ವಾರಂತ್ಯದ ಕರ್ಪ್ಯೂ ಮಾರ್ಗ ಸೂಚಿ ಪಾಲಿಸಿ, ಪ್ರತಿಭಟನೆ ನಿರ್ಧಾರ ಕೈ ಬಿಡುವಂತೆ ವರ್ತಕರೊಂದಿಗೆ  ತಹಸೀಲ್ದಾರ್ ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬೇಸರದಿಂದಾದರೂ ಮನವಿಯನ್ನು ಒಪ್ಪುವ ನಿರ್ಧಾರ ಕೈಗೊಳ್ಳುತ್ತೇವೆ – ಪುತ್ತೂರು ವರ್ತಕ ಸಂಘ

ಪುತ್ತೂರು: ಈ ವಾರದ ವಾರಂತ್ಯದ ಕರ್ಪ್ಯೂ ಮಾರ್ಗ ಸೂಚಿಗಳನ್ನು ಪಾಲಿಸಿ ಕೊಂಡು ಪ್ರತಿಭಟನೆ ನಿರ್ಧಾರವನ್ನು ಕೈ ಬಿಡುವಂತೆ ವರ್ತಕರೊಂದಿಗೆ ಪುತ್ತೂರು ತಹಸೀಲ್ದಾರ್ ರಮೇಶ್ ಬಾಬು ಅವರು ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಕುಟ್ಹಿನೊ ಅವರು ನಾವು ಅಂಗಡಿ ತೆರೆದರೆ ಕೋವಿಡ್ ಜಾಸ್ತಿ ಆಗುವುದಿಲ್ಲ. ಆದರೂ ಮುಂದಿನ ವಾರ ವೀಕೆಂಡ್ ಕರ್ಫ್ಯೂ ತೆರವು ಮಾಡುವುದಾಗಿ ಶಾಸಕರು ನೀಡಿದ ಭರವಸೆಯಂತೆ ಬೇಸರದಿಂದದಾರೂ ನಿಮ್ಮ ಮನವಿಗೆ ಒಪ್ಪುವ ನಿರ್ಧಾಕ್ಕೆ ಬಂದಿದ್ದೇವೆ ಎಂದು ಹೇಳಿದ್ದಾರೆ.

ಕೋವಿಡ್ -19ಗೆ ಸಂಬಂಧಿಸಿ ಸೆ.4 ಮತ್ತು 5ರಂದು ನಡೆಯುವ ವೀಕೆಂಡ್ ಕರ್ಫ್ಯೂ ತೆರವು ಮಾಡಬೇಕು ಇಲ್ಲವಾದರೆ ನಾವು ಅಂಗಡಿ ತೆರೆದು ವ್ಯವಹಾರ ನಡೆಸುತ್ತೇವೆ ಎಂದು ವರ್ತಕರ ನಿರ್ಧಾರಕ್ಕೆ ತಹಶೀಲ್ದಾರ್ ಮತ್ತು ನಗರಸಭೆ ಪೌರಾಯುಕ್ತರು ನಗರಸಭೆ ಸಭಾಂಗಣದಲ್ಲಿ ಸೆ.೩ರಂದು ಸಂಜೆ ಕರೆದ ತುರ್ತು ಸಭೆಯಲ್ಲಿ ತಹಶೀಲ್ದಾರ್ ಮನವಿಯಂತೆ ವರ್ತಕರು ತಮ್ಮ ಅಂಗಡಿ ತೆರವು ನಿರ್ಧಾರವನ್ನು ಬದಲಿಸಿ ವೀಕೆಂಡ್ ಕರ್ಫ್ಯೂಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.

ತಹಶೀಲ್ದಾರ್ ರಮೇಶ್ ಬಾಬು ಅವರು ಮಾತನಾಡಿ ದಕ್ಷಿನ ಕನ್ನಡ, ಕೊಡಗು, ಉಡುಪಿ, ಉತ್ತರ ಕನ್ನಡದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರಿದೆ. ಬೇರೆ ಜಿಲ್ಲೆಯಲ್ಲಿರುವ ಕೋವಿಡ್ ಪಾಸಿಟಿವಿಟಿಗಿಂತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪಾಸಿಟಿವಿಟಿ ಶೇ.೨.೮ ಇದೆ. ಈ ನಾಲ್ಕು  ಜಿಲ್ಲೆಗಳನ್ನು ಬಿಟ್ಟು ಉಳಿದ 27 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂವನ್ನು ಲಿಫ್ಟ್ ಮಾಡಿದ್ದೇವೆ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಸಂಬಂಧಿಸಿ ವೀಕೆಂಡ್ ಕರ್ಫ್ಯೂ ತೆರವು ಮಾಡಲು ಸೋಮವಾರ ದಿನ ಮುಖ್ಯಮಂತ್ರಿಗಳ ಜೊತೆ ಶಾಸಕರು ಸಚಿವರು ಮಾತುಕತೆ ನಡೆಸಲಿದ್ದಾರೆ. ಮುಂದಿನ ವಾರ ವೀಕೆಂಡ್ ಖಂಡಿತವಾಗಿಯೂ ತೆರವಾಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ. ಹಾಗಾಗಿ ಈ ವಾರ ವರ್ತಕರೆಲ್ಲರು ಸಹಕಾರ ನೀಡಿ ವೀಕೆಂಡ್ ಕರ್ಫ್ಯೂವಿನ ಮಾರ್ಗಸೂಚಿ ಪಾಲಿಸಿ ಪ್ರತಿಭಟನೆ ಮಾಡದಂತೆ ತಾಲೂಕು ಆಡಳಿತ ಪರವಾಗಿ ನಾನು ಮನವಿ ಮಾಡುತ್ತಿದ್ದೇನೆ ಎಂದರು.

ಬೇಸರದಿಂದಾದರೂ ಒಪ್ಪುವ ನಿರ್ಧಾರಕ್ಕೆ ಬಂದಿದ್ದೇವೆ

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೋನ್ ಕುಟ್ಹಿನೊ ಅವರು ಮಾತನಾಡಿ ನಾವು ಅಂಗಡಿ ತೆರೆದು ವ್ಯವಹಾರ ನಡೆಸಿದರೆ ಕೋವಿಡ್ ಜಾಸ್ತಿ ಆಗುವುದಿಲ್ಲ. ಆದರೆ ನಾಳೆ ವೀಕೆಂಡ್ ಕರ್ಫ್ಯೂ ಇರುತ್ತದೆ ಆದರೆ ಅದರ ನಿಯಮವನ್ನು ಕೇವಲ ಅಂಗಡಿಯವರ ಮೇಲೆ ಯಾಕೆ ಹಾಕುತ್ತೀರಿ ಎಂದು ಪ್ರಶ್ನಿಸಿದ ಅವರು ವೀಕೆಂಡ್ ಕರ್ಫ್ಯೂ ಎಂದರೆ ಯಾರು ಜನಸಂಚಾರ ಇರಬಾರದು. ಇಲ್ಲಿ ನಾಳೆ ಜನ ಸಂಚಾರ ಎಂದಿಗಿಂತಲೂ ಜಾಸ್ತಿ ಇರುತ್ತದೆ. ಇದು ಸಮಂಜಸವಲ್ಲ. ನಿಮಗೆ ಸರಿಯಾಗಿ ಪಾಲನೆ ಮಾಡಲು ಆಗುತ್ತಿಲ್ಲ. ನಮಗೆ ಮಾತ್ರ ನಿಮ್ಮ ಮಾರ್ಗಸೂಚಿಗಳು. ನಾವು ಅಂಗಡಿ ತೆರದು ಗಲಾಟೆ ಮಾಡುವವರಲ್ಲ. ಎಲ್ಲಾ ಮುನ್ನೆಚ್ಚರಿಕೆ ಕ್ರಮ ಕೈಗೊಂಡೆ ಓಪನ್ ಮಾಡಲು ಹೊರಟಿರುವುದು. ಆದರೂ ಶಾಸಕರು ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಮುಂದಿನ ವಾರದಿಂದ ಖಂಡಿತವಾಗಿಯೂ ವೀಕೆಂಡ್ ಕರ್ಫ್ಯೂವನ್ನು ನಿಲ್ಲಿಸಲಾಗುವುದು ಎಂದು ಭರವಸೆ ಕೊಟ್ಟಿರುವುದು ಮತ್ತು ನಿಮ್ಮ ಈ ಮನವಿಗೂ ಬೇಸರದಿಂದ ಆದರೂ ಒಪ್ಪುವ ನಿರ್ಧಾರಕ್ಕೆ ಬಂದಿದ್ದೇವೆ.

ತಾಲೂಕು ಪಾಸಿಟಿವಿಟಿ ರೇಟ್‌ನಲ್ಲಿ ಕರ್ಫ್ಯೂ ಅಳವಡಿಸಿ

ಸ್ವರ್ಣೋದ್ಯಮಿ ಕೃಷ್ಣನಾರಾಯಣ ಮುಳಿಯ ಅವರು ಮಾತನಾಡಿ ಯಾವುದೇ ಗಡಿ ಭಾಗದಿಂದ ಪುತ್ತೂರಿಗೆ ಬರುವವರು ಕಡಿಮೆ ಎಲ್ಲರೂ ಮಂಗಳೂರಿಗೆ ಹೋಗುವುದು. ಅದೂ ಅಲ್ಲದೆ ಪುತ್ತೂರಿನಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆ ಇದೆ. ಹಾಗಾಗಿ ತಾಲೂಕಿಗೆ ಸೀಮಿತವಾಗಿ ಕರ್ಫ್ಯೂ ಮಾಡುವುದು ಉತ್ತಮ. ಮಂಗಳೂರಿನಲ್ಲಿ ಕೋವಿಡ್ ಜಾಸ್ತಿ ಆದರೆ ಪುತ್ತೂರು ಏನು ಮಾಡಿದೆ. ಇಲ್ಲಿ ಕರ್ಫ್ಯೂ ಯಾಕೆ ಎಂಬುದು ನಮ್ಮ ಪ್ರಶ್ನೆ. ಅದೂ ಅಲ್ಲದೆ ಮದ್ಯದ ಅಂಗಡಿ ತೆರೆಯಲು ಅವಕಾಶವಿದೆ. ಅಲ್ಲಿ ಎಸ್‌ಎಮ್‌ಎಸ್ ಎಲ್ಲಿಯೂ ಪಾಲನೆ ಆಗುತ್ತಿಲ್ಲ. ಜೊತೆಗೆ ಸರಕಾರಿ ಇಲಾಖೆ ಕಚೇರಿಯಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸದೆ ಬಂದಾಗ ಆ ವ್ಯಕ್ತಿಗೆ ದಂಡ ಹಾಕುತ್ತಾರೆ. ಇದು ಯಾವ ನ್ಯಾಯ. ಸರಕಾರಿ ಕಚೇರಿಯಲ್ಲೂ ಸಾರ್ವಜನಿಕರಿಗೆ ದಂಡ ಹಾಕುವ ಬದಲು ಅಲ್ಲಿನ ಅಧಿಕಾರಿಗಳಿಗೆ ದಂಡ ಹಾಕಬೇಕು. ಅದೇ ಗ್ರಾಹಕ ನಮ್ಮ ಅಂಗಡಿ ಬಂದಾಗ ಅಂಗಡಿ ಮಾಲಕರಿಗೆ ದಂಡ ಹಾಕುತ್ತಾರೆ. ಅದೇ ಬಸ್‌ನಲ್ಲಿ ಜನ ತುಂಬಿಸಿ ಓಟಾಟ ನಡೆಯುತ್ತಿದೆ. ಅದೇ ಅಂಗಡಿ, ಮಳಿಗೆಯಲ್ಲ ಒಂದೆರಡು ಗ್ರಾಹಕರ ಬಂದರೂ ದಂಡ ಹಾಕುವುದು ಸರಿಯಲ್ಲ. ಬಸ್‌ನಲ್ಲೂ ನಿಯಮ ಪಾಲಿಸಬೇಕು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.

ಕೇರಳದ ಗಡಿ ಭಾಗದಲ್ಲಿ ಚೆಕ್ ಪೋಸ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ

ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಮಾತನಾಡಿ ಪಾಸಿಟಿವಿಟಿ ರೇಟ್ ೨ ಕ್ಕಿಂತ ಕಡಿಮೆ ಆದರೆ ಶಾಲೆಯೂ ಆರಂಭಗೊಳ್ಳುತ್ತದೆ. ಆದರೆ ಕೇರಳದವರು ದಕ್ಷಿಣ ಕನ್ನಡವನ್ನು ಜಾಸ್ತಿ ಅವಲಂಭಿಸಿದ ಹಿನ್ನೆಲೆಯಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ ಎಂದರು. ಆಕ್ಷೇಪಿಸಿದ ಕೃಷ್ಣನಾರಾಯಣ ಮುಳಿಯ ಅವರು ಕೇರಳದ ಗಡಿ ಭಾಗದಲ್ಲಿ ಚೆಕ್ ಪೋಸ್ಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಕಲಿ ಪ್ರಮಾಣ ಪತ್ರದ ಮೂಲಕ ಬರುತ್ತಿದ್ದಾರೆ, ಪ್ರಮಾಣ ಪತ್ರಕ್ಕೆ ಕೋಡ್ ಸ್ಕ್ಯಾನರ್ ಅಳವಡಿಸಿ ಎಂದರು. ಉತ್ತರಿಸಿದ ತಹಶೀಲ್ದಾರ್ ಈ ಕುರಿತು ಈಗಾಗಲೇ ಪಳ್ಳತ್ತೂರು, ಸ್ವರ್ಗ ಮತ್ತು ಪಾಣಾಜೆಯಲ್ಲಿ ಚೆಕ್ ಪೋಸ್ಟ್ ಕಾರ್ಯನಿರ್ವಹಿಸುತ್ತಿದೆ ಎಂದರು.

ತರಕಾರಿ ಅಂಗಡಿಗೆ ಐಸ್‌ಕ್ರೀಮ್ ಮಾರಾಟ, ನಮಗೆ ಅವಕಾಶವಿಲ್ಲ

ಮೋಹನ್ ಕೋಲ್ಡ್ ಹೌಸ್‌ನ ರಾಜೇಶ್ ಕಾಮತ್ ಅವರು ಮಾತನಾಡಿ ವೀಕೆಂಡ್ ಕರ್ಫ್ಯೂವಿನಿಂದಾಗಿ ನಮ್ಮ ಸೀಸನ್‌ನಲ್ಲಿ ತುಂಬಾ ಆರ್ಥಿಕ ನಷ್ಟ ಉಂಟಾಗುತ್ತದೆ. ನಾವು ಅಂಗಡಿ ತೆರೆದರೆ ನಗರಸಭೆ ಅಧಿಕಾರಿಗಳು ಮುಚ್ಚಲು ಸೂಚಿಸಿದ್ದಾರೆ ಎಂದರು.  ನಮ್ಮಲ್ಲಿ ಐಸ್‌ಕ್ರೀಮ್, ಜ್ಯೂಸ್ ಮಾರಾಟ ಮಾಡುವ ಹಾಗಿಲ್ಲ. ಆದರೆ ತರಕಾರಿ ಅಂಗಡಿಯಲ್ಲಿ ಐಸ್‌ಕ್ರೀಮ್ ಮಾರಾಟ ಮಾಡಬಹುದಾ ಎಂದು ಪ್ರಶ್ನಿಸಿದರು. ಉತ್ತರಿಸಿದ ತಹಶೀಲ್ದಾರ್ ನಿಮಗೂ ಪಾರ್ಸಲ್ ನೀಡಲು ಅವಕಾಶವಿದೆ ಎಂದರು. ಧ್ವನಿಗೂಡಿಸಿದ ಪೌರಾಯುಕ್ತರು ಈ ಕುರಿತು ನಾನು ಅಧಿಕಾರಿಗಳಿಗೆ ಹೊಟೇಲ್ ಜ್ಯೂಸ್ ಅಂಗಡಿಗಳಲ್ಲಿ ಪಾರ್ಸೆಲ್ ಅವಕಾಶಕ್ಕೆ ನೀಡುವಂತೆ ಸೂಚನೆ ನೀಡುತ್ತೇನೆ ಎಂದರು. ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಕೇಶವ ಪೈ ಅವರು ವಾರದ ಶನಿವಾರವಾದರೂ ಅಂಗಡಿ ತೆರವಿಗೆ ಅವಕಾಶ ನೀಡಿ. ಬೇಕಾದರೆ ಆದಿತ್ಯವಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಎಂದರು.

ವೀಕೆಂಡ್ ಕರ್ಫ್ಯೂ ಮಾರ್ಗಸೂಚಿ ಪ್ರಕಾರ ನಿರ್ಧಾರ ಕೈಗೊಳ್ಳಿ

ಪೌರಾಯುಕ್ತ ಮಧು ಎಸ್ ಮನೋಹರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ವರ್ತಕರು ವೀಕೆಂಡ್ ಕರ್ಫ್ಯೂವಿನಲ್ಲಿ ಅಂಗಡಿ ತೆರೆದು ಪ್ರತಿಭಟನೆ ಮಾಡುತ್ತಿರುವ ಮಾಹಿತಿಯಂತೆ ತುರ್ತಾಗೆ ಈ ಸಭೆ ಕರೆದಿದ್ದೇವೆ. ಜಿಲ್ಲೆಯಲ್ಲಿ ಶೇ.೮ ರಷ್ಟು ಪಾಸಿಟಿವಿಟಿ ರೇಟ್ ಇದೆ. ನಗರ ವ್ಯಾಪ್ತಿಯಲ್ಲಿ ಕಡಿಮೆ ಇದ್ದರೂ ದಕ್ಷಿಣ ಕನ್ನಡದಲ್ಲಿ ಜಾಸ್ತಿ ಇದೆ. ಈ ನಡುವೆ ಹತ್ತಿರದ ಕೇರಳದಲ್ಲಿ ಶೇ.೧೮ ಪಾಸಿಟಿವಿಟಿ ಇದೆ. ಗಡಿ ಭಾಗದಿಂದ ಕೇರಳದವರು ನಗರಪ್ರದೇಶಕ್ಕೆ ಬರುವ ಸಾಧ್ಯತೆ ಬಹಳಷ್ಟಿದೆ ಎಂದು ವೀಕೆಂಡ್ ಕರ್ಫ್ಯೂ ಜಾರಿ ಆಗಿರುವುದು. ಇದನ್ನು ಪಾಲನೆ ಮಾಡುವುದು ಅವಶ್ಯಕ. ಮಾರ್ಗ ಸೂಚಿ ಹೊರತು ನಿರ್ವಹಣೆ ಮಾಡಿದರೆ ನಮ್ಮಿಂದ ಏನು ಮಾಡಬಹುದೋ ಅದನ್ನು ಮಾಡಬೇಕಾಗುತ್ತದೆ ಎಂದ ಅವರು ವೀಕೆಂಡ್ಯ ಕರ್ಫ್ಯೂವಿನ ಮಾರ್ಗಸೂಚಿಯನ್ನು ಸಭೆಯಲ್ಲಿ ಮಂಡಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಅವರು ಕೋವಿಡ್ ಮಾರ್ಗಸೂಚಿ ಪಾಲಿಸಿ ವೀಕೆಂಡ್ ಕರ್ಫ್ಯೂವಿನಲ್ಲಿ ವರ್ತಕರು ಸಹಕರಿಸುವಂತೆ ಮನವಿ ಮಾಡಿದರು. 

ವರ್ತರಕ ಸಂಘದ ಪ್ರಧಾನ ಕಾರ್ಯದರ್ಶಿ ಅರವಿಂದ ಭಗವಾನ್, ಸ್ನೇಹ ಸಂಸ್ಥೆಯ ಸತೀಶ್ ಎಸ್, ಯಂ.ರಾಜೇಶ್ ಕಾಮತ್, ಉಮ್ಮರ್ ಪಾರೂಕ್, ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪೂರ್ವಾಧ್ಯಕ್ಷ ಪದ್ಮನಾಭ ಶೆಟ್ಟಿ, ಮಧುಸೂಧನ್ ಶೆಣೈ, ಚಿದಾನಂದ ಶೆಟ್ಟಿ, ಮನಮೋಹನ್ ಶೆಟ್ಟಿ, ಸಂಜೀವ ಶೆಟ್ಟಿ ಸಂಸ್ಥೆಯ ಸೂರಜ್ ಎಮ್, ಸಂತೋಷ್ ಎಮ್, ಶಂಕರ್ ಭಟ್ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು. ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಕ ರಾಮಚಂದ್ರ, ಕಂದಾಯ ನಿರೀಕ್ಷಕ ರಾಧಾಕೃಷ್ಣ ಗೌಡ, ರಾಜೇಶ್ ನಾಕ್, ಪುರುಷೋತ್ತಮ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.