HomePage_Banner
HomePage_Banner
HomePage_Banner
HomePage_Banner

ವಿದ್ಯುತ್ ಸಂಪರ್ಕವಿಲ್ಲದ ಬಡ ಕುಟುಂಬಕ್ಕೆ ಬೆಳಕು ಕೊಟ್ಟ ಕಾಂಗ್ರೆಸ್ ಎಸ್‌ಸಿ ಘಟಕ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಆರ್ಯಾಪು ಗ್ರಾಮದ ಕುರಿಯ ಮಲಾರ್ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಜೀವನ ನಡೆಸುತ್ತಿದ್ದ ಬಡ ಕುಟುಂಬವೊಂದಕ್ಕೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಎಸ್‌ಸಿ ಘಟಕ ಹಾಗೂ ಯಂಗ್ ಬ್ರಿಗೇಡ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡುವುದರ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದೆ. ಕುರಿಯ ಮಲಾರ್ ನಿವಾಸಿ ಗುರುವ ಹಾಗೂ ಬಾಗಿ ದಂಪತಿಗಳು ಮಲಾರ್ ಎಂಬಲ್ಲಿ ಸಣ್ಣ ಮನೆಯೊಂದರಲ್ಲಿ ಜೀವನ ನಡೆಸುತ್ತಾ ಬರುತ್ತಿದ್ದು ಕಳೆದ ಏಳು ವರ್ಷಗಳಿಂದ ಸ್ಥಗಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಕಾಂಗ್ರೆಸ್ ಎಸ್‌ಸಿ ಘಟಕ ಹಾಗೂ ಯಂಗ್ ಬ್ರಿಗೇಡ್ ರವರು ಅದಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಕಲ್ಪಿಸಿಕೊಟ್ಟು ಏಳು ದಿನಗಳಲ್ಲಿ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ. ಮಾತ್ರವಲ್ಲದೆ ಸೋರುತ್ತಿದ್ದ ಮನೆಯನ್ನು ದುರಸ್ಥಿಗೊಳಿಸಿ ಆಧಾರ್ ಕಾರ್ಡ್ ರೇಷನ್ ಕಾರ್ಡ್ ವ್ಯವಸ್ಥೆ ಮಾಡಿಸಿಕೊಟ್ಟಿದ್ದಾರೆ.

ಯಂಗ್ ಬ್ರಿಗೇಡ್‌ನ ಅಧ್ಯಕ್ಷ ಅಭಿಷೇಕ್ ಬೆಳ್ಳಿಪ್ಪಾಡಿ ಮಾತನಾಡಿ ಬಡತನ ಮುಕ್ತ ಪುತ್ತೂರು’ ಆಗಬೇಕು ಈ ನಿಟ್ಟಿನಲ್ಲಿ ಹೆಚ್ಚಿನ ರೀತಿಯಲ್ಲಿ ಇಂತಹ ಬಡತನ ಕಷ್ಟದಲ್ಲಿರುವ ಕುಟುಂಬವನ್ನು ಗುರುತಿಸಿ ಅವರಿಗೆ ಮೂಲಭೂತ ಸೌಕರ್ಯ ಸಿಗುವಂತಾಗಲು ಶ್ರಮಿಸಬೇಕಾಗಿದೆ, ಇಂತಹ ಜನಮೆಚ್ಚುಗೆಯ ಕಾರ್ಯಕ್ಕೆ ನಾವು ಎಂದಿಗೂ ಕೈಜೋಡಿಸಲಿದ್ದೇವೆ ಎಂದರು. ಕಾಂಗ್ರೆಸ್ ಎಸ್‌ಸಿ ಘಟಕದ ಅಧ್ಯಕ್ಷ ಕೇಶವ ಪಡೀಲ್ ಮಾತನಾಡಿ ಕಾಂಗ್ರೆಸ್ ಎಸ್ಸಿ ಘಟಕ ಬಡ ದಲಿತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಗುರುವ ಹಾಗು ಬಾಗಿ ಅವರ ಮನೆಗೆ ತೆರಳಿ ಅವರ ಕಷ್ಟವನ್ನು ಅರಿತು ನಮ್ಮ ಕೈಯಿಂದ ಆಗುವ ಸಹಾಯವನ್ನು ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪ್ರಜ್ವಲ್ ತೊಟ್ಲ, ಅಶೋಕ್ ಸಂಟ್ಯಾರು, ಗಣೇಶ್ ಎಚ್, ರಮೇಶ್ ಕೇಪುಳು, ಸತೀಶ್ ಪಡೀಲ್, ಶರತ್ ಪಡೀಲ್, ಸುಹೈಲ್ ಸಂಟ್ಯಾರು, ಅಶೋಕ್ ಪಡೀಲ್, ರವಿ ಸಂಟ್ಯಾರು ಅಲ್ಲದೆ ಕಾಂಗ್ರೆಸ್ ಎಸ್ಸಿ ಘಟಕ, ಯಂಗ್ ಬ್ರಿಗೇಡ್ ಸೇವಾದಳ, ವಲಯ ಕಾಂಗ್ರೆಸ್ ಪದಾಧಿಕಾರಿಗಳು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.