HomePage_Banner
HomePage_Banner
HomePage_Banner
HomePage_Banner

ಸವಣೂರು ಬೊಳ್ಳಿ ಬೊಲ್ಪು ತುಳುಕೂಟದಿಂದ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್‌ರವರಿಗೆ ಅಭಿನಂದನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ವತಿಯಿಂದ ಪುತ್ತೂರು ನಗರಸಭಾ ಅಧ್ಯಕ್ಷ ಜೀವಂದರ್ ಜೈನ್‌ರವರನ್ನು ಸೆ. 3ರಂದು ಸವಣೂರು ಪುದುಬೆಟ್ಟು ಜಿನಬಸದಿಯ ವಠಾರದಲ್ಲಿ ಸರಳ ರೀತಿಯಲ್ಲಿ ಅಭಿನಂದಿಸಲಾಯಿತು.

ಪುತ್ತೂರು ನಗರಸಭಾ ಅಧ್ಯಕ್ಷರಾಗಿ ಆಯ್ಕೆಗೊಂಡ ಬಳಿಕ, ಪ್ರಪ್ರಥಮ ಬಾರಿಗೆ ಇತಿಹಾಸ ಪ್ರಸಿದ್ದ ಸವಣೂರು ಪುದುಬೆಟ್ಟು ಜಿನ ಬಸದಿಗೆ ಆಗಮಿಸಿದರು. ಜೀವಂಧರ್ ಜೈನ್‌ರವರಿಗೆ ಸವಣೂರು ಪುದುಬೆಟ್ಟು ಜಿನ ಬಸದಿಯ ಆಡಳಿತ ಸಮಿತಿಯ ಅಧ್ಯಕ್ಷ ಶತ್ರುಂಜಯ ಅರಿಗ ಬೆಳಂದೂರುಗುತ್ತುರವರು ಜಿನ ಬಸದಿಯ ಪ್ರಸಾದವನ್ನು ನೀಡಿ, ಗೌರವಿಸಿದರು. ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಕೆ.ಸೀತಾರಾಮ ರೈರವರು ಶಾಲು ಹೊದಿಸಿ, ಪುಸ್ತಕ ಸ್ಮರಣಿಕೆಯನ್ನು ನೀಡಿ ನಗರ ಸಭಾ ಅಧ್ಯಕ್ಷರನ್ನು ಅಭಿನಂದಿಸಿದರು. ಜೀವಂಧರ್ ಜೈನ್‌ರವರು ಅಭಿನಂದನೆಗೆ ಕೃತಜ್ಞತೆಯನ್ನು ಸಲ್ಲಿಸಿದರು.

ಪ್ರಕಾಶ್ ಕುಮಾರ್ ಅರಿಗ ಬಂಬಿಲಗುತ್ತು, ಉದ್ಯಮಿ ಎನ್.ಸುಂದರ ರೈ ಸವಣೂರು, ಕರ್ನಾಟಕ ರಾಜ್ಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಇದರ ನಿರ್ದೇಶಕ ರಾಜಶೇಖರ್ ಜೈನ್ ನಿರ್ಪಾಜೆ, ಯುವ ಉದ್ಯಮಿ ರಾಜರಾಮ್ ಪ್ರಭು ಆಶ್ವಿನಿ ಫಾರ್ಮ್, ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ನಿರ್ದೇಶಕರಾದ, ಸುಳ್ಯ ವಿಧಾನ ಸಭಾ ಕ್ಷೇತ್ರದ ಅಕ್ರಮ ಸಕ್ರಮ ಸಮಿತಿ ಸದಸ್ಯ
ರಾಕೇಶ್ ರೈ ಕೆಡೆಂಜಿ, ಪ್ರಧಾನ ಕಾರ್‍ಯದರ್ಶಿ ಉಮಾಪ್ರಸಾದ್ ರೈ ನಡುಬೈಲು, ಉಪಾಧ್ಯಕ್ಷ ರಾಮಕೃಷ್ಣ ಪ್ರಭು ಸವಣೂರು, ಕೋಶಾಧಿಕಾರಿ ತಾರಾನಾಥ ಕಾಯರ್ಗ, ಪ್ರಗತಿಪರ ಕೃಷಿಕ ಅಜಿತ ಪ್ರಸಾದ್ ರೈ ಮೂಡಾಯೂರು, ನರಿಮೊಗರು ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್‍ಯದರ್ಶಿ ಕೃಷ್ಣರಾಜ್, ಸಂಪತ್ ಕುಮಾರ್ ಇಂದ್ರ, ಗಂಗಾಧರ್ ಪೆರಿಯಡ್ಕ, ಸಂಪತ್ ಸೊಂಪಾಡಿರವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.