HomePage_Banner
HomePage_Banner
HomePage_Banner
HomePage_Banner

ಕುರಿಯ 1 ಮತ್ತು 2ನೇ ವಾರ್ಡ್ ನ ಕಾಂಗ್ರೆಸ್ ಬೂತ್ ಸಮಿತಿ ರಚನೆ- ಬಿಜೆಪಿ ಬೆಂಬಲಿತ ಮಾಜಿ ಗ್ರಾ. ಪಂ ಸದಸ್ಯೆ ಕಾಂಗ್ರೆಸ್ ಸೇರ್ಪಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿರ್ದೇಶನದಂತೆ ಕುರಿಯ ವಲಯ ಕಾಂಗ್ರೆಸ್ ವತಿಯಿಂದ ಕುರಿಯ ಗ್ರಾಮದ ಒಂದನೇ ಮತ್ತು ಎರಡನೆಯ ವಾರ್ಡ್ ನ ಬೂತ್ ಸಮಿತಿಯ ಸಭೆ ಹನೀಫ್ ಸಾಹೇಬರ ಮನೆಯಲ್ಲಿ ಗ್ರಾಮದ ಉಸ್ತುವಾರಿ, ಹಿರಿಯ ಕಾಂಗ್ರೆಸ್ ನಾಯಕ ಉದ್ಯಮಿ ಶಿವರಾಮ ಆಳ್ವರವರ ನೇತೃತ್ವದಲ್ಲಿ ನಡೆಯಿತು. ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಚರ್ಚಿಸಲಾಯಿತು, ಆರ್ಯಾಪು ಗ್ರಾ. ಪಂ.ನ ಬಿಜೆಪಿ ಬೆಂಬಲಿತ ಮಾಜಿ ಸದಸ್ಯೆ ಜಯಂತಿಯವರು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಅವರನ್ನು ಹೂವಿನ ಹಾರ ಹಾಕಿ ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ನಂತರ ಬೂತ್ ಸಮಿತಿ ರಚನೆ ಮಾಡಲಾಯಿತು.

 

ಸಭೆಯಲ್ಲಿ ಕುರಿಯ ವಲಯ ಕಾಂಗ್ರೆಸ್ ಅಧ್ಯಕ್ಷ ಸನತ್ ರೈ ಏಲ್ನಾಡ್ ಗುತ್ತು, ಬ್ಲಾಕ್ ಪ್ರಧಾನ ಕಾರ್ಯ ದರ್ಶಿ ಅಮಲ ರಾಮಚಂದ್ರಭಟ್, ಬ್ಲಾಕ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜೆ, ಬ್ಲಾಕ್ ಮಹಿಳಾ ಸೇವಾದಳದ ಅಧ್ಯಕ್ಷೆ ನಳಿನಾಕ್ಷಿ ಮಲಾರ್, ಆರ್ಯಪು ಗ್ರಾ. ಪಂ ಸದಸ್ಯ ನೇಮಾಕ್ಷ ಸುವರ್ಣ, ಮಾಜಿ ಅಧ್ಯಕ್ಷೆ ಲಲಿತ, ಕಾರ್ಯಕರ್ತರಾದ ಶೀನಪ್ಪ ಬಳ್ಳಮಜಲು, ಇಬ್ರಾಹಿಂ ಅಜಲಾಡಿ, ಅಬ್ದುಲ್ಲಾ ಹಾಜಿ, ರಶೀದ್, ಸವಾದ್ ಕುರಿಯ, ರಿಯಾಝ್, ಸುಲೈಮಾನ್ ಅಜಲಾಡಿ, ಶಫಿಕ್, ಕುಂಞಿ ಮೇರ, ಅರ್ಫಾಝ್, ಫಾರೂಕ್, ಇಬ್ರಾಹಿಂ ಬಾತಿಷ, ಮುನಾಫ್ ಕುರಿಯ, ಸಾಬಿತ್, ನೌಫಲ್, ಸೀತಾರಾಮ ಗೌಡ, ಸಚ್ಚಿದಾನಂದ ರೈ ಏಳ್ನಾಡುಗುತ್ತು, ಸುಂದರ ಪೂಜಾರಿ ಮಾಪಲ, ಅಬೂಬಕ್ಕರ್ ಮುಸ್ಲಿಯಾರ್, ಇರ್ಷಾದ್, ಇಸ್ಮಾಯಿಲ್ ಅಜಲಾಡಿ, ರವೂಫ್ ಕುರಿಯ, ಬುಶ್ರಾ, ತಿರುಮಲೇಶ್ವರಿ, ಶಾಜೀನ್, ರುಕ್ಯ ಮತ್ತಿತರರು ಉಪಸ್ಥಿತರಿದ್ದರು.

ಬೂತ್ ಸಮಿತಿ: ಕುರಿಯ -1 ಅಧ್ಯಕ್ಷರಾಗಿ ಇಬ್ರಾಹಿಮ್ ಅಮ್ಮುಂಜೆ ಉಪಾಧ್ಯಕ್ಷರಾಗಿ ರಕ್ಷಿತ್ ಕಟ್ಟದಬೈಲು, ಮುಸ್ತಫ ಇಡಬೆಟ್ಟು, ಕಾರ್ಯದರ್ಶಿಯಾಗಿ ಗೋಪಾಲ ಗೌಡ ಕೋಶಾಧಿಕಾರಿಯಾಗಿ ನಾಸಿರ್ ಅವರನ್ನು ಆಯ್ಕೆ ಮಾಡಲಾಯಿತು.

ಬೂತ್ ಸಮಿತಿ: ಕುರಿಯ -2 ಅಧ್ಯಕ್ಷರಾಗಿ ಆಸಿಫ್ ಎ ಆರ್, ಉಪಾಧ್ಯರಾಗಿ ಸೂಫಿ ಕುರಿಯ ಕಾರ್ಯದರ್ಶಿಯಾಗಿ ಅಬ್ದುಲ್ ಕುಂಞಿ ಹಾಗೂ ಕೋಶಾಧಿಕಾರಿಯಾಗಿ ಯಾಧವ ಎಂ ಆಯ್ಕೆಯಾದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.