HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿ: ನಿವೇಶನಗಳ ಗಡಿ ಗುರುತು ಮಾಡಲು ಗ್ರಾ.ಪಂ.ಗೆ ಕಾಂಗ್ರೆಸ್ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2013-14ರಲ್ಲಿ ಹಂಚಿಕೆಯಾದ ನಿವೇಶನಗಳ ಗಡಿ ಗುರುತು ಮಾಡಬೇಕೆಂದು ಕೋಡಿಂಬಾಡಿ-ಬೆಳ್ಳಿಪ್ಪಾಡಿ ವಲಯ ಕಾಂಗ್ರೆಸ್ ಸಮಿತಿಯಿಂದ ಕೋಡಿಂಬಾಡಿ ಗ್ರಾಮ ಪಂಚಾಯತ್‌ಗೆ ಮನವಿ ಸಲ್ಲಿಸಲಾಯಿತು. 2013-14ರಲ್ಲಿ ಕೋಡಿಂಬಾಡಿ ಗ್ರಾಮ ಪಂಚಾಯತ್ ನಿಂದ ಗ್ರಾಮದ ನಿವೇಶನ ರಹಿತರಾದ 29 ಫಲಾನುಭವಿಗಳಿಗೆ ನಿವೇಶನ ನೀಡಲಾಗಿದ್ದು ಅವರಿಗೆ ಹಕ್ಕು ಪತ್ರವನ್ನು ನೀಡಲಾಗಿದೆ. ಆದರೆ 8 ವರ್ಷಗಳಿಂದ ಇದುವರೆಗೆ ಆ ಫಲಾನುಭವಿಗಳಿಗೆ ತಮ್ಮ ತಮ್ಮ ನಿವೇಶನದ ಗಡಿ ಗುರುತನ್ನು ಮಾಡಿರುವುದಿಲ್ಲ. ಈ ಸಮಸ್ಯೆ ಕುರಿತು ಸಾಮಾನ್ಯ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಹಲವು ಬಾರಿ ಗಮನ ಸೆಳೆದು ಚರ್ಚಿಸಲಾಗಿದ್ದು ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ. ಆದುದರಿಂದ ಕೂಡಲೇ ಈ ಮನವಿಗೆ ಸ್ಪಂದಿಸಿ 10 ದಿನಗಳ ಒಳಗೆ ಸರ್ವೆ ಕಾರ್ಯ ನಡೆಸಿ ಫಲಾನುಭವಿಗಳಿಗೆ ಗಡಿ ಗುರುತು ಮಾಡಿ ನಿವೇಶನವನ್ನು ಒದಗಿಸಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಈ ಬಗ್ಗೆ ಫಲಾನುಭವಿಗಳ ಜತೆ ಸೇರಿಕೊಂಡು ನಾವುಗಳು ಉಗ್ರ ಹೋರಾಟ ಮಾಡಲಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. ವಲಯ ಕಾಂಗ್ರೆಸ್ ಅಧ್ಯಕ್ಷ ಮೋನಪ್ಪ ಗೌಡ ಪಮ್ಮನಮಜಲು, ವಿಟ್ಲ -ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ಕಾರ್ಯದರ್ಶಿ ಜಗನಾಥ ಶೆಟ್ಟಿ ನಡುಮನೆ, ಪುತ್ತೂರು ತಾಲ್ಲೂಕು ಇಂಟಕ್ ಅಧ್ಯಕ್ಷ ಜಯಪ್ರಕಾಶ್ ಬದಿನಾರು, ವಲಯ ಕಾಂಗ್ರೆಸ್ ನ ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ, ಕೋಡಿಂಬಾಡಿ 1 ಬೂತ್ ಅಧ್ಯಕ್ಷ ಪ್ರಭಾಕರ್ ಸಾಮಾನಿ ಮಠಂತಬೆಟ್ಟು, ಕೋಡಿಂಬಾಡಿ 2 ಬೂತ್ ಕಾರ್ಯದರ್ಶಿ ರವಿಕುಮಾರ್ ಮದ೯ನಳಿಕೆರವರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತ್ ಕಾರ್ಯದರ್ಶಿ ರಮೇಶ್ ಕೆ. ಮನವಿ ಸ್ವೀಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.