HomePage_Banner
HomePage_Banner
HomePage_Banner
HomePage_Banner

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಕಂಪ್ಯೂಟರ್ ತರಗತಿಯ ಶುಭಾರಂಭ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು :  ಪ್ರಗತಿ ಸ್ಟಡಿ ಸೆಂಟರ್ ಪುತ್ತೂರು ಇಲ್ಲಿ ಸ್ಮಾರ್ಟ್ ಸಂಸ್ಥೆಯ ಮುಖ್ಯಸ್ಥರಾದ ಹರಿಪ್ರಸಾದ್ ಇವರ ನೇತೃತ್ವದಲ್ಲಿ ಕಂಪ್ಯೂಟರ್ ತರಗತಿಯು  ಸೆ. 2ರಂದು ಆರಂಭಗೊಂಡಿತು. ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್.ಪಿ.ವಿ. ಇವರು ಕಂಪ್ಯೂಟರ್ ತರಗತಿಯ ಉದ್ಘಾಟನೆಯನ್ನು ನಡೆಸಿ ಮಕ್ಕಳಿಗೆ ಇವತ್ತಿನ ಜಾಗತಿಕ ಯುಗದಲ್ಲಿ ಕಂಪ್ಯೂಟರ್ ಜ್ಙಾನವು ತುಂಬಾ ಅವಶ್ಯಕವಾಗಿದ್ದು, ವಿದ್ಯಾರ್ಥಿಗಳೆಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾಗೋಕುಲ್ ಇವರು ಕಂಪ್ಯೂಟರ್ ತರಗತಿಯ ಅನುಕೂಲ ಹಾಗೂ ಅದರ ಉಪಯುಕ್ತತೆಯ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು ಜೊತೆಗೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ವ್ಯವಸ್ಥೆ ಮಾಡಿಕೊಡಲಾಗುತ್ತದೆ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಮುಖ್ಯ ಅತಿಥಿ ಬಾಲಕೃಷ್ಣ ಬಸ್ತಿ ನಿವೃತ್ತ ಸೈನಿಕರು ಇವರು ಶುಭ ಹಾರೈಸಿದರು. ಸ್ಮಾರ್ಟ್ ಸಂಸ್ಥೆಯ ಮುಖ್ಯಸ್ಥರಾದ ಹರಿಪ್ರಸಾದ್‌ರವರು ಕಂಪ್ಯೂಟರ್ ತರಗತಿಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಸ್ಥೆಯ ಸಂಚಾಲಕರಾದ ಗೋಕುಲ್‌ನಾಥ್.ಪಿ.ವಿ, ಸಂಸ್ಥೆಯ ಪ್ರಾಂಶುಪಾಲರಾದ ಹೇಮಲತಾಗೋಕುಲ್, ಹರಿಪ್ರಸಾದ್‌ರವರ ತಂದೆ-ತಾಯಿಯಾದ ಪುಟ್ಟಣ್ಣ ಮತ್ತು ಉಮಾವತಿ ಹಾಗೂ ಅವರ ಧರ್ಮಪತ್ನಿಯಾದ ನಾಗವೇಣಿಯವರ ತಂದೆ-ತಾಯಿಯಾದ ಶ್ರೀನಿವಾಸ ಮತ್ತು ಗುಲಾಬಿರವರು ಉಪಸ್ಥಿತರಿದ್ದರು. ಹರಿಪ್ರಸಾದ್‌ರವರು ಅತಿಥಿಗಳನ್ನು ಸ್ವಾಗತಿಸಿದರು. ಸಂಸ್ಥೆಯ ಕನ್ನಡ ಉಪನ್ಯಾಸಕಿಯಾದ ಶ್ರೀಮತಿ ಪ್ರಮಿಳಾ.ಎನ್.ಡಿ.ರವರು ಕಾರ್ಯಕ್ರಮವನ್ನು ನಿರೂಪಿಸಿದರು

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.