HomePage_Banner
HomePage_Banner
HomePage_Banner
HomePage_Banner

ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕರ, ಸೇವಾದೀಕ್ಷಿತರ ಸಮಾವೇಶ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ದೇಶ ಕಟ್ಟುವ, ಸಮಾಜ ಕಟ್ಟುವ ಕೈಗಳು ಶ್ರೇಷ್ಠವಾದದ್ದು: ಒಡಿಯೂರು ಶ್ರೀ
ವಿಟ್ಲ: ಯಾವುದೇ ದೊಡ್ಡ ರೋಗಗಳು ಬಂದರೂ ಅದನ್ನು ನಿವಾರಣೆ ಮಾಡುವ ಶಕ್ತಿ ನಮ್ಮ ದೇಶ ಭಾರತಕ್ಕಿದೆ. ನಂಬಿಕೆ, ವಿಶ್ವಾಸದಿಂದ ಬದುಕುವವರು ಭಾರತೀಯರು. ನಂಬಿಕೆ ದೃಢವಾಗಿದ್ದಾಗಲೇ ನಮಗೆ ಶ್ರೀಕೃಷ್ಣನ ಅನುಗ್ರಹವೂ ಲಭಿಸುತ್ತದೆ. ಜನ್ಮದಿನಾಚರಣೆಗಳು ಕೇವಲ ಆಡಂಬರಕ್ಕೆ ಸೀಮಿತವಾಗದೆ ಶ್ರೀಕೃಷ್ಣನ ಆದರ್ಶಗಳನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು ಹೇಳಿದರು. ಅವರು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವ ಜ್ಞಾನಮಂದಿರದಲ್ಲಿ ಜರಗಿದ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಂಯೋಜಕರ ಹಾಗೂ ಸೇವಾದೀಕ್ಷಿತರ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.

ರಾಮಾಯಣ ಮಹಾಭಾರತವನ್ನು ಓದಿದರೆ ನಾವು ಇಡೀ ಭಾರತವನ್ನೇ ಪರ್ಯಟನೆ ಮಾಡಿದಂತೆ. ನಮ್ಮ ಮಕ್ಕಳ ಹುಟ್ಟುಹಬ್ಬವನ್ನು ಆಚರಿಸುವಾಗಲೂ ನಮ್ಮ ಸಂಸ್ಕೃತಿಯನ್ನು ಮರೆಯಬಾರದು. ಸಾತ್ವಿಕತೆಯ ಆಚಾರಣೆಯಿಂದ ಅನುಸರಣೀಯವಾಗಬೇಕು. ದೇಶ ಕಟ್ಟುವ, ಸಮಾಜ ಕಟ್ಟುವ ಕೈಗಳು ಶ್ರೇಷ್ಠವಾದದ್ದು. ಒಂದು ಸಂಸ್ಥೆ ಎಂದರೆ ಅದು ಶರೀರ. ಸಂಸ್ಥೆಯ ಒಡಲೇ ಕಾರ್ಯಕರ್ತರು. ಆ ಮೂಲಕ ಸಮಾಜಕ್ಕೆ ಸೇವೆ ಕೊಡಲು ಸಾಧ್ಯ. ಸಮರ್ಪಣಾಭಾವದ ಸೇವೆಯಿಂದ ಸಾರ್ಥಕತೆ ಇದೆ. ಮಾನವೀಯ ಮೌಲ್ಯವನ್ನು ಬೆಳೆಸುವ ಜೊತೆಗೆ ಕರ್ತವ್ಯ ಎಂಬಂತೆ ಸೇವೆ ನೀಡಿದಾಗ ಅದೊಂದು ಆದರ್ಶ ಸಂಸ್ಥೆಯಾಗಲು ಸಾಧ್ಯ. ಜಾಗ್ರತೆ ಮತ್ತು ಸೂಕ್ಷ್ಮತೆಯಿಂದ ಬದುಕು ಕಟ್ಟಬೇಕು. ಸತತ ಪ್ರಯತ್ನದಿಂದ ಯಶಸ್ಸು ನಮ್ಮದಾಗುತ್ತದೆ. ನಮ್ಮ ಜೀವನದ ಅಮೂಲ್ಯವಾದ ಸಂಪತ್ತೆಂದರೆ ಅದು ಸಂಸ್ಕಾರ. ಶಿಸ್ತು, ಸಂಯಮವನ್ನಿರಿಸಿಕೊಂಡು ಸಂಸ್ಥೆಗೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸಿದಾಗ ಉದ್ದೇಶಿತ ಸಂಕಲ್ಪ ಸಾಕಾರವಾಗುತ್ತದೆ. ಅದಕ್ಕೆ ಪೂರಕವಾಗಿ ತಮ್ಮೆಲ್ಲರ ಶ್ರಮ ನಿರಂತರವಾಗಿರಲಿ. ಕೊರೋನಾ ಮಹಾಮಾರಿಯಿಂದಾಗಿ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸಿದ ತಮಗೆಲ್ಲರಿಗೂ ಅಭಿನಂದನೆಗಳು ಎಂದರು.

ಈ ಸಂದರ್ಭ ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರ, ಉಡುಪಿ ಘಟಕದ ಕಾರ್ಯದರ್ಶಿ  ಯಶೋದಾ ಕೇಶವ ರವರ ಸಂಪಾದಕತ್ವದ ತುಳುನಾಡ ಧ್ವನಿ ತುಳು ವೆಬ್ ಸೈಟ್ ಅನ್ನು ಶ್ರೀಗಳು ಲೋಕಾರ್ಪಣೆ ಗೊಳಿಸಿದರು. ಸಾಧ್ವಿ ಶ್ರೀ ಮಾತಾನಂದಮಯೀ, ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎ. ಸುರೇಶ್ ರೈ, ಉಪಾಧ್ಯಕ್ಷ  ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ನಿರ್ದೇಶಕ  ಕಿರಣ್ ಯು., ಯೋಜನೆಯ ಉಡುಪಿ ಜಿಲ್ಲಾ ಅಧ್ಯಕ್ಷ  ಪ್ರಭಾಕರ ಶೆಟ್ಟಿ, ಒಡಿಯೂರ್‍ದ ತುಳುಕೂಟದ ಅಧ್ಯಕ್ಷ  ಯಶವಂತ ವಿಟ್ಲ ಮೊದಲಾದವರು‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬೆಳ್ತಂಗಡಿ ತಾಲೂಕು ವಿಸ್ತರಣಾಧಿಕಾರಿ  ಯಶೋಧರ ಸಾಲ್ಯಾನ್ ಸ್ವಾಗತಿಸಿ, ಸೇವಾದೀಕ್ಷಿತ  ರಾಧಾಕೃಷ್ಣ ಕೆ. ಕನ್ಯಾನ ವಂದಿಸಿದರು. ಸಂಯೋಜಕಿ  ಲೀಲಾ ಪಾದೆಕಲ್ಲು ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.