HomePage_Banner
HomePage_Banner
HomePage_Banner
HomePage_Banner

ದ್ವಿತೀಯ ಪಿಯು ಭೌತಿಕ ತರಗತಿಗಳು ನಡೆಯುತ್ತಿರುವ ಹಿನ್ನೆಲೆ ಫಿಲೋಮಿನಾ ಕಾಲೇಜಿಗೆ ಎಸ್.ಒ.ಪಿ ತಂಡ ಭೇಟಿ-ಪ್ರಶಂಸೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಮಹಾಮಾರಿ ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ದ್ವಿತೀಯ ಪಿಯುಸಿ ಭೌತಿಕ ತರಗತಿಗಳನ್ನು ಕೋವಿಡ್ ಕಡ್ಡಾಯ ನಿಯಮಾನುಸಾರ ಆರಂಭಿಸಬಹುದು ಎಂದು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ಆಯಾ ಪದವಿ ಪೂರ್ವ ಕಾಲೇಜುಗಳು ದ್ವಿತೀಯ ಪಿಯುಸಿ ತರಗತಿಗಳನ್ನು ಆರಂಭಿಸಿವೆ. ಅದರಂತೆ ದಕ್ಷಿಣ ಕನ್ನಡ ಜಿಲ್ಲೆಯ ಡಿ.ಸಿ ಡಾ|ರಾಜೇಂದ್ರ ಕೆ.ವಿರವರ ನೇತೃತ್ವದಲ್ಲಿ ಸರಕಾರದ ನಿರ್ದೇಶನದಂತೆ ತರಗತಿಗಳನ್ನು ಕೋವಿಡ್ ನಿಯಮಾನುಸಾರ ಆಗುತ್ತಿದೆಯೇ ಎಂದು ಪ್ರಮಾಣಿಸಲು ಪ್ರಮಾಣಿತ ಕಾರ್ಯಾಚರಣಾ ಪರಿಪಾಲನೆ(ಎಸ್.ಒ.ಪಿ) ಸಮಿತಿಯನ್ನು ರಚಿಸಿದೆ.

ಅದರಂತೆ ಈ ಪ್ರಮಾಣಿತ ಕಾರ್ಯಾಚರಣಾ ಪರಿಪಾಲನೆ ಸಮಿತಿ ಸದಸ್ಯರಾದ ಕಬಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೇಮಲತಾ, ಬೆಟ್ಟಂಪಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗೋಪಾಲ ಗೌಡ ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ್ ನಿಟಿಲಾಪುರರವರನ್ನೊಳಗೊಂಡ ಸಮಿತಿಯು ಸೆ.2ರಂದು ಪೂರ್ವಾಹ್ನ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿಗೆ ಭೇಟಿಯಿತ್ತು, ಬಳಿಕ ತರಗತಿ ಕೊಠಡಿಗಳಿಗೆ ತೆರಳಿ ವಿದ್ಯಾರ್ಥಿಗಳು ಹಾಗೂ ಕಾಲೇಜು ಪ್ರಮಾಣಿತ ಕಾರ್ಯಾಚರಣಾ ಪರಿಪಾಲನೆಯಲ್ಲಿ ಉಲ್ಲೇಖಿಸಲಾದ ಕೋವಿಡ್ ಕಡ್ಡಾಯ ನಿಯಮಗಳನ್ನು ಪಾಲಿಸಿದ್ದಾರೆಯೇ ಎಂದು ಪರಿಶೀಲನೆ ಮಾಡಿ ನಿಯಮಗಳನ್ನು ಪಾಲಿಸಿರುತ್ತಾರೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ, ಭೌತಿಕ ತರಗತಿಗಳಿಗೆ ಹಾಜರಾದ ವಿದ್ಯಾರ್ಥಿಗಳ ಸಂಖ್ಯೆ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಸಂಖ್ಯೆ, ಕೇರಳ ರಾಜ್ಯದ ಬೋಧಕ-ಬೋಧಕೇತರ ಸಿಬ್ಬಂದಿಗಳಿದ್ದಲ್ಲಿ ಅವರುಗಳು ಕಡ್ಡಾಯವಾಗಿ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಿದ್ದಾರೆಯೇ?, ಇದ್ದಲ್ಲಿ ಅವರುಗಳ ವಿವರ, ವಸತಿ ನಿಲಯದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ, ಕೇರಳ ರಾಜ್ಯದಿಂದ ದಿನಂಪ್ರತಿ ಆಗಮಿಸುವ ವಿದ್ಯಾರ್ಥಿಗಳು ಕಡ್ಡಾಯ ಆರ್‌ಟಿ-ಪಿಸಿಆರ್ ಮಾಡಿಸಿ ನೆಗೆಟಿವ್ ಪ್ರಮಾಣಪತ್ರ ನೀಡಿದವರ ಸಂಖ್ಯೆ, ವಸತಿ ನಿಲಯದ ಹಾಗೂ ಸ್ಥಳೀಯ ವಿದ್ಯಾರ್ಥಿಗಳಿಗೆ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿದೆಯೇ?, ವಸತಿ ನಿಲಯದ ವಿದ್ಯಾರ್ಥಿಗಳನ್ನು ಏಳು ದಿನಗಳ ಕಾಲ ಕ್ವಾರಂಟೈನಲ್ಲಿ ಇರಿಸಲಾಗಿದೇಯೇ?, ವಸತಿ ನಿಲಯದ ವಿದ್ಯಾರ್ಥಿಗಳು 72 ಗಂಟೆ ಒಳಗಡೆ ಆರ್‌ಟಿ-ಪಿಸಿಆರ್ ವರದಿ ನೀಡಿದ್ದಾರೆಯೇ?, ವಸತಿ ನಿಲಯದ ಮೇಲ್ವಿಚಾರಕರಲ್ಲಿ ಒಬ್ಬರನ್ನು ಕೋವಿಡ್ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆಯೇ?, ಸಮಿತಿ ಭೇಟಿ ಸಮಯದಲ್ಲಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ತರಗತಿಗಳು ನಡೆಯುತ್ತಿರುವುದು ಕಂಡು ಬರುತ್ತಿದೆಯೇ? ಎಂಬುದರ ಕುರಿತು ಪ್ರಮಾಣಿತ ಕಾರ್ಯಾಚರಣಾ ಪರಿಪಾಲನೆ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಪ್ರಮಾಣಿತ ಕಾರ್ಯಾಚರಣಾ ಪರಿಪಾಲನೆ ಸಮಿತಿ ಸದಸ್ಯರ ಭೇಟಿ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ವಂ|ವಿಜಯ್ ಲೋಬೋ, ಕಾಲೇಜು ಕೋವಿಡ್ ನೋಡಲ್ ಅಧಿಕಾರಿ ಸಂದೇಶ್ ಲೋಬೋ, ಕಾಲೇಜಿನ ಉಪನ್ಯಾಸಕರು, ಆಡಳಿತ ಸಿಬ್ಬಂದಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.