HomePage_Banner
HomePage_Banner
HomePage_Banner
HomePage_Banner

ಸೆ.5 ರಂದು ಪುತ್ತೂರು ಭರವಸೆ ಶಿಕ್ಷಕರ ಬಳಗದ ಶೈಕ್ಷಣಿಕ ಕೃತಿ ಗುರುತ್ವ ನನ್ನ ಕನಸಿನ ತರಗತಿ ಬಿಡುಗಡೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •  ಡಾ.ಎನ್. ಸುಕುಮಾರ ಗೌಡ ಅವರ ಮಾರ್ಗದರ್ಶನ, ಬಿಇಒ ಲೋಕೇಶ್‌ರವರ ಆಶಯ

 

ಪುತ್ತೂರು : ಪುತ್ತೂರಿನ ಶಿಕ್ಷಕರ ನಾಟಕ ತಂಡ ‘ಭರವಸೆ ಶಿಕ್ಷಕರ ಬಳಗ’ ಇವರ ಚೊಚ್ಚಲ ಶೈಕ್ಷಣಿಕ ಕೃತಿ ಗುರುತ್ವ ನನ್ನ ಕನಸಿನ ತರಗತಿ ಸೆ.5 ರಂದು ಪುತ್ತೂರು ಪುರಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ2021 ರ ಸುಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಪುತ್ತೂರಿನ ಹಿರಿಯ ಶಿಕ್ಷಣ ಚಿಂತಕ ಡಾ.ಎನ್. ಸುಕುಮಾರ ಗೌಡ ಇವರ ಮಾರ್ಗದರ್ಶನದಲ್ಲಿ ಮೂಡಿಬಂದ ಈ ಕೃತಿ ಪುತ್ತೂರಿನ ಕ್ರಿಯಾತ್ಮಕ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಇವರ ಪ್ರೋತ್ಸಾಹ ಹಾಗೂ ಒತ್ತಾಸೆಯಲ್ಲಿ ಸಿದ್ಧಗೊಂಡಿದೆ. ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ಶಿಕ್ಷಕ ಐತ್ತಪ್ಪ ನಾಯ್ಕ್ ಇವರ ಮೊದಲ ಓದಿನ ಅನುಭವ, ವರ್ಲಿ ಕಲಾವಿದ ಕೊಂಬೆಟ್ಟು ಶಾಲಾ ಕಲಾ ಶಿಕ್ಷಕ ಜಗನ್ನಾಥ್ ಅರಿಯಡ್ಕ ಇವರ ಆಕರ್ಷಕ ಮುಖಪುಟ ವಿನ್ಯಾಸ, ಪುತ್ತೂರಿನ ಹಿರಿಯ ಛಾಯಾಚಿತ್ರ ಕಲಾವಿದ ಪ್ರಭು ಪುತ್ತೂರು ಇವರ ಛಾಯಾಚಿತ್ರಗಳನ್ನು ಒಳಗೊಂಡಿರುವ ಈ ಕೃತಿಯನ್ನು ಪುತ್ತೂರಿನ ಖ್ಯಾತ ಪ್ರಕಾಶನ ಸಂಸ್ಥೆ ‘ಜ್ಞಾನಗಂಗಾ ಪುಸ್ತಕ ಮಳಿಗೆ’ ಪ್ರಕಟಿಸುತ್ತಿದೆ.

ಗೋಳಿತೊಟ್ಟು ಶಾಲಾ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಇವರ “ಕಲಿಸುವುದರಿಂದ ಮಕ್ಕಳು ಕಡಿಮೆ ಕಲಿಯುತ್ತಾರೆ”, ಓಂತ್ರಡ್ಕ ಶಾಲಾ ಶಿಕ್ಷಕ ದಿಲೀಪ್ ಕುಮಾರ್ ಸಂಪಡ್ಕ ಇವರ “ಅವಕಾಶಗಳೇ ಬೆಳೆಸುವುದು ಮಕ್ಕಳನ್ನು”, ಪುಣ್ಚಪ್ಪಾಡಿ ಶಾಲಾ ಶಿಕ್ಷಕಿ ರಶ್ಮಿತಾ ನರಿಮೊಗರು ಇವರ “ಬೇಡ ಮಗುವನ್ನು ಒಂಟಿಯಾಗಿಸುವ ತವಕ”, ಶಾಂತಿನಗರ ಶಾಲಾ ಶಿಕ್ಷಕ ಮಂಜುನಾಥ ಮಣಕವಾಡ ಇವರ “ಅಂಕಗಳಿಗಿಂತ ಅನುಭವಗಳೇ ಮುಖ್ಯ”, ಸರ್ವೆ ಶಾಲಾ ಶಿಕ್ಷಕಿ ಜ್ಯೋತಿ ಚಿಕ್ಕಮಗಳೂರು ಇವರ “ಕಲಿಕೆ ಖಂಡಿತ ಪಠ್ಯ ಪುಸ್ತಕದ ಒಳಗೇ ಇಲ್ಲ”, ಬಡಗನ್ನೂರು ಶಾಲಾ ಶಿಕ್ಷಕ ಜನಾರ್ದನ ದುರ್ಗ ಇವರ “ಏಕೆ ಮಗುವಿನ ದೊಡ್ಡವನನ್ನಾಗಿಸುವ ಬಯಕೆ”, ಇಡಾಳ ಶಾಲಾ ಶಿಕ್ಷಕ ಮಹೇಶ್ ನೆಕ್ಕರೆ ಇವರ “ಕಳ್ಳ ಕ್ಯಾಮರಗಳ ಭಯ ಬೇಕೇ ಮಕ್ಕಳಿಗೆ”, ಅಮೈ ಶಾಲಾ ಶಿಕ್ಷಕಿ ಜ್ಯೋತಿ ದೇವರಮನೆ ಅವರ “ಮಾಯವಾಗಲಿ ತರಗತಿ ಕೋಣೆಯ ಮೂಲೆಗಳು”, ಕಬಕ ಶಾಲಾ ಶಿಕ್ಷಕಿ ರಾಣಿ ಅತ್ತಿಹಳ್ಳಿ ಇವರ “ನೆನಪು ಶಕ್ತಿಯನ್ನು ಹೆಚ್ಚಿಸುವ ಕೆಲಸವಲ್ಲ ನಮ್ಮದು”, ದರ್ಬೆತಡ್ಕ ಶಾಲಾ ಶಿಕ್ಷಕ ರಾಜು ಕುಂದವಾಡ ಇವರ “ನಮ್ಮ ಪೆಟ್ಟು ಬೈಗುಳಗಳು ಕಲಿಕೆಯನ್ನು ಕುಂಠಿತಗೊಳಿಸೀತು ಎಚ್ಚರ”, ಬೊಬ್ಬೆಕೇರಿ ಶಾಲಾ ಶಿಕ್ಷಕಿ ಶೋಭಿತ ಮಾರ್ನಾಡ್ ಇವರ ಮನೆಕೆಲಸದ ಹೆಸರಲ್ಲಿ ಮಕ್ಕಳಿಗೇಕೆ ಹಿಂಸೆ” ಎಂಬ ಹನ್ನೊಂದು ಶೈಕ್ಷಣಿಕ ಲೇಖನಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ರಮೇಶ್ ಉಳಯ ಸಂಪಾದಿಸಿದ್ದಾರೆ.

ಶಿಕ್ಷಕ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಬೆಳೆಯಬೇಕೆಂಬ ಒತ್ತಾಸೆಗೆ ಭರವಸೆ ಬಳಗದ ಈ ಕೃತಿ ಮುನ್ನುಡಿಯಾಗಿದೆಲೋಕೇಶ್ ಸಿ.
ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು

ಭರವಸೆ ಬಳಗದ ಶಿಕ್ಷಕರು ವಿಶೇಷ ಒತ್ತಾಸೆಯ ಕಲಾಕಾರರು, ಅನ್ವೇಷಕ ಪ್ರವೃತ್ತಿಯವರು ಎಂಬುದು ಇಲ್ಲಿನ ಲೇಖನಗಳಿಂದ ಅರಿವಾಗುತ್ತದೆ. ಈ ಪುಸ್ತಕದಲ್ಲಿರುವ ಎಲ್ಲಾ ಬರೆಹಗಳು ಅನುಭವಗಳಿಂದ ಮೂಡಿಬಂದವುಗಳಾಗಿವೆ ಮತ್ತು ಬಹಳ ಅರ್ಥಪೂರ್ಣವಾದ ಲೇಖನಗಳಾಗಿವೆಡಾ. ಎನ್. ಸುಕುಮಾರ ಗೌಡ, ಹಿರಿಯ ಶಿಕ್ಷಣ ಚಿಂತಕರು, ಪುತ್ತೂರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.