HomePage_Banner
HomePage_Banner
HomePage_Banner
HomePage_Banner

ನಗರಸಭೆ ವಾರ್ಡ್‌ಗಳಲ್ಲಿ ಎರಡೆರಡು ಬಾರಿ ಲಸಿಕೆ ಕಾರ್ಯಾಚರಣೆ ಮಾಡಲಿದ್ದೇವೆ: ಸಾಲ್ಮರ, ಹಾರಾಡಿ, ಪಡೀಲ್ ಕೋವಿಡ್ ಲಸಿಕೆ ಕಾರ್ಯಕ್ರಮದಲ್ಲಿ ಕೆ.ಜೀವಂಧರ್ ಜೈನ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೊರೋನಾ ಮುಕ್ತ ಕನಸಿದೆಯೋ ಅದಕ್ಕೆ ಪೂರಕವಾಗಿ ನಗರಸಭೆ ಎಲ್ಲಾ ಸದಸ್ಯರ ಮುತುವರ್ಜಿಯಿಂದ ಎಲ್ಲಾ ವಾರ್ಡ್‌ಗಳಲ್ಲಿ ವ್ಯಾಕ್ಸಿನ್ ಕಾರ್ಯಕ್ರಮ ನಡೆಯುತ್ತಿದ್ದು ಎರಡೆರಡು ಬಾರಿ ಲಸಿಕಾ ಕಾರ್ಯಕ್ರಮ ಮಾಡಲಿದ್ದೇವೆ ಎಂದು ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಹೇಳಿದರು.

ಪುತ್ತೂರು ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ನಡೆಯುತ್ತಿದ್ದು, ಸೆ.3ರಂದು ಸಾಲ್ಮರ, ಪಡೀಲ್, ಹಾರಾಡಿ ಸೇರಿದಂತೆ ವಾರ್ಡ್ 8ಕ್ಕೆ ಸಂಬಂಧಿಸಿ ಸಾಲ್ಮರ ಕೊಟೇಚಾ ಹಾಲ್‌ನಲ್ಲಿ ನಡೆದ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಶದಲ್ಲಿ 65 ಸಾವಿರ ಕೋಟಿ ಕೋವಿಡ್ ಲಸಿಕೆಯನ್ನು ಪ್ರಧಾನಿಯವರು ಈಗಾಗಲೇ ಕೊಡಿಸಿದ್ದಾರೆ. ಅದಕ್ಕೆ ತಕ್ಕಂತೆ ನಗರಸಭೆಯಲ್ಲೂ ಶೇ.100 ಲಸಿಕೆ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು. ನಗರಸಭಾ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಸುಂದರ ಪೂಜಾರಿ ಬಡಾವು, ಪದ್ಮನಾಭ ನಾಯ್ಕ್, ಪ್ರೇಮ್ ಕುಮಾರ್, ಮಾಜಿ ಸದಸ್ಯ ಚಂದ್ರಸಿಂಗ್, ಬಿಜೆಪಿ ಮಹಿಳಾ ಮೋರ್ಚಾದ ಅರ್ಪಣಾ, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆ, ಅಂಗನವಾಡಿ ಕಾರ್ಯಕರ್ತೆ, ನಗರಸಭೆ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.