HomePage_Banner
HomePage_Banner
HomePage_Banner
HomePage_Banner

ವಾರಾಂತ್ಯ ಕರ್ಫ್ಯೂ ಕಡಬ ಕಾಂಗ್ರೆಸ್ ಖಂಡನೆ: ಹಿಂತೆಗೆಯುವಂತೆ ಅಗ್ರಹ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಡಬ: ಅನಗತ್ಯ ವಾರಾಂತ್ಯದ ವೀಕೆಂಡ್ ಕರ್ಫ್ಯೂ ಬಗ್ಗೆ ಸರಕಾರ ಹಾಗೂ ಜಿಲ್ಲಾಧಿಕಾರಿಗಳ ದ್ವಂಧ ನೀತಿಯಿಂದಾಗಿ ಬಡ ಜನರಿಗೆ ಸಂಕಷ್ಟ ತಲೆದೋರಿದೆ, ಇದೆಲ್ಲಾ ಜನಸಾಮಾನ್ಯರಿಗೆ ಶಿಕ್ಷೆಯಾಗಿದೆ ಇದು ಖಂಡನೀಯ ಎಂದು ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು.
ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವೀಕೆಂಡ್ ಕರ್ಫ್ಯೂನಿಂದ ಜಿಲ್ಲೆಯ ಜನ ತತ್ತರಿಸಿದ್ದು, ಅನಗತ್ಯವಾಗಿ ಬೀದಿ ಬದಿ ವ್ಯಾಪಾರಿಗಳು, ಇತರ ವ್ಯಾಪಾರಸ್ಥರು, ಅಟೋ ಹಾಗೂ ಇನ್ನಿತರ ವಾಹನಗಳಿಗೆ ನಿರ್ಭಂಧ ಹೇರಿ ಬಡ ಜನರ ಜೀವನದಲ್ಲಿ ರಾಜ್ಯ ಸರಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು. ವ್ಯಾಪಾರಸ್ಥರು ಮಾಡಿರುವ ಮನೆ ಸಾಲ, ಅಂಗಡಿ ಸಾಲ ಮತ್ತು ಬಾಡಿಗೆ, ಇಎಮ್‌ಐ ಕಟ್ಟಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾವ ಕರ್ಮಕ್ಕಾಗಿ ಈ ಕರ್ಫ್ಯೂ ವಿಧಿಸಿದ್ದಾರೋ ಗೊತ್ತಿಲ್ಲ, ಇದರಿಂದ ಮನೆ ಖರ್ಚು ನಿಭಾಯಿಸಲು ಸಾಧ್ಯವಿಲ್ಲದಂತಾಗಿದೆ. ದೇಶದ ಹಿತಕ್ಕಾಗಿ ಸಂಪೂರ್ಣ ಲಾಕ್‌ಡೌನ್ ಮಾಡುವಾಗ ನಾವು ಕೂಡಾ ಸಹಕರಿಸಿದ್ದೇವೆ, ಆದರೆ ಈ ರೀತಿಯ ಅವೈಜ್ಞಾನಿಕ ಲಾಕ್ ಡೌನ್ ಅಥವಾ ವೀಕೆಂಡ್ ಕರ್ಫ್ಯೂಗೆ ನಮ್ಮ ಬೆಂಬಲವಿಲ್ಲ, ಆದ್ದರಿಂದ ತಕ್ಷಣ ಜಿಲ್ಲಾಧಿಕಾರಿಗಳ ವಿಸ್ತರಣೆ ಆದೇಶಕ್ಕೆ ತಡೆ ಹಾಕಬೇಕೆಂದು ಅಗ್ರಹಿಸುತ್ತಿದೇವೆ, ಈ ಸಂದರ್ಭದಲ್ಲಿ ಯಾವುದೇ ವ್ಯಕ್ತಿ ಮೃತಪಟ್ಟರು ಕೂಲಂಕುಷವಾಗಿ ಪರೀಕ್ಷೆಗೆ ಒಳಪಡಿಸದೆ ಕೋವಿಡ್‌ನಿಂದ ಮೃತಪಟ್ಟಿದ್ದು ಎಂದು ಹೇಳುವುದು ಸರಿಯಾದ ಕ್ರಮವಲ್ಲ, ಕೋವಿಡ್‌ನಿಂದ ಮೃತಪಟ್ಟ ಕುಟುಂಬಗಳಿಗೆ ಎ.ಪಿ.ಎಲ್. ಬಿಪಿಎಲ್ ಎಂದು ನೋಡದೆ ಕನಿಷ್ಠ ಐದು ಲಕ್ಷ ರೂ ಪರಿಹಾರ ನೀಡಬೇಕು, ದೇಶದ ಜನರನ್ನು ಭಾವನಾತ್ಮಕವಾಗಿ ಸೆಳೆದು ಅಧಿಕಾರ ಹಿಡಿದಿರುವ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಅಚ್ಚೇದಿನ್ ತರುತ್ತಿದ್ದಾರೆ ಇವರ ಆಟ ಇನ್ನು ನಡೆಯುವುದಿಲ್ಲ ಎಂದು ಸುಧೀರ್ ಕುಮಾರ್ ಶೆಟ್ಟಿ ಹೇಳಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಮಾತನಾಡಿ ಕಡಬ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಕ್ರಮ ಸಕ್ರಮ ಹಾಗೂ 94 ಸಿ ಯಲ್ಲಿ ಜಮೀನು ಮಂಜೂರು ಮಾಡಲು ಅವಕಾಶವಿಲ್ಲ ಎನ್ನುವ ನಿಯಮವಿದೆ, ಇದು ಸರಿಯಲ್ಲ, ಈ ಹಿಂದೆ ನೀಡಿದ ಅಕ್ರಮ ಸಕ್ರಮ, 94 ಸಿ ಅರ್ಜಿಯನ್ನು ವಿಲೇವಾರಿ ಮಾಡಲು ಕ್ರಮ ಕೈಗೊಳ್ಲಬೇಕು, ನೂತನ ಅರ್ಜಿಗೂ ಅವಕಾಶ ನೀಡಬೇಕು, ಮಾತ್ರವಲ್ಲ ಅಕ್ರಮ ಸಕ್ರಮದ ಕುಮ್ಕಿ ಹಕ್ಕು ಸಮಸ್ಯೆ, ಭಾಗಶ ಅರಣ್ಯ ಸಮಸ್ಯೆಯನ್ನು ತ್ವರಿತವಾಗಿ ಬಗೆಹರಿಸುವಲ್ಲಿ ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದರು. ಪತ್ರಿಕಾ ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ ಬಳ್ಳೇರಿ, ಅಲ್ಪಸಂಖ್ಯಾತ ವಿಭಾಗದ ರಾಜ್ಯ ಸಂಯೋಜಕ ಎ.ಎಸ್.ಶರೀಫ್, ಕಡಬ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಟಿ.ಎಂ.ಮ್ಯಾಥ್ಯೂ, ಕಡಬ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ವಿಭಾಗ ಅಧ್ಯಕ್ಷ ಅಶ್ರಫ್ ಶೇಡಿಗುಂಡಿ, ಕಡಬ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಎಂ.ಹನೀಫ್ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.