HomePage_Banner
HomePage_Banner
HomePage_Banner
HomePage_Banner

ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಕೊರೋನಾ ಹರಡಲು ಸಹಕಾರಿ – ಜನವಿರೋಧಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಅಂಗಡಿ ತೆರೆಯುವುದು ಕೊರೋನಾ ನಿಯಂತ್ರಣಕ್ಕೆ , ಆರ್ಥಿಕ ಚೇತನಕ್ಕೆ, ಜನರ ಜೀವನಕ್ಕೆ ದಾರಿ

ಯಾವುದೇ ಕಾನೂನು ಒಂದು ಊರಿಗೆ ಉತ್ತಮವಾದರೆ ಇನ್ನೊಂದು ಊರಿಗೆ ಮಾರಕವಾಗಬಹುದು. ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಪ್ರವಾಸಿಗರ ಕೇಂದ್ರವಾದ ಕೊಡಗು, ಮೈಸೂರು, ಬೆಂಗಳೂರುಗಳಿಗೆ ಪ್ರವಾಸಿಗರನ್ನು ತಡೆಯಲು ಸ್ವಲ್ಪ ಮಟ್ಟಿಗೆ ಕಾರಣವಾಗಿ ಕೊರೋನಾ ಹರಡುವುದನ್ನು ನಿಯಂತ್ರಿಸಲು ಸಹಕಾರಿಯಾಗಬಹುದು. ಆದರೆ ಪ್ರವಾಸಿ ತಾಣವಲ್ಲದ ಪುತ್ತೂರು, ಸುಳ್ಯ, ಬೆಳ್ತಂಗಡಿಗಳಲ್ಲಿ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಘೋಷಿಸಲ್ಪಟ್ಟಿದೆ. ಕೇರಳ ಗಡಿ ಪ್ರದೇಶ ಎಂದು ಹೇಳುವುದಾದರೆ ಕೇರಳದ ಗಡಿ ಪ್ರದೇಶವಾದರೂ, ಪ್ರವಾಸಿತಾಣವಾಗಿದ್ದರೂ ಮೈಸೂರು ಮತ್ತು ಚಾಮರಾಜ ನಗರಗಳಲ್ಲಿ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಇಲ್ಲ. ಎರಡು ದಿನ ಲಾಕ್‌ಡೌನ್ ಮಾಡಿದರೆ ಕೊರೋನಾ ವೈರಸ್ ಸಾಯುತ್ತದೆಯೇ? ಎಂದು ಕೇಳಿದರೆ ಅದಕ್ಕೆ ಉತ್ತರ ಇಲ್ಲ. ಜನ ಸಂದಣಿ ಕಡಿಮೆ ಮಾಡಲು ಎಂದು ಹೇಳುತ್ತಾರೆ. ಅದಕ್ಕಿಂತ ದೊಡ್ಡ ಹುಚ್ಚುತನವಿಲ್ಲ. ನಮ್ಮ ತಾಲೂಕುಗಳಲ್ಲಿ ಹೊರಗಿನಿಂದ ಬರುವವರು, ಪ್ರವಾಸಿಗರು ಅತ್ಯಂತ ಕಡಿಮೆ. ನಮ್ಮ ಊರಿನವರೇ ಸೋಮವಾರದಿಂದ ಆದಿತ್ಯವಾರದವರೆಗೆ ವ್ಯಾಪಾರಕ್ಕೆ ಬರುತ್ತಾರೆ. ವಾರ ಇಡೀ ಬರುವವರನ್ನು ಶನಿವಾರ ಆದಿತ್ಯವಾರ ಕರ್ಫ್ಯೂ ಲಾಕ್‌ಡೌನ್ ಮಾಡಿ ಬಾರದಂತೆ ಮಾಡಿದರೆ, ಶುಕ್ರವಾರ ಮತ್ತು ಸೋಮವಾರ ಅದೇ ಅಂಗಡಿಗಳಿಗೆ ಬರುವವರ ಜನ ಸಂದಣಿ ಜಾಸ್ತಿಯಾಗುತ್ತದೆ. ಅಂಗಡಿಯವರಿಗೂ ಒತ್ತಡ, ಜನರಿಗೂ ಸಮಯದ ಅಭಾವ ಜನ ಸಂದಣಿಗೆ ಕಾರಣವಾಗುತ್ತದೆ.

ಆ ಕಾನೂನು ಕುರುಡೇ? ಅಥವಾ ಅದನ್ನು ಆಚರಣೆ ತಂದವರು ಕುರುಡರೇ?
ದುಡಿಯುವ ಜನರಿಗೆ ಎರಡು ದಿವಸ ಸಂಪಾದನೆ ಇಲ್ಲದಂತೆ ಮಾಡುವ, ಅಂಗಡಿಗೆ ವ್ಯವಹಾರ ಕಡಿಮೆ ಮಾಡಿ ಆರ್ಥಿಕ ತೊಂದರೆ ಮಾಡುವ, ಜನ ಸಂದಣಿ ಉಂಟು ಮಾಡಿ ಕೊರೋನಾ ಹರಡಲು ಕಾರಣವಾಗಬಹುದಾದ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ (ಬಲಾತ್ಕಾರದ ಬಂದ್) ನಮ್ಮ ತಾಲೂಕಿಗೆ ಬೇಕೇ? ಎಂಬ ಪ್ರಶ್ನೆಗೆ ಸಾರ್ವಜನಿಕರು, ವ್ಯಾಪಾರಿಗಳು ಬೇಡ ಎಂದು ವ್ಯಾಪಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಿದ್ದರೂ ಅದರ ಆಚರಣೆ ಇಲ್ಲಿ ಯಾಕಿದೆ ಎಂಬುವುದಕ್ಕೆ ನಮ್ಮ ಶಾಸಕರು, ಸಂಸದರು, ಸರಕಾರ ಉತ್ತರ ನೀಡಬೇಕು. ಆ ಕಾನೂನು ಕುರುಡೇ? ಅಥವಾ ಅದನ್ನು ಆಚರಣೆ ತಂದವರು ಕುರುಡರೇ? ಎಂದರೆ ಅದು ನಮ್ಮ ಶಾಸಕರು, ಸಂಸದರು ತೆಗೆದುಕೊಂಡ ತೀರ್ಮಾನವಲ್ಲ. ಡೆಲ್ಲಿಯಲ್ಲಿ, ಬೆಂಗಳೂರಿನಲ್ಲಿ ಕೂತವರು ಅಲ್ಲಿಂದ ದುರ್ಭಿನ್‌ನಿಂದ ನೋಡಿ ಇಲ್ಲಿಯ ವಿಚಾರಗಳನ್ನು ತಿಳಿಯದೆ ತೆಗೆದುಕೊಂಡ ಕುರುಡು ತೀರ್ಮಾನ ಎಂದೇ ಹೇಳಬೇಕು. ಆ ಕಾರಣಕ್ಕಾಗಿಯೇ ಕೆಲವು ವರ್ಷಗಳಿಂದ ನಮ್ಮ ಜನಪ್ರತಿನಿಧಿಗಳಾದ ಶಾಸಕರು, ಸಂಸದರು ರಾಜ್ಯ ಮತ್ತು ಕೇಂದ್ರದಲ್ಲಿ ನಮ್ಮ ಹಿತ ಕಾಪಾಡಬೇಕು. ಇಲ್ಲಿ ನಮ್ಮ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಅವರೇ ಶ್ರೇಷ್ಠರು ಮತ್ತು ಅದು ಅವರ ಜವಾಬ್ದಾರಿಯೂ ಹೌದು ಎಂದು ಹೇಳುತ್ತಲೇ ಬಂದಿದ್ದೇನೆ. ಅದನ್ನು ಅವರು ನಂಬಬೇಕು ಮತ್ತು ಆಚರಣೆಗೆ ತರಬೇಕು ಎಂಬುವುದೇ ನನ್ನ ಮತ್ತು ಜನರ ಆಶಯ.

ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕೇಸು ಆಗಬಹುದು:
ಪುತ್ತೂರು, ಸುಳ್ಯ, ಬೆಳ್ತಂಗಡಿ ತಾಲೂಕಿನ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ರದ್ದು ಮಾಡುವಂತೆ ವರ್ತಕರು/ಸಾರ್ವಜನಿಕರು ಶಾಸಕರಿಗೆ ಮತ್ತು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಬದುಕಿಗಾಗಿ ಅಂಗಡಿ ತೆರೆಯುತ್ತೇವೆ ಎಂದು ಹೇಳಿಕೊಂಡಿದ್ದಾರೆ. ನಾವು ಅಂಗಡಿ ತೆರೆಯುವುದರಿಂದ ಜನ ಸಂದಣಿ ಕಡಿಮೆಯಾಗಿ ಕೊರೋನಾ ಹರಡುವುದಿಲ್ಲ. ನಾವು ಕೊರೋನಾ ನಿಯಮಾವಳಿಗಳನ್ನು ಪಾಲಿಸಿ ಜಾಗೃತೆ ವಹಿಸುತ್ತೇವೆ. ರಾಜಕೀಯ ನಮ್ಮದಲ್ಲ. ಯಾರ ವಿರುದ್ಧವೂ ಹೋರಾಟವಲ್ಲ. ಜೀವನಕ್ಕಾಗಿ ಹೋರಾಟ ಎಂದಿದ್ದಾರೆ. ಆದರೆ ಅಂಗಡಿ ತೆರೆದರೆ ವ್ಯವಹಾರ ಮಾಡಿದರೆ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಕೇಸು ಆಗುತ್ತದೆ, ದಂಡ ಬೀಳುತ್ತದೆ, ಬಂಧನವೂ ಆಗಬಹುದು ಎಂದು ಹೇಳಿ ಹೆದರಿಸುವವರು ಇದ್ದಾರೆ. ತಾಲೂಕಿನ ಎಲ್ಲಾ ವ್ಯಾಪಾರಿಗಳು, ವಾಹನ ಚಾಲಕರು ಒಗ್ಗಟ್ಟಿನಿಂದ ಇದ್ದರೆ ಕೇಸನ್ನು ಎದುರಿಸಬಹುದು, ಶಾಸಕರು ಬೆಂಬಲಕ್ಕೆ ನಿಲ್ಲುತ್ತಾರೆ ಆದುದರಿಂದ ಏನೂ ತೊಂದರೆಯಾಗಲಾರದು ಎಂಬ ಅಭಿಪ್ರಾಯವೂ ಅವರಲ್ಲಿದೆ. ಏನೇ ಆದರೂ ಎದುರಿಸುತ್ತೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ. ಆದರೂ ಎಷ್ಟು ಜನ ತಮ್ಮ ಹಿಂದೆ ನಿಲ್ಲುತ್ತಾರೆ ಎಂಬ ಪ್ರಶ್ನೆ ಅವರಲ್ಲಿಯೂ ಇದೆ.

ಯಾವುದೇ ಕಾನೂನು ಜನವಿರೋಧಿಯಾದಾಗ, ಅದನ್ನು ವಿರೋಧಿಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ:
ಏನೇ ಆದರೂ ಇಲ್ಲಿಯ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ ಉಲ್ಲಂಘನೆ ಮಾಡಿ ಅಂಗಡಿ ತೆರೆದರೆ ಇಲ್ಲಿಯ ಕುರುಡು ಕಾನೂನಿಗೆ ವಿರೋಧವಾಗಬಹುದು. ಆದರೆ ಕಾನೂನಿನ ಮೂಲ ಉದ್ಧೇಶವಾದ ಜನ ಸಂದಣಿಯನ್ನು ಕಡಿಮೆ ಮಾಡಿ ಕೊರೋನಾ ಹರಡದಂತೆ ಮಾಡಲು ಕರ್ಫ್ಯೂ ಲಾಕ್‌ಡೌನ್ ಸರಿಯಾದ ದಾರಿಯಲ್ಲ. ಅದನ್ನು ವಿರೋಧಿಸಿ ವಾರವಿಡೀ ಅಂಗಡಿ ತೆರೆಯುವುದೇ ಉತ್ತಮ ಕೆಲಸ. ಅದರಿಂದ ಜನರ ಬದುಕು ಕೂಡ ಉತ್ತಮವಾಗುತ್ತದೆ ಎಂದು ನಂಬಿದವ ನಾನು. ಯಾವುದೇ ಕಾನೂನು ಜನವಿರೋಧಿಯಾದಾಗ, ಅದನ್ನು ಆಚರಣೆಗೆ ತಂದವರಿಗೆ ಅದು ಅರ್ಥವಾಗದೇ ಇದ್ದಾಗ ಅದನ್ನು ವಿರೋಧಿಸುವುದು ಪ್ರಜಾಪ್ರಭುತ್ವದಲ್ಲಿ ನಮ್ಮ ಕರ್ತವ್ಯ ಎಂದು ನಂಬಿದ್ದೇನೆ. ಆದುದರಿಂದ ಈ ವೀಕೆಂಡ್ ಕರ್ಫ್ಯೂ ಲಾಕ್‌ಡೌನ್ (ಬಲಾತ್ಕಾರದ ಬಂದ್)ನ್ನು ವಿರೋಧಿಸಿ ಕೊರೋನಾ ನಿಯಾಮಾವಳಿಯಂತೆ ಅಂಗಡಿ ತೆರೆದು ವ್ಯವಹರಿಸುವವರಿಗೆ ಹಿಂದಿನಿಂದ ಬೆಂಬಲಿಸುತ್ತಾ ಬಂದಿದ್ದೇನೆ. ನಾನು ಅದರಲ್ಲಿ ರಾಜಕೀಯ ತರಲು ಇಚ್ಛಿಸುವುದಿಲ್ಲ. ನಾನು ಇಲ್ಲಿಯ ಯಾವುದೇ ಕ್ಷೇತ್ರದ ವಿಧಾನ ಸಭಾ ಅಭ್ಯರ್ಥಿಯಲ್ಲ. ಎಂ.ಪಿ ಕ್ಷೇತ್ರಕ್ಕೂ ಅಭ್ಯರ್ಥಿಯಲ್ಲ. ಜನರ ಅಭಿಪ್ರಾಯಗಳಿಗೆ ಬೆಂಬಲ ಕೊಡುವುದು ಅವರ ಕಷ್ಟಗಳ ಸಂದರ್ಭದಲ್ಲಿ ಅವರ ಕಡೆ ನಿಲ್ಲುವುದು ನಮ್ಮ ಸುದ್ದಿ ಪತ್ರಿಕೆಯ ಕರ್ತವ್ಯ ಎಂದು ಅದನ್ನು ಮಾಡುತ್ತಿದ್ದೇನೆ. ಕೊನೆಯಲ್ಲಿ ನಮ್ಮ ಈ ಮೂರು ತಾಲೂಕಿನಲ್ಲಿವೀಕೆಂಡ್ ಕರ್ಫ್ಯೂ ಲಾಕ್‌ಡೌನ್ (ಬಲಾತ್ಕಾರದ ಬಂದ್) ಮಾಡುವುದು ಜನವಿರೋಧಿ ಕೆಲಸ, ಅದನ್ನು ಎದುರಿಸುವವರು ಜನಪರ ಹೋರಾಟಗಾರರು ಎಂದು ಖಂಡಿತವಾಗಿ ಘೋಷಿಸಲು ಇಚ್ಛಿಸುತ್ತೇನೆ.

ಮಂತ್ರಿಗಳ, ನಾಯಕರುಗಳ ಕಾರ್ಯಕ್ರಮಕ್ಕೆ ರತ್ನಗಂಬಳಿ, ನಮಗೆ ಕೇಸು-ಇದ್ಯಾವ ನ್ಯಾಯ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.