HomePage_Banner
HomePage_Banner
HomePage_Banner
HomePage_Banner

ಕೋಡಿಂಬಾಡಿಯಲ್ಲಿ ಅಪರಿಚಿತರಿಂದ ಹಣ ಸಂಗ್ರಹ: ಪೊಲೀಸರಿಂದ ವಿಚಾರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೇರಳ ರಾಜ್ಯದ ನೋಂದಾಯಿತ ಓಮ್ನಿ ಕಾರಿನಲ್ಲಿ ಬಂದು ಹಣ ಸಂಗ್ರಹಿಸುತ್ತಿದ್ದ ಅಪರಿಚಿತ ಮೂವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ ಘಟನೆ ಕೋಡಿಂಬಾಡಿಯಲ್ಲಿ ನಡೆದಿದೆ. ಈರ್ವರು ಮಹಿಳೆಯರು ಮತ್ತು ಓರ್ವ ಯುವಕ ಕೋಡಿಂಬಾಡಿ ಪರಿಸರದಲ್ಲಿ ಹಣ ಸಂಗ್ರಹಿಸುತ್ತಿದ್ದರು. ಆಶ್ರಮಕ್ಕಾಗಿ ಈ ಹಣ ಸಂಗ್ರಹಿಸುವುದಾಗಿ ಅವರು ತಿಳಿಸುತ್ತಿದ್ದರು. ಮನೆ ಮನೆಗೆ ಹೋಗುತ್ತಿದ್ದ ಇವರು ಗ್ರಾಮ ಪಂಚಾಯತ್ ಸದಸ್ಯ ಜಯಪ್ರಕಾಶ್ ಬದಿನಾರುರವರ ಮನೆಗೂ ತೆರಳಿದ್ದರು. ಹಣ ಸಂಗ್ರಹಿಸುತ್ತಿದ್ದ ಅಪರಿಚಿತ ವ್ಯಕ್ತಿಗಳ ವರ್ತನೆಯ ಬಗ್ಗೆ ಸಂಶಯಗೊಂಡ ಜಯಪ್ರಕಾಶ್ ಅವರು ಅವರನ್ನು ವಿಚಾರಿಸಿದಾಗ ಅವರು ಅಸ್ಪಷ್ಟ ಮಾಹಿತಿ ನೀಡಿದರು. ಆಧಾರ್ ಕಾರ್ಡ್ ಮುಂತಾದ ದಾಖಲೆಗಳೂ ಅವರಲ್ಲಿ ಇರಲಿಲ್ಲ. ಕೂಡಲೇ ಜಯಪ್ರಕಾಶ್ ಬದಿನಾರುರವರು ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದರು.

‘ಹೊಯ್ಸಳ’ ಪೊಲೀಸರು ಸ್ಥಳಕ್ಕಾಗಮಿಸಿ ಅವರನ್ನು ವಿಚಾರಣೆಗೊಳಪಡಿಸಿದರು. ಬೆಂಗಳೂರು ಮೂಲದ ಆಶ್ರಮಕ್ಕೆ ತಾವು ಹಣ ಸಂಗ್ರಹಿಸುತ್ತಿರುವುದಾಗಿ ತಿಳಿಸಿ ಅಲ್ಲಿನ ವಿವರ ನೀಡಿದರು. ಆಶ್ರಮದ ಪ್ರಮುಖರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಹಣ ಸಂಗ್ರಹಿಸುತ್ತಿರುವವರು ಆಶ್ರಮಕ್ಕೆ ಸಂಬಂಧಿಸಿದವರು ಹೌದು ಎಂದು ದೃಢಪಡಿಸಿದರು. ಬಳಿಕ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿವರ ಪಡೆದುಕೊಂಡು ಸೂಕ್ತ ದಾಖಲೆಗಳನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಿ ಅವರನ್ನು ಕಳುಹಿಸಿಕೊಟ್ಟರು.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಪರಿಚಿತರು ಯಾರೇ ಇರಲಿ ವ್ಯವಹಾರ ಮಾಡುವಾಗ ಗ್ರಾಮ ಪಂಚಾಯತ್ ನ ಅನುಮತಿ ತೆಗೆದುಕೊಳ್ಳುವಂತಾಗಬೇಕು, ಗ್ರಾಮಸ್ಥರು ಅಪರಿಚಿತ ವ್ಯಕ್ತಿಗಳ ಜತೆಗೆ ವ್ಯವಹರಿಸುವಾಗ ಅವರಲ್ಲಿ ಕೊರೊನ ನೆಗೆಟಿವ್ ಸರ್ಟಿಫಿಕೇಟು, ವ್ಯಾಕ್ಸಿನ್ ಕೊಟ್ಟ ಸರ್ಟಿಫಿಕೇಟು ಇದೆಯ ಎಂದು ನೋಡಿಕೊಳ್ಳಬೇಕು ಮತ್ತು ಆಧಾರ್ ಕಾರ್ಡ್ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಜಯಪ್ರಕಾಶ್ ಬದಿನಾರು ವಿನಂತಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.