HomePage_Banner
HomePage_Banner
HomePage_Banner
HomePage_Banner

ಕಾವಿನಲ್ಲಿ ಎ ಕೆ ಸುಪರ್ ಮಾರ್ಕೆಟ್ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಪ್ರಾಮಾಣಿಕ ವ್ಯವಹಾರದಿಂದ ಸಮೃದ್ದಿ ಕಾಣಲು ಸಾಧ್ಯ: ಕಾವು ಹೇಮನಾಥ ಶೆಟ್ಟಿ

ಪುತ್ತೂರು:ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರೆ 275 ರ ಮಾಡ್ನೂರು ಗ್ರಾಮಪಂಚಾಯತ್ ವ್ಯಾಪ್ತಿಯ ಕಾವು ಎಂಬಲ್ಲಿ ನೂತನವಾಗಿ ಎಕೆ ಸೂಪರ್ ಮಾರ್ಕೆಟ್ ಸೆ.2 ರಂದು ಶುಭಾರಂಭಗೊಂಡಿತು. ನೂತನ ಸೂಪರ್ ಮಾರ್ಕೆಟನ್ನು ಪುತ್ತೂರು ಕೇಂದ್ರ ಜುಮಾ ಮಸೀದಿಯ ಮುದರ್ರಿಸ್ ಸಯ್ಯದ್ ಅಹ್ಮದ್ ಪೂಕೋಯಾ ತಂಙಳ್ ರವರು ದುವಾಶೀರ್ವಚನಗೈಯುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ ಯಾವುದೇ ವ್ಯವಹಾರ ಮಾಡುವುದಿದ್ದರೂ ಪ್ರಾಮಾಣಿಕತೆ ಅತೀ ಮುಖ್ಯ. ಪ್ರಾಮಾಣಿಕ ವ್ಯವಹಾರದಿಂದ ನಾವು ಸಮೃದ್ದಿ ಕಾಣಲು ಸಾಧ್ಯವಾಗುತ್ತದೆ. ಬೆಳೆಯುತ್ತಿರುವ ಕಾವು ಪೇಟೆಯಲ್ಲಿ ನೂತನವಾಗಿ ಎ ಕೆ ಸುಪರ್ ಮಾರ್ಕೆಟ್ ಆರಂಭಗೊಂಡಿರುವುದು ಈ ಭಾಗಕ್ಕೆ ಒಂದು ದೊಡ್ಡ ಕೊಡುಗೆಯಾಗಿದೆ. ಪ್ರತಿಯೊಂದಕ್ಕೂ ಪುತ್ತೂರು ನಗರವನ್ನೇ ಅವಲಂಬಿಸಿರುವ ಜನತೆಗೆ ಗ್ರಾಮೀಣ ಭಾಗದಲ್ಲಿಯೂ ರಖಂ ದರದಲ್ಲಿ ದಿನಸಿ ಸಾಮಾಗ್ರಿ ಸೇರಿದಂತೆ ಇತರೆ ಸಾಮಾಗ್ರಿಗಳು ದೊರೆಯುವ ಸುಪರ್ ಮಾರ್ಕೆಟ್ ಆರಂಭಗೊಂಡಿರುವುದು ಸಂತಸದ ವಿಚಾರವಾಗಿದೆ ಎಂದು ಹೇಳಿದರು. ಈ ಭಾಗದ ಜನತೆಯ ಸಹಕಾರದಿಂದ ಸಂಸ್ಥೆಯು ಅಭಿವೃದ್ದಿ ಹೊಂದಲಿ ಎಂದು ಶುಭ ಹಾರೈಸಿದರು.

ಕಾವು ಬುಶ್ರಾ ಶಿಕ್ಷಣ ಸಂಸ್ಥೆಗಳ ಸಂಚಾಲಕ ಬುಶ್ರಾ ಅಝೀಜ್ರವರು ಮಾತನಾಡಿ ಗ್ರಾಮೀಣ ಭಾಗವಾದ ಕಾವಿನಲ್ಲಿ ಸುಪರ್ ಮಾರ್ಕೆಟ್ ಆರಂಭಗೊಂಡಿರುವುದು ಈ ಭಾಗದ ಜನರಿಗೂ ಕಡಿಮೆ ದರದಲ್ಲಿ ದಿನಸಿ ಸಾಮಾಗ್ರಿಗಳನ್ನು ಖರೀದಿಸಲು ಸಾಧ್ಯವಾದಂತಾಗಿದೆ. ಬೆಲೆ ಏರಿಕೆಯಾಗುತ್ತಿರುವ ಇಂದಿನ ಕಾಲದಲ್ಲಿ ರಖಂ ದರದಲ್ಲಿ ವಸ್ತುಗಳು ಗ್ರಾಹಕರಿಗೆ ನೀಡುವ ಮೂಲಕ ನೂತನ ಸಂಸ್ಥೆ ಮನೆ ಮಾತಾಗಲಿ ಎಂದು ಹಾರೈಸಿದರು.

ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಿರುವ ಕಾವಿನಲ್ಲಿ ಸುಪರ್ ಮಾರ್ಕೆಟ್ ಒಂದರ ಅಗತ್ಯತೆ ಇದೆ. ಅದನ್ನು ಅಬ್ದುಲ್ ಖಾದರ್ ಉಸ್ತಾದ್ ಈಡೇರಿಸಿದ್ದಾರೆ. ಒಬ್ಬ ಗುರುಗಳಾಗಿ ಗ್ರಾಮದಲ್ಲಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಸುಪರ್ ಮಾರ್ಕೆಟ್ ಮಾಲಕರು ಗ್ರಾಮದ ಜನತೆಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಲಿ, ನೂತನ ಮಳಿಗೆ ಅಭಿವೃದ್ದಿಯತ್ತ ಸಾಗಲಿ ಎಂದು ಶುಭ ಹಾರೈಸಿದರು.
ಸಲಾಹುದ್ದೀನ್ ಸಖಾಫಿ ಮಾತನಾಡಿ ಶುಭ ಹಾರೈಸಿದರು. ಅರಿಯಡ್ಕ ಗ್ರಾಪಂ ಸದಸ್ಯರಾದ ದಿವ್ಯನಾಥ ಶೆಟ್ಟಿಯವರು ಪ್ರಥಮ ಖರೀದಿ ಮಾಡುವ ಮೂಲಕ ಗ್ರಾಹಕರ ವಿಭಾಗವನ್ನು ಉದ್ಘಾಟಿಸಿದರು.

ಉಸ್ತಾದರ ಅಂಗಡಿ
ಎ ಕೆ ಸುಪರ್ ಮಾರ್ಕೆಟ್ ಅಂಗಡಿ ಮಾಲಕರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ರವರು ಹಲವು ವರ್ಷಗಳ ಮಾಡನ್ನೂರು ಮದ್ರಸದಲ್ಲಿ ಗುರುಗಳಾಗಿ ಸೇವೆ ಸಲ್ಲಿಸಿದವರು. ಈ ಭಾಗದಲ್ಲಿ ಅವರಿಗೆ ಹೆಚ್ಚಿನ ಶಿಷ್ಯಂದಿರಿದ್ದಾರೆ. ಈ ಕಾರಣಕ್ಕೆ ಎ ಕೆ ಸುಪರ್ ಮಾರ್ಕೆಟ್ ನ್ನು ಜನ ಉಸ್ತಾದರ ಅಂಗಡಿ ಎಂದು ಕರೆಯುತ್ತಿದ್ದು , ಉಸ್ತಾದರೆಂದರೆ ಇಲ್ಲಿನವರಿಗೆ ಅಚ್ಚುಮೆಚ್ಚು.

ಏನೇನಿದೆ?
ನೂತನ ಸೂಪರ್ ಮಾರ್ಕಟಲ್ಲಿ ಎಲ್ಲಾ ತರದ ದಿನಸಿ ಸಾಮಾಗ್ರಿಗಳು, ಗೃಹೋಪಯೋಗಿ ವಸ್ತುಗಳು, ಪ್ಲಾಸ್ಟಿಕ್ ಪರಿಕರ ಮತ್ತು ಸ್ಟೇಷನರಿ, ತರಕಾರಿ , ಹಣ್ಣು ಹಂಪಲು, ಹಾಲು ಮತ್ತು ತಂಪು ಪಾನೀಯ, ಮೆಡಿಕೇರ್ ಮತ್ತು ಲೈಫ್ ಸ್ಟೈಲ್ ಐಟಂಗಳು ರಖಂ ದರದಲ್ಲಿ ಲಭ್ಯವಿದ್ದು ಹೋಂ ಡೆಲಿವರಿ ವ್ಯವಸ್ಥೆಯೂ ಲಭವಿದೆ. ಗ್ರಾಹಕರು ಸಹಕಾರ ನೀಡುವಂತೆ ಮಾಲಕರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಕಾವು ವಿನಂತಿಸಿದರು.


ಕಾರ್ಯಕ್ರಮದಲ್ಲಿ ಅರಿಯಡ್ಕ ಗ್ರಾಪಂ ಮಾಜಿ ಸದಸ್ಯ ಮೋನಪ್ಪ ಪೂಜಾರಿ, ಮಹಮ್ಮದ್ ಕುಂಞಿ ಹಾಜಿ ಕಾವು, ಡಾ. ನವೀನ್ ಕಾವು, ಮಹಮ್ಮದ್ ಮುಸ್ಲಿಯಾರ್ ಸದರ್ ಅಶ್ವತ್ತಡಿ, ಮಹೇಶ್ ರೈ ಅಂಕೊತ್ತಿಮಾರ್, ಮೋಹನ್ ದಾಸ್ ನೂಜಿಬೈಲು ಮಾಲಕರು, ಮಾಡನ್ನೂರು ಜಮಾತ್ ಅಧ್ಯಕ್ಷ ಕೆ ಕೆ ಇಬ್ರಾಹಿಂ ಹಾಜಿ, ಮಾಡನ್ನೂರು ಜುಮಾ ಮಸೀದಿ ಖತೀಬ್ ಸಿರಾಜುದ್ದೀನ್ ಫೈಝಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದು ನೂತನ ಸಂಸ್ಥೆಗೆ ಶುಭ ಹಾರೈಸಿದರು. ಮಾಡನ್ನೂರು ನೂರುಲ್ ಹುದಾ ಶಿಕ್ಷಣ ಸಂಸ್ಥೆಯ ಮನೇಜರ್ ಅರ್ಷದಿ ಉಸ್ತಾದ್ ಕಾರ್ಯಕ್ರಮ ನಿರೂಪಿಸಿದರು. ನವಾಝ್, ಸಿನಾನ್ , ಲತೀಫ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.