HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ ತೆರವುಗೊಳಿಸಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಿ – ಶನಿವಾರ ಅಂಗಡಿ ಮುಂಗಟ್ಟು ತೆರೆದಿಟ್ಟು ಪ್ರತಿಭಟನೆ- ವರ್ತಕ ಸಂಘದ ದಿಟ್ಟ ನಿರ್ಧಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂನಿಂದಾಗಿ ಉದ್ಯಮಿಗಳು ಸಂಕಷ್ಟಕ್ಕೆ ಒಳಗಾಗಿದ್ದು, ಪೇಟೆಯಲ್ಲಿ ಶೇ.75 ರಷ್ಟು ವ್ಯವಹಾರ ಕುಂಠಿತವಾಗಿದೆ. ಸಿಬ್ಬಂದಿಗಳಿಗೆ ಸಂಬಳ ಕೊಡಲು, ಕಟ್ಟಡದ ಬಾಡಿಗೆ ಕಟ್ಟಲು, ಉದ್ಯಮದ ಸಾಲ ತೀರಿಸಲು ಕಷ್ಟ ಆಗಿದೆ. ಆತ್ಮಹತ್ಯೆಗೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಜಿಲ್ಲಾಡಳಿತವು ವೀಕೆಂಡ್ ಕರ್ಫ್ಯೂ ತೆರವುಗೊಳಿಸದಿದ್ದಲ್ಲಿ ಸೆ. 4ರ ಶನಿವಾರದಂದು ಎಲ್ಲಾ ವರ್ತಕರು ಅಂಗಡಿ ಮುಂಗಟ್ಟು ತೆರದಿಟ್ಟು ವ್ಯವಹಾರ ನಡೆಸುವ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗಿದೆ ಎಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟಿನ್ಹಾ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುದ್ದಿ ಮೀಡಿಯಾದಲ್ಲಿ ಅವರು ಮಾತನಾಡಿ ಪೇಟೆಯಲ್ಲಿ ಸಂಜೆ 7ರ ಬಳಿಕ ನಡೆಯುವ ಅನೇಕ ಉದ್ಯಮಗಿಳಿವೆ. ಅಲ್ಲದೆ ಶನಿವಾರ ಮತ್ತು ಭಾನುವಾರ ಮಾತ್ರ ನಡೆಯುವ ಸಾಕಷ್ಟು ವ್ಯವಹಾರಗಳೀವೆ, ಆದರೆ ಕೊರೊನಾ ನಿರ್ನಾಮವಾಗಲು ಇನ್ನೂ ಹಲವು ವರ್ಷಗಳು ತಗಲಬಹುದು. ಇದಕ್ಕೆ ಲಾಕ್ಡೌನ್, ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಪರಿಹಾರವಲ್ಲ. ಸರ್ಕಾರ ಇದನ್ನು ಮಾಡುವ ಬದಲು ಶೇ. 100 ವ್ಯಾಕ್ಸಿನೇಶನ್ ನೀಡುವ ಬಗ್ಗೆ ಚಿಂತನೆ ನಡೆಸಬೇಕು. ಉದ್ಯಮಿಗಳ ಹಾಗೂ ಉದ್ಯೋಗಿಗಳ ಹಿತದೃಷ್ಠಿಯನ್ನು ಕಾಪಾಡುವ ನಿಟ್ಟಿನಲ್ಲಿ ಮತ್ತು ನಿರುದ್ಯೋಗ ಸಮಸ್ಯೆನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಧಿಕಾರಿಗಳು, ಶಾಸಕರು ಈ ಬಗ್ಗೆ ಗಮನ ಹರಿಸಿ ಶೀಘ್ರ ಬಂದ್ ತೆರವುಗೊಳಿಸವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು ನಾವು ಕಾನೂನಾತ್ಮಕವಾಗಿಯೇ ವ್ಯವಹಾರ ನಡೆಸುತ್ತೇವೆ. ನಮ್ಮ ಈ ವ್ಯವಹಾರ ನಡೆಸುವಾಗ ತೊಂದರೆ ಆಗದಂತೆ ಶಾಸಕರು ನೇತೃತ್ವ ವಹಿಸಬೇಕು ಎಂದು ಹೇಳಿದರು.

ರೈತರು ದೇಶದ ಬೆನ್ನೆಲುಬಾದರೆ ಉದ್ಯಮಿಗಳು ದೇಶದ ಆರ್ಥಿಕ ರಕ್ಷಾ ಕವಚವಾಗಿದ್ದಾರೆ. ತಯಾರಕ ಮತ್ತು ಗ್ರಾಹಕರ ನಡುವೆ ಸೇತುವೆಯಾಗಿರುವ ಉದ್ಯಮಿಗಳು ಕರ್ಫ್ಯೂನಿಂದಾಗಿ ಸಂಕಷ್ಟಕ್ಕೆ ಒಳಗಾಗಿದ್ದು ವೀಕೆಂಡ್ ಕರ್ಫ್ಯೂ ತೆರವುಗೊಳಿಸುಂವತೆ ಈಗಾಗಲೇ ರಾಜ್ಯದ ಮುಖ್ಯಮಂತ್ರಿಗಳಿಗೆ. ಜಿಲ್ಲಾಧಿಕಾರಿಗಳಿಗೆ, ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಲಾಗಿದೆ. ಅಲ್ಲದೆ ಪುತ್ತೂರಿನ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. ಸಂಘಕ್ಕೆ ನೆಲ್ಯಾಡಿ, ಉಪ್ಪಿನಂಗಡಿ, ಕಡಬ, ಕುಂಬ್ರ, ಕೆಯ್ಯೂರು, ತಿಂಗಳಾಡಿ, ಈಶ್ವರಮಂಗಲ ವ್ಯಾಪ್ತಿಯ ವರ್ತಕ ಸಂಘಗಳು ಬೆಂಬಲ ನೀಡಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್, ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿಕೋಸ್ಟ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಕೋಶಾಧಿಕಾರಿ ಸದಾನಂದ, ಉಪಾಧ್ಯಕ್ಷ ಸಂತೋಷ್ ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯ ಉಲ್ಲಾಸ್ ಪೈ, ಉಪ್ಪಿನಂಗಡಿ ವರ್ತಕ ಸಂಘದ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯೂನಿಕ್, ಇರ್ಷಾದ್ ಯು.ಟಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.