HomePage_Banner
HomePage_Banner
HomePage_Banner
HomePage_Banner

ವಿವೇಕಾನಂದ ಮಹಾವಿದ್ಯಾಲಯದಲ್ಲಿ ರಾಷ್ಟ್ರಮಟ್ಟದ ವಿಶೇಷ ಉಪನ್ಯಾಸ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಹೂಡಿಕೆಯಲ್ಲಿ ಗುರಿ ನಿರ್ಧಾರ ಮಾಡುವುದು ಪ್ರಾಮುಖ್ಯವಾದದ್ದು : ಮಿಲನ್ ದೇಸಾಯಿ

ಪುತ್ತೂರು: ಇತ್ತೀಚಿನ ದಿನಗಳಲ್ಲಿ ಹೂಡಿಕೆಗೆ ತುಂಬಾ ಅವಕಾಶಗಳಿವೆ, ಅದರಲ್ಲಿ ಪ್ರಮುಖವಾಗಿ ನಾವು ಬ್ಯಾಂಕ್ ಎಫ್ ಡಿ, ಬಾಂಡ್, ಗೋಲ್ಡ್, ಸ್ಟಾಕ್ಸ್, ಮ್ಯೂಚುಯಲ್ ಫಂಡ್, ರಿಯಲ್ ಎಸ್ಟೇಟ್, ಪಿಪಿಎಫ್, ಎಕ್ಸ್ಚೇಂಜ್ ಟ್ರೇಡರ್ ಫಂಡ್ಸ್, ನ್ಯಾಷನಲ್ ಪೆನ್ಶನ್ ಸ್ಕೀಮ್ ಪ್ರಮುಖವಾದವು, ಅದರಲ್ಲಿಯೂ SWOT ವಿಶ್ಲೇಷನೆ ಮಾಡುವುದರ ಮೂಲಕ ಸೂಕ್ತವಾದ ಇಕ್ವಿಟಿ ಶೇರ್ ಆಯ್ಕೆ ಮಾಡಿ ನಿರಂತರವಾಗಿ ಹೂಡಿಕೆ ಮಾಡುವುದರಿಂದ ಅತ್ಯಧಿಕ ಲಾಭವನ್ನು ಗಳಿಸಬಹುದು. ಇದರೊಂದಿಗೆ ದೀರ್ಘಾವಧಿಯಲ್ಲಿ, ಹೂಡಿಕೆಯಲ್ಲಿ ಯಾವ ಸೂತ್ರಗಳನ್ನು ಅನುಸರಿಸುವುದರಿಂದ ಯಶಸ್ಸು ಕಾಣಬಹುದು ಎಂದು ಬಾಂಬೆಯ ಏಂಜಲ್ ಒನ್ ಸ್ಟಾಕ್ ಬ್ರೋಕಿಂಗ್ ಹೌಸ್‌ನ ಹಣಕಾಸು ವಿಶ್ಲೇಷಕ, ಮಿಲನ್ ದೇಸಾಯಿ ಹೇಳಿದರು. ಅವರು ವಿವೇಕಾನಂದ ಮಹಾವಿದ್ಯಾಲಯದ, ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗ, ವಾಣಿಜ್ಯ ಸಂಘ ಮತ್ತು ವ್ಯವಹಾರ ನಿರ್ವಾಹನ ಸಂಘ, ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ “wealth out of stock market? – myth or fact” ಎಂಬ ವಿಷಯದ ಬಗ್ಗೆ ಆಯೋಜಿಸಲಾದ ರಾಷ್ಟ್ರಮಟ್ಟದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲಿ ತಮಗೆ ಸಿಗುವ ಖರ್ಚಿನ ಹಣದಲ್ಲಿ ಉಳಿಸಿದ ಹಣವನ್ನು ಮೌಲ್ಯಯುತವಾಗಿ ಪರಿವರ್ತಿಸ ಬೇಕು. ಮುಂದೆ ವೃತ್ತಿಪರ ಜೀವನದಲ್ಲಿ ತಮಗೆ ಸಿಗುವ ಆದಾಯವನ್ನು ಇನ್ನೂ ಹೆಚ್ಚಿಸಲು ಸಾಧ್ಯವಾಗುವುದರಿಂದ ಒಳ್ಳೆಯ ಜೀವನವನ್ನು ನಡೆಸಬಹುದು. ವಿದ್ಯಾರ್ಥಿಗಳು ಶೇರು ಮಾರುಕಟ್ಟೆಯನ್ನು ಹೂಡಿಕೆಯ ಉದ್ದೇಶಕ್ಕೆ ಮಾತ್ರ ಉಪಯೋಗಿಸದೆ, ಉದ್ಯೋಗದ ಅವಕಾಶಗಳ ಉದ್ದೇಶಕ್ಕೆ ಬಳಸಬಹುದು ಎಂದು ನುಡಿದರು. ಕಾಲೇಜಿನ ವಾಣಿಜ್ಯಶಾಸ್ತ್ರ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು ಭಾಗವಹಿಸಿದ್ದರು. ಇಲ್ಲಿನ ವಿವೇಕಾನಂದ ಕಾಲೇಜು, ಮತ್ತು ಪೆರ್ಲದ ನಳಂದ ಕಾಲೇಜು, ಇದರ ಬಿಕಾಂ ಮತ್ತು ಬಿಬಿಎ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಉಪನ್ಯಾಸಕಿ ಅಕ್ಷತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.