HomePage_Banner
HomePage_Banner
HomePage_Banner
HomePage_Banner

ರೋಟರಿ ಪುತ್ತೂರು, ಚೆನ್ನೈ ಫ್ರೀಡಂ ಟ್ರಸ್ಟ್‌ನಿಂದ ಕಾಲು ಕಳೆದುಕೊಂಡವರಿಗೆ ಉಚಿತ ಕೃತಕ ಕಾಲು ಪರಿಕರಗಳ ಜೋಡಣಾ ಶಿಬಿರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •   ಕೃತಕ ಕಾಲುಗಳ ಪರಿಕರಗಳನ್ನು ಕಾಳಜಿ, ಜವಾಬ್ದಾರಿಯಿಂದ ಉಪಯೋಗಿಸಿಡಾ.ಸುಂದರ್

 

ಪುತ್ತೂರು: ಕಾಲುಗಳನ್ನು ಕಳೆದುಕೊಂಡವರು ರೋಗಿಗಳಲ್ಲ, ಅವರು ಫಲಾನುಭವಿಗಳು ಎಂದು ನಾವು ಗುರುತಿಸಿಕೊಳ್ಳಬೇಕಾಗಿದೆ. ಫ್ರೀಡಂ ಟ್ರಸ್ಟ್ ಸಂಸ್ಥೆಯು ರೋಟರಿ ಪುತ್ತೂರು ಸಂಸ್ಥೆಯೊಂದಿಗೆ ಸೇರಿಕೊಂಡು ಕಾಲಿಲ್ಲದವರಿಗೆ ಕೃತಕ ಕಾಲುಗಳ ಪರಿಕರಗಳನ್ನು ಜವಾಬ್ದಾರಿಯುತವಾಗಿ ಪೂರೈಸಿದೆ. ಆದ್ದರಿಂದ ಫಲಾನುಭವಿಗಳು ತಮ್ಮ ದಿನನಿತ್ಯದ ಜೀವನದಲ್ಲಿ ಕೃತಕ ಕಾಲುಗಳ ಪರಿಕರಗಳನ್ನು ಕಾಳಜಿ ಹಾಗೂ ಜವಾಬ್ದಾರಿಯಿಂದ ಉಪಯೋಗಿಸಿ ಎಂದು ಫ್ರೀಡಂ ಟ್ರಸ್ಟ್ ಚೆನ್ನೈ ಇದರ ಸಂಸ್ಥಾಪಕರಾದ ಡಾ.ಎಸ್.ಸುಂದರ್ರವರು ಹೇಳಿದರು.

ಸೆ.3 ರಂದು ರೋಟರಿ ಪುತ್ತೂರು ಹಾಗೂ ಚೆನ್ನೈ ಫ್ರೀಡಂ ಟ್ರಸ್ಟ್ ಆಶ್ರಯದಲ್ಲಿ, ತಿರುಮಲೈ ಕೆಮಿಕಲ್ಸ್ ಲಿಮಿಟೆಡ್ ಪ್ರಾಯೋಜಕತ್ವದಲ್ಲಿ ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನದ ಬಳಿಯ ಶ್ರೀ ಸುಕೃತೀಂದ್ರ ಕಲಾ ಮಂದಿರದಲ್ಲಿ `ವಾಕ್ ಇಂಡಿಯಾಯೋಜನೆಯಡಿ ನಡೆದ ಉಚಿತ ಕೃತಕ ಕಾಲುಗಳ ಪರಿಕರಗಳ ಜೋಡಣಾ ಶಿಬಿರದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾಲುಗಳನ್ನು ಕಳೆದುಕೊಂಡು ಮನೆಯಲ್ಲಿಯೇ ತೆವಳಿಕೊಂಡು ಅವರ ಅಗತ್ಯಗಳನ್ನು ಪೂರೈಸಿಕೊಳ್ಳುವ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಯನ್ನು ತೆಗೆದುಕೊಂಡು ಅವರುಗಳ ಕಾಲಿಗೆ ಒಪ್ಪುವ ರೀತಿಯಲ್ಲಿ ಜೋಡಣೆಗೊಳಿಸುವ ಕೃತಕ ಕಾಲುಗಳ ಪರಿಕರಗಳನ್ನು ಮಾಡಿಕೊಟ್ಟು ಅವರನ್ನು ನಡೆಯುವಂತೆ ಮಾಡುವ ಮೂಲಕ ಫಲಾನುಭವಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದ ಕಾರ್ಯವು ನಮಗೆ ಆತ್ಮತೃಪ್ತಿ ತಂದುಕೊಟ್ಟಿದೆ. ಪುತ್ತೂರಿನಲ್ಲಿ ಕೃತಕ ಕಾಲು ಜೋಡಣೆಯ ಶಿಬಿರವನ್ನು ಆರು ಬಾರಿ ರೋಟರಿ ಪುತ್ತೂರು, ಫ್ರೀಡಂ ಟ್ರಸ್ಟ್ ತಾಂತ್ರಿಕ ಸಿಬ್ಬಂದಿ ಹಾಗೂ ಇತರ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಯಶಸ್ವಿಯಾಗಿ ಹಮ್ಮಿಕೊಂಡ ತೃಪ್ತಿಯಿದೆ ಎಂದ ಅವರು ಕೃತಕ ಕಾಲುಗಳ ಪರಿಕರಗಳನ್ನು ಪಡೆದುಕೊಂಡವರು ಅವನ್ನು ಬಳಕೆ ಮಾಡಿದಾಗ ಹುಣ್ಣಾಗುವುದು, ಗಾಯವಾಗುವುದು ಆಗದಿರಲಿ ಎಂದು ಸ್ಪಾಂಜ್ ಹಾಗೂ ಸಾಕ್ಸ್ಗಳನ್ನು ಧರಿಸಲು ನೀಡಿದ್ದು ಅವನ್ನು ಕ್ರಮವಾಗಿ ಉಪಯೋಗಿಸಿ, ನೀಡಿದಂತಹ ಕೃತಕ ಕಾಲುಗಳ ಪರಿಕರಗಳನ್ನು ಮೂಲೆಗೆ ಹಾಕಿ ನಿರುಪಯುಕ್ತವಾಗದಂತೆ ನೋಡಿಕೊಳ್ಳಿ ಎಂದು ಅವರು ಹೇಳಿದರು.

ವಿಕಲಚೇತನ ಎಂಬುದು ಶಾಪವಲ್ಲ, ಸವಾಲುಪ್ರಕಾಶ್ ಕಾರಂತ್

ರೋಟರಿ ಆರ್. ಜಿಲ್ಲೆ ೩೧೮೧ ಇದರ ಡಿಜಿಇ ಮೇಜರ್ ಡೋನರ್ ಪ್ರಕಾಶ್ ಕಾರಂತ್ ಮಾತನಾಡಿ, ಪರಮಾತ್ಮ ಲೋಕದಲ್ಲಿ ಎಲ್ಲರಿಗೂ ಬದುಕುವ ಹಕ್ಕನ್ನು ಕೊಟ್ಟಿರುತ್ತಾನೆ. ವಿಶೇಷ ಚೇತನರಿಗೆ ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಬದುಕಿಗೆ ಪ್ರೇರೇಪಣೆ ನೀಡುವಂತಹ ಚೆನ್ನೈ ಫ್ರೀಡಂ ಟ್ರಸ್ಟ್ರವರ ಕಾರ್ಯ ಅಭಿನಂದನೀಯ. ಫಲಾನುಭವಿಗಳಿಗೆ ಕೃತಕ ಕಾಲುಗಳು ತಮ್ಮ ಸ್ವಂತಿಕೆ ಹಾಗೂ ಸ್ವಾತಂತ್ರ್ಯದ ಸುಭೀಕ್ಷೆಗೆ ದಾರಿಯಾಗಬಲ್ಲುದು. ವಿಕಲಚೇತನ ಎಂಬುದು ಶಾಪವಲ್ಲ, ಸವಾಲು. ಸವಾಲನ್ನು ಅವಕಾಶವಾಗಿ ಸದುಪಯೋಗಪಡಿಸುವಲ್ಲಿ ನಮ್ಮ ಜವಾಬ್ದಾರಿಯುತ ನಾಗರಿಕರು, ಸಂಘಸಂಸ್ಥೆಗಳ ಸಹಕಾರ ಬಹಳ ಮುಖ್ಯವಾಗುತ್ತದೆ ಎಂದ ಅವರು ಪ್ರಸ್ತುತ ವಿದ್ಯಾಮಾನದಲ್ಲಿ ದಿವ್ಯಾಂಗರು ಸಾಮಾಜಿಕ, ಸಾಂಸ್ಕೃತಿಕ, ವಿದ್ಯಾಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿ ಸಮಾಜಕ್ಕೆ ಆದರ್ಶರಾಗಿರುವ ಘಟನೆಗಳು ಅನೇಕ ಇವೆ. ಶರೀರದಲ್ಲಿ, ದೇಹದಲ್ಲಿ ನ್ಯೂನತೆ ಇರಬಹುದು ಆದರೆ ಮನಸ್ಸಿನಲ್ಲಿ, ಮಸ್ತಕದಲ್ಲಿ, ಹೃದಯದಲ್ಲಿ ನಿಜಕ್ಕೂ ಗಟ್ಟಿಯಾಗಿದ್ದೀರಿ ಎಂದು ಅವರು ಹೇಳಿದರು.

ರೋಟರಿ, ಫ್ರೀಡಂ ಟ್ರಸ್ಟ್ ಫಲಾನುಭವಿಗಳ ಪಾಲಿಗೆ ಬೆಳಕಾಗಿದ್ದಾರೆಜಿತೇಂದ್ರ

ರೋಟರಿ ಆರ್. ಜಿಲ್ಲೆ 3181, ವಲಯ ಐದರ ಅಸಿಸ್ಟೆಂಟ್ ಗವರ್ನರ್ ಜಿತೇಂದ್ರ ಎನ್. ಮಾತನಾಡಿ, ಮನುಷ್ಯ ಮೂಲಭೂತವಾಗಿ ಸದಾ ಚಲನೆಯಲ್ಲಿ ಇರಬೇಕು ಎನ್ನುವುದು ಎಲ್ಲರ ಆಸೆಯಾಗಿರುತ್ತದೆ. ಆದರೆ ಅಂಗಗಳಲ್ಲಿ ಪ್ರಮುಖವಾದ ಅಂಗವಾಗಿರುವ ಎರಡು ಕಾಲಿಲ್ಲದವರ ಮಾನಸಿಕ ಸ್ಥಿತಿ, ಅವರ ವೇದನೆ ಅವರಿಗೆ ಮಾತ್ರ ಗೊತ್ತು. ನಮ್ಮ ನೆಚ್ಚಿನ ವಸ್ತು ಇಲ್ಲದಾಗ ಮಾತ್ರ ಅದರ ಬೆಲೆ ಗೊತ್ತಾಗುವುದು. ಜೀವನದ ಯಾವುದೇ ಒಂದು ಘಟನೆಯಲ್ಲಿ ಆಕಸ್ಮಿಕವಾಗಿ ಕಾಲನ್ನು ಕಳೆದುಕೊಳ್ಳಬೇಕಾದ ಸಂದರ್ಭ ಎದುರಾದಾಗ ಅದು ಅವರಿಗೆ ಕರಾಳ ದಿನವಾಗಿರುತ್ತದೆ ಎಂದ ಅವರು ನಿಟ್ಟಿನಲ್ಲಿ ರೋಟರಿ ಪುತ್ತೂರು ಹಾಗೂ ಚೆನ್ನೈ ಫ್ರೀಡಂ ಟ್ರಸ್ಟ್ ಸಂಸ್ಥೆಯು ಕಾಲಿಲ್ಲದ ಫಲಾನುಭವಿಗಳ ಪಾಲಿಗೆ ಬೆಳಕಾಗಿ ಬಂದಿದ್ದಾರೆ ಎನ್ನುವುದಂತೂ ಸತ್ಯ. ಯಾಕೆಂದರೆ ಕೃತಕ ಕಾಲುಗಳಿಂದ ನಡೆಯಲು ಮತ್ತೇ ಗರಿಗೆದರಿ ನಿಂತು ತಮ್ಮ ಪ್ರಾರಂಭದ ದಿನಗಳ ಸುಖ ಅನುಭವಿಸುವುದಕ್ಕೆ ಇವೆರಡು ಸಂಸ್ಥೆ ಅನುವು ಮಾಡಿಕೊಟ್ಟು ಕಾಲಿಲ್ಲದವರ ಪಾಲಿಗೆ ದಾರಿದೀಪ ಹಾಗೂ ಬೆನ್ನೆಲುಬಾಗಿ ನಿಂತಿರುವುದು ದೇವರು ಮೆಚ್ಚುವ ಕೆಲಸವಾಗಿದೆ ಎಂದು ಅವರು ಹೇಳಿದರು.

ಮುಳಿಯ ಜ್ಯುವೆಲ್ಸ್ನಿಂದ ರೂ. ಸಾವಿರ ಧನಸಹಾಯಕೇಶವಪ್ರಸಾದ್

ಮುಳಿಯ ಜ್ಯುವೆಲ್ಸ್ ಚೇರ್ಮ್ಯಾನ್ ಹಾಗೂ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಲೋಕ ಸಮಸ್ತ ಸುಖಿನೋ ಭವಂತು ಎಂಬಂತೆ ರೋಟರಿ ಪುತ್ತೂರು ಸಂಸ್ಥೆಯು ಫ್ರೀಡಂ ಟ್ರಸ್ಟ್ರವರೊಂದಿಗೆ ಕೈಜೋಡಿಸಿಕೊಂಡು ಇಂತಹ ಜನರ ಬಾಳಿಗೆ ಬೆಳಕಾಗುವ ಕಾರ್ಯಕ್ರಮ ಮಾಡಿರುವುದು ಅಭಿನಂದನೀಯ. ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ಸಾಧನೆಯನ್ನು ಮಾಡಬೇಕಾದ ಇಂದಿನ ಅನಿವಾರ್ಯತೆಯಿದೆ. ಕಾಲಿಲ್ಲದ ವಿಶೇಷ ಚೇತನರು ಎನಿಸಿಕೊಂಡ ಅರುಣಿಮ ಸಿನ್ಹರವರು ಎವರೆಸ್ಟ್ ಶಿಖರವನ್ನೇರಿದ್ದಾರೆ. ಕರ್ನಾಟಕದ ಭರತನಾಟ್ಯ ನೃತ್ಯಗಾರ್ತಿ ಸುಧಾ ಚಂದ್ರನ್ವರು ಕೃತಕ ಕಾಲಿನೊಂದಿಗೆ ಭರತನಾಟ್ಯವನ್ನು ಮಾಡಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡು ನಮಗೆಲ್ಲ ಆದರ್ಶವಾಗಿದ್ದಾರೆ ಎಂದ ಅವರು ಶಿಬಿರದಲ್ಲಿ ಯಾರು ಕೃತಕ ಕಾಲುಗಳನ್ನು ಪಡೆದು ನಿತ್ಯ ಉಪಯೋಗಿಸುತ್ತಾರೋ ಅವರುಗಳ ಫಾಲೋ ಅಪ್ ಮಾಡಿ ಅವರಿಗೆ ಮುಳಿಯ ಜ್ಯುವೆಲ್ಸ್ ವತಿಯಿಂದ ರೂ.5 ಸಾವಿರ ಧನಸಹಾಯ ನೀಡಲಿದ್ದೇನೆ ಎಂದು ಅವರು ಹೇಳಿದರು.

ಕೃತಕ ಕಾಲುಗಳಿಂದ ಕಾಲಿಲ್ಲದವರ ಮಾನಸಿಕ ಛಲವನ್ನು ಇಮ್ಮಡಿಗೊಳಿಸಿದೆಸುರೇಂದ್ರ ಕಿಣಿ

ಶ್ರೀ ಲಕ್ಷ್ಮಿ ವೆಂಕಟ್ರಮಣ ದೇವಸ್ಥಾನದ ಟ್ರಸ್ಟಿ ಜಿ.ಸುರೇಂದ್ರ ಕಿಣಿರವರು ಮಾತನಾಡಿ, ಮನುಷ್ಯನಿಗೆ ಅಂಗ ನ್ಯೂನತೆ ಬೇರೆ ಬೇರೆ ಕಾರಣದಿಂದ ಬರಬಹುದು. ಅಂಗ ನ್ಯೂನತೆ ತಪ್ಪು ಅಲ್ಲ, ಅದೂ ಕೂಡ ದೇವರ ವರ. ಮನುಷ್ಯನಿಗೆ ಎಲ್ಲರಂತೆ ಸಂತೋಷದಾಯಕವಾಗಿ ಜೀವಿಸಬೇಕಾದ ಹಕ್ಕು ಇದೆ. ಕಾಲಿಲ್ಲದವರಿಗೆ ಕೃತಕ ಕಾಲುಗಳನ್ನು ನೀಡುವ ಮೂಲಕ ಕಾಲಿಲ್ಲದವರ ಮಾನಸಿಕ ಛಲವನ್ನು ಇಮ್ಮಡಿಗೊಳಿಸಿದ್ದು ಮಾತ್ರವಲ್ಲದೆ ಅವರುಗಳು ಜೀವನದಲ್ಲಿ ಸುಸೂತ್ರವಾಗಿ ನಡೆಯಲು ದಾರಿ ಕಲ್ಪಿಸಿದ ಪುಣ್ಯದ ಕೆಲಸ ರೋಟರಿ ಪುತ್ತೂರು ಹಾಗೂ ಫ್ರೀಡಂ ಟ್ರಸ್ಟ್ ಸಂಸ್ಥೆ ಮಾಡಿದೆ ಎಂದರು.

ಫಲಾನುಭವಿಗಳು ದಿನದ ಅರ್ಧ ಗಂಟೆ ವ್ಯಾಯಾಮ ಮಾಡಿಮಧು

ಅಧ್ಯಕ್ಷತೆ ವಹಿಸಿದ ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಮಧು ನರಿಯೂರು ಸ್ವಾಗತಿಸಿ, ಕಾಲಿಲ್ಲದವರು ಮತ್ತೊಬ್ಬರ ನೆರವನ್ನು ಪಡೆಯದೇ ಜೀವನ ಸಾಗಿಸಲು ಸಾಧ್ಯವಿಲ್ಲ ಎನ್ನುವುದು ಬೇಸರದ ಸಂಗತಿ. ಇದೀಗ ಚೆನ್ನೈ ಫ್ರೀಡಂ ಟ್ರಸ್ಟ್ರವರು ಕಾಲಿಲ್ಲದ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಕೃತಕ ಕಾಲು ಜೋಡಣೆ ಮಾಡುತ್ತಿರುವುದರಿಂದ ಕಾಲಿಲ್ಲದ ಫಲಾನುಭವಿಗಳಿಗೆ ಯೋಜನೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ರೋಟರಿ ಪುತ್ತೂರು ಕಳೆದ ಆರು ವರ್ಷಗಳಿಂದ ನಿರಂತರ ಉಚಿತ ಕೃತಕ ಕಾಲು ಜೋಡಣೆಯ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ. ಕೃತಕ ಕಾಲುಗಳನ್ನು ಪಡೆದ ಫಲಾನುಭವಿಗಳು ದಿನದ ಅರ್ಧ ಗಂಟೆ ವ್ಯಾಯಾಮ ಮಾಡಿ ಎಂದರು.

ಸಹಕರಿಸಿದವರಿಗೆ ಗೌರವ

ಕಾಲು ಕಳೆದುಕೊಂಡ ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಕುರಿತು ಕಾಲು ಕಳೆದುಕೊಂಡವರ ಕಾಲಿನ ಅಳತೆಯನ್ನು ಮಾಡಿ ಸಹಕರಿಸಿದ ಫ್ರೀಡಂ ಟ್ರಸ್ಟ್ ಸಿಬ್ಬಂದಿಗಳಾದ ಜಯವೇಲು, ಬಾಲಾಜಿ, ಕಾಳಿದಾಸ, ಫೀಲ್ಡ್ ಆಫೀಸರ್ ರಿಷಿ, ಪಿಆರ್ ಪ್ರಕಾಶ್ ಹಾಗೂ ಕೊಡಗಿನಿಂದ ಒಂಭತ್ತು ಫಲಾನುಭವಿಗಳನ್ನು ಕರೆ ತಂದಿರುವ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಇದರ ಸುರೇಶ್, ಸುನೀತಾ, ಅಭಿಷೇಕ್, ಅಭಿಲಾಷ್ರವರಿಗೆ ಹೂ ನೀಡಿ ಗೌರವಿಸಲಾಯತು.

29 ಮಂದಿ ಫಲಾನುಭವಿಗಳು

ಶಾಂತಾರಾಮ, ರಮಾನಾಥ, ವಾರಿಜ, ಎಂ.ಎಸ್ ರಾಜಮ್ಮ, ಎಂ.ಧನಂಜಯ ಗೌಡ, ಡಿ.ಆನಂದ ರವಿ, ಅಬ್ಬಾಸ್ ಬ್ಯಾರಿ, ಕುನ್ಹಚ್ಚನ್, ಟಿ.ಪ್ರಮೋದ್, ಜಿನ್ನಪ್ಪ ನಾಕ್, ನಾರಾಯಣ, ಅಮ್ಮು ರೈ, ಪುತ್ತೂರು ಇಸಾಖ್, ಸುಜ, ಸುಬ್ರಾಯ ಗೌಡ, ಪಿ.ಸಿ ವಿನೋದ್, ಜತ್ತಪ್ಪ ನಾಕ್, ನಾರಾಯಣ ಗೌಡ, ಸುಂದರ ಗೌಡ, ಪುಟ್ಟುಸ್ವಾಮಿ, ಮಧು, ಕೆ.ಟಿ ರಮೇಶ್, ನಿತ್ಯಾನಂದ ಶೆಟ್ಟಿ, ರಾಜ ಗೌಡ, ಜಯತಿ, ಕೆ.ಹರ್ಷಿತ್, ಫ್ರಾನ್ಸಿಸ್ ಸೆರಾವೋ, ಬಿ. ಪ್ರಸಾದ್, ಪದ್ಮಪ್ರಸಾದ್ರವರುಗಳೇ ಉಚಿತ ಕೃತಕ ಕಾಲುಗಳ ಪರಿಕರಗಳನ್ನು ಪಡೆದ ೨೯ ಮಂದಿ ಫಲಾನುಭವಿಗಳುಗಳಾಗಿದ್ದಾರೆ.

ಕು|ಪ್ರಾರ್ಥನಾ ಬಿ ಪ್ರಾರ್ಥಿಸಿದರು. ರೋಟರಿ ಪುತ್ತೂರು ಕಮ್ಯೂನಿಟಿ ಸರ್ವಿಸ್ ನಿರ್ದೇಶಕ ಡಾ.ಜಯದೀಪ್ ಎನ್. ವಂದಿಸಿದರು. ಕ್ಲಬ್ ಮಾಜಿ ಅಧ್ಯಕ್ಷ ವಾಮನ್ ಪೈ, ನಿಯೋಜಿತ ಅಧ್ಯಕ್ಷ ಉಮಾನಾಥ್ ಪಿ.ಬಿರವರು ಅತಿಥಿಗಳ ಪರಿಚಯ ಮಾಡಿದರು. ಪ್ರಾಜೆಕ್ಟ್ ಕೋಆರ್ಡಿನೇಟರ್ ಡಾ.ಶ್ರೀಪ್ರಕಾಶ್ ಬಿ.ರವರು ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಶ್ರೀಧರ್ ಗೌಡ ಹಾಗೂ ರೋಟರಿ ಸದಸ್ಯರು ಸಂದರ್ಭದಲ್ಲಿ ಉಪಸ್ಥಿತರಿದ್ದರು.

 29  ಫಲಾನುಭವಿಗಳು, ರೂ.4 ಲಕ್ಷ ವೆಚ್ಚ

ಪುತ್ತೂರು ಹಾಗೂ ಕೊಡಗಿನ 29 ಮಂದಿ ಕಾಲಿಲ್ಲದ ಫಲಾನುಭವಿಗಳಿಗೆ ಅವರ ಕಾಲಿನ ಅಳತೆಗನುಗುಣವಾಗಿ ಸುಮಾರು ಲಕ್ಷ ರೂ.ವೆಚ್ಚದಲ್ಲಿ ಚೆನ್ನೈಯಿಂದ ನಿರ್ಮಾಣ ಮಾಡಿಸಿದ ಕೃತಕ ಕಾಲಿನ ಪರಿಕರಗಳನ್ನು ಉಚಿತವಾಗಿ ಹಸ್ತಾಂತರಿಸಲಾಯಿತು. ಒಟ್ಟು 30 ಮಂದಿಗೆ ಕೃತಕ ಕಾಲಿನ ಜೋಡಣೆಯನ್ನು ಮಾಡುವುದಾಗಿ ಮೊದಲು ತಪಾಸಣಾ ಶಿಬಿರದಲ್ಲಿ ತಿಳಿಸಲಾಗಿತ್ತು. ಆದರೆ ಕಳೆದ ಮೂರು ದಿನದ ಹಿಂದೆ ಅನಂತ ಆಚಾರಿ ಎಂಬವರು ಮೆದುಳಿನ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದರು. ಹುಟ್ಟಿನಿಂದ ತೊಡೆ ಇಲ್ಲದೆ ಒಂದು ಕಾಲು ಹೊಂದಿರುವ 12 ವರ್ಷ ಹರೆಯದ ಕೊಡಗಿನ ಹರ್ಷಿತ್ ಎಂಬ ಬಾಲಕನೂ ಫಲಾನುಭವಿಗಳ ಪೈಕಿ ಓರ್ವನಾಗಿದ್ದಾನೆ. ಒಂದು ವರ್ಷದೊಳಗೆ ನಿರ್ಮಿಸಿದ ಕೃತಕ ಕಾಲುಗಳಲ್ಲಿ ಬಿಗಿತ, ಸಡಿಲಿಕೆ ಹೀಗೆ ಯಾವುದಾದರೂ ತೊಂದರೆ ಕಂಡುಬಂದಲ್ಲಿ ಕೂಡಲೇ ಚೆನ್ನೈ ಫ್ರೀಡಂ ಟ್ರಸ್ಟ್ರವರಿಗೆ ಫೋನಾಯಿಸಿದ್ದಲ್ಲಿ ಅವರಿಗೆ ಬದಲಿ ವ್ಯವಸ್ಥೆಯನ್ನು ಮಾಡಿ ಕೊಡಲಾಗುತ್ತದೆ. ಕೃತಕ ಕಾಲುಗಳು ಯಾವುದೇ ರೆಡಿಮೇಡ್ ಅಲ್ಲ, ಬದಲಾಗಿ ಫಲಾನುಭವಿಗಳ ಕಾಲಿನ ಅಳತೆಯನ್ನು ತೆಗೆದುಕೊಂಡು ಮಾಡಿದುದಾಗಿದೆ. ಇದನ್ನು ಮತ್ತೊಬ್ಬ ವ್ಯಕ್ತಿಗೆ ಧರಿಸಲು ಸಾಧ್ಯವಾಗುವುದಿಲ್ಲ.

ರೂ. ಲಕ್ಷ ದೇಣಿಗೆ

ದೇಶದ ವಿವಿಧೆಡೆ ಕಾರ್ಯಾಚರಿಸುತ್ತಿರುವ ಚೆನ್ನೈ ಫ್ರೀಡಂ ಟ್ರಸ್ಟ್ರವರ ಸಾಮಾಜಿಕ ಕಳಕಳಿಗೆ ರೋಟರಿ ಕ್ಲಬ್ ಪುತ್ತೂರು ಇದರ ಸದಸ್ಯರು ರೂ.1 ಲಕ್ಷ ಮೊತ್ತವನ್ನು ಸಂಗ್ರಹ ಮಾಡಿದ್ದು, ಸಂಗ್ರಹಿಸಿದ ಮೊತ್ತದ ಚೆಕ್ನ್ನು ರೋಟರಿ ಪಿಡಿಜಿ ಡಾ.ಭಾಸ್ಕರ್ ಎಸ್ರವರು ಚೆನ್ನೈ ಫ್ರೀಡಂ ಟ್ರಸ್ಟ್ ಸ್ಥಾಪಕರಾದ ಡಾ.ಎಸ್.ಸುಂದರ್ರವರಿಗೆ ಸಂದರ್ಭದಲ್ಲಿ ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ರೋಟರಿ ಪುತ್ತೂರು ಮಾಜಿ ಅಧ್ಯಕ್ಷ ವಾಮನ್ ಪೈರವರು ತಮ್ಮ ವೈಯಕ್ತಿಕ ದೇಣಿಗೆಯಾದ ರೂ.25 ಸಾವಿರ ಚೆಕ್ನ್ನು ಚೆನ್ನೈ ಫ್ರೀಡಂ ಟ್ರಸ್ಟ್ಗೆ ಹಸ್ತಾಂತರಿಸಿದರು.

 

 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.