವನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು. ಆಲಂಕಾರು ಸಿ.ಎ ಬ್ಯಾಂಕ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ರೈ,ಮನವಳಿಕೆ, ಆಲಂಕಾರು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಜಗನ್ನಾಥ ಶೆಟ್ಟಿ, ಬುಡೇರಿಯಾ ದೈವಸ್ಥಾನದ ಅಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಕರ್ತು ಕುಟೇಲು ದೈವಸ್ಥಾನದ ಅಧ್ಯಕ್ಷರಾದ ಕೇಶವ ಗೌಡ ಆಲಡ್ಕ, ಆದಿಶಕ್ತಿ ಭಜನಾ ಮಂಡಳಿಯ ಅಧ್ಯಕ್ಷ ಲಿಂಗಪ್ಪ ಮಡಿವಾಳ, ಶ್ರೀ ದೇವಿ ತುಳುನಾಡ ಬಳಗದ ಸ್ಥಾಪಕದ್ಯಕ್ಷ ರಾಮಚಂದ್ರ ದೇವಾಡಿಗ, , ರಾಮಮೂರ್ತಿ ಆಚಾರ್ ರವರ ಮೊಮ್ಮಗ ಸಂದೀಪ್ ಶಾಸ್ತ್ರಿ, ಅಕ್ಷಯ ಎಂಟರ್ ಪ್ರೈಸಸ್ ನ ಧರ್ಮಪಾಲ, ಕೊಕ್ಕಡದ ಮೋಹನದಾಸ ಗೌಡ,ಪಟ್ರಮೆ ಚೆನ್ನಪ್ಪ ಗೌಡ, ಆಲಂಕಾರು ಗ್ರಾ.ಪಂ ಸದಸ್ಯ ರವಿಪೂಜಾರಿ ಕುಂಞಲಡ್ಡ, ಮುತ್ತಪ್ಪ ಪೂಜಾರಿ ನೈಯ್ಯಲ್ಗ, ರಾಮಮೂರ್ತಿ ಆಚಾರ್ ರವರ ಬಗ್ಗೆ ಜ್ಯೋತಿಷ್ಯ ಶಾಸ್ರದಲ್ಲಿ ಹಾಗು ದೈನಂದಿನ ಜೀವನದಲ್ಲಿ ಅವರೊಂದಿಗೆ ಒಡನಾಟದಲ್ಲಿರುವಾಗ ಆದ ಅನುಭವಗಳನ್ನು ತಿಳಿಸಿ ,ಗುಣಗಾನ ಮಾಡಿ ಅಗಲಿದ ಆತ್ಮಕ್ಕೆ ಭಗವಂತ ಚಿರಶಾಂತಿಯನ್ನು ಕರುಣಿಸಲೆಂದು ಎಂದು ಪ್ರಾರ್ಥಿಸಿದರು.. ಪ್ರಾಸ್ತವಿಕ ವಾಗಿ ಚಂದ್ರಶೇಖರ .ಕೆ ಯವರು ಮಾತನಾಡಿ ರಾಮಮೂರ್ತಿ ಆಚಾರ್ ರವರು ಪ್ರಚಾರ ಇಲ್ಲದೇ ಅಚ್ಚರಿ ರೀತಿಯಲ್ಲಿ ಕೆಲಸ ಮಾಡಿದವರು. ಸೇವೆಯಿಂದ ಸಂಸ್ಕಾರ ಬರುತ್ತದೆ ಎನ್ನುವುದನ್ನು ಸಮಾಜಕ್ಕೆ ತೋರಿಸಿಕೊಟ್ಟವರು,ಸಮಾಜದಲ್ಲಿ ಧರ್ಮ ಉಳಿಯಬೇಕಾದ್ರೆ ರಾಮಮೂರ್ತಿ ಆಚಾರ್ ರಂತವರು ಮತ್ತೆ ಮತ್ತೆ ಹುಟ್ಟಿಬರಬೇಕೆಂದು ತಿಳಿಸಿದರು.. ಇದೇ ಸಂಧರ್ಭದಲ್ಲಿ ರಾಮಮೂರ್ತಿ ಆಚಾರ್ ರವರ ಸ್ಮರಣಾರ್ಥ ವಿವಿಧ ಸಂಘ ಸಂಸ್ಥೆಯ ಪದಾದಿಕಾರಿಗಳಿಗೆ ಸ್ಮರಣಿಕೆ ಹಾಗು ಸುದ್ದಿ ಬಿಡುಗಡೆ ಪತ್ರಿಕೆ ನೀಡಿ ಗೌರವಿಸಿದರು. ದುರ್ಗಾಂಬಾ ಕಲಾಸಂಗಮದ ಪದಾದಿಕಾರಿಗಳಾದ ಸುಬ್ರಹ್ಮಣ್ಯ ರಾವ್ ನಗ್ರಿ, ಸ್ವಾಗತಿಸಿ, ನಾರಾಯಣ ಭಟ್ .ಬಿ ಕಾರ್ಯಕ್ರಮ ನಿರೂಪಿಸಿ, ತಿಮ್ಮಪ್ಪ ಪೂಜಾರಿ ಮಡ್ಯೋಟ್ಟು ಪ್ರಾರ್ಥಿಸಿ, ದೇವಸ್ಥಾನದ ಅರ್ಚಕರಾದ ರಾಘವೇಂದ್ರ ಪ್ರಸಾದ್ ಭಟ್ ರಾಮಮೂರ್ತಿ ಆಚಾರ್ ರವರು ಮಾಡಿದ ಸಾಧನೆಯನ್ನು ಸಭೆ ತಿಳಿಸಿ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ಮಾಜಿ ಅಧ್ಯಕ್ಷರಾದ ಕಮಲಾಕ್ಷ ರೈ ಪರಾರಿಗುತ್ತು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಪ್ರಶಾಂತ ರೈ .ಜಿ.ಮನವಳಿಕೆ,ಶೀನಪ್ಪ ಕುಂಬಾರ,ಬಾಬುಮರುವಂತಿಲ ಪ್ರಮುಖರಾದ ಕೃಷ್ಣ ಮೂರ್ತಿ ಕಲ್ಲೇರಿ, ಹರೀಶ ಆಚಾರ್ಯ ನಗ್ರಿ, ಶ್ರೀ ದೇವಿ ತುಳುನಾಡ ಬಳಗದ ಅಧ್ಯಕ್ಷ ಅಶೋಕ ದೇವಾಡಿಗ, ನಾಗಪ್ಪ ಗೌಡ ಮರುವಂತಿಲ, ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪದಾಧಿಕಾರಿಗಳು,ರಾಮಮೂರ್ತಿ ಆಚಾರ್ ರವರ ಕುಟುಂಬಸ್ಥರು,ಅಭಿಮಾನಿಗಳು ಉಪಸ್ಥಿತರಿದ್ದರು. ಆನಂತರ ದುರ್ಗಾಂಬಾ ಕಲಾ ಸಂಗಮ ಶ್ರೀ ಕ್ಷೇತ್ರ ಶರವೂರು ವತಿಯಿಂದ ಅತಿಥಿ ಕಲಾವಿದರಾದ ರಾಮಚಂದ್ರ ಅರ್ಭಿತ್ತಾಯ ಹಾಗು ಕೇಶವ ಬೈಪಾಡಿತ್ತಾಯ ರವರ ಕೂಡುವಿಕೆಯೊಂದಿಗೆ ಯಕ್ಷಗಾನ ತಾಳಮದ್ದಲೆ ನಡೆಯಿತು

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.