HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ ವರ್ತಕ ಸಂಘದೊಂದಿಗೆ ತಾಲ್ಲೂಕು ಆಡಳಿತ ಸಭೆ | ವೀಕೆಂಡ್ ಕರ್ಪ್ಯೂ ಪಾಲಿಸಿ ಈ ಬಾರಿ ಸಹಕಾರ ನೀಡಿ-ತಹಸೀಲ್ದಾರ್

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 

  • ಪ್ರತಿಭಟನಾ ನಿರ್ಣಯ ೧ ವಾರದ ಮಟ್ಟಿಗೆ ಮುಂದೂಡಿಕೆ-ವರ್ತಕ ಸಂಘ
  • ಮುಂದಿನ ವಾರ ವೀಕೆಂಡ್ ಕರ್ಪ್ಯೂ ಹಿಂಪಡೆಯುವ ಸಾಧ್ಯತೆ ಇದೆ-ರಮೇಶ್ ಬಾಬು
  • ಶಾಸಕರು, ತಹಸೀಲ್ದಾರ್ ಭರವಸೆ ಮೇರೆಗೆ ಈ ವಾರಕ್ಕೆ ನಿಲುವು ಬದಲಾಯಿಸಿದ್ದೇವೆ-ಪ್ರಶಾಂತ್ ಡಿ’ಕೋಸ್ತ

ಉಪ್ಪಿನಂಗಡಿ: ಕೊರೊನಾ ಪ್ರಸಹರಿಸುವುದನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ವೀಕೆಂಡ್ ಕರ್ಪ್ಯೂ ನಿಯಮಾವಳಿಯನ್ನು ಜಾರಿಗೊಳಿಸಿದ್ದು, ಕಳೆದೆರಡು ವರ್ಷಗಳಿಂದ ನೀಡಿದ ಸಹಕಾರದಂತೆ ಈ ಬಾರಿಯೂ ಸಹಕರಿಸಬೇಕು. ಅವಶ್ಯಕ ಸೇವೆ ಹೊರತುಪಡಿಸಿ ಬೇರಾವ ಅಂಗಡಿಗಳನ್ನು ತೆರೆಯದೆ ವೀಕೆಂಡ್ ಕರ್ಪ್ಯೂ ಪಾಲಿಸಿ ವರ್ತಕರು ಸಹಕರಿಸಬೇಕು ಎಂದು ತಹಸೀಲ್ದಾರ್ ರಮೇಶ್ ಬಾಬು ಉಪ್ಪಿನಂಗಡಿ ವರ್ತಕರನ್ನು ವಿನಂತಿಸಿದ್ದಾರೆ.

ಸತತ ವೀಕೆಂಡ್ ಕರ್ಪ್ಯೂ ನಿಯಮಾವಳಿಯಿಂದಾಗಿ ವರ್ತಕ ಸಮುದಾಯ ಸಂಕಷ್ಠಕ್ಕೀಡಾಗಿರುವುದರಿಂದ ಅವಶ್ಯಕ ವಸ್ತುಗಳ ಮಾರಾಟಕ್ಕೆ ಇರುವ ಸಮಯಾವಕಾಶದಲ್ಲಿ ಎಲ್ಲಾ ವರ್ತಕರಿಗೂ ವ್ಯಾಪಾರ ಮಾಡಲು ಅವಕಾಶ ನೀಡಬೇಕು ಎಂದು ಉಪ್ಪಿನಂಗಡಿ ವರ್ತಕ ಸಂಘ ಸಲ್ಲಿಸಿದ ಮನವಿಗೆ ಸಂಬಂಧಿಸಿದ ತಾಲ್ಲೂಕು ಆಡಳಿತ ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸೆ. ೩ರಂದು ಕರೆಯಲಾದ ವಿಶೇಷ ಸಭೆಯಲ್ಲಿ ಮಾತನಾಡಿ ವರ್ತಕರ ಮನವೊಲಿಸಿದರು.

ಆಗ ವರ್ತಕ ಸಂಘದ ಸದಸ್ಯರು ಪ್ರತಿಕ್ರಿಯಿಸಿ ಮಾತನಾಡಿ ಸರ್ಕಾರಕ್ಕೆ ಆದಾಯ ತರುವುದೆಂಬ ಕಾರಣಕ್ಕೆ ಮದ್ಯವನ್ನು ಅವಶ್ಯಕ ವಸ್ತು ಎಂದು ಪರಿಗಣಿಸಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ವಾರಕ್ಕೆ ಎರಡು ದಿನದಂತೆ ತಿಂಗಳಿಗೆ ೮ ದಿನ ವೀಕೆಂಡ್ ಕರ್ಪ್ಯೂ ಕಾರಣಕ್ಕೆ ಅಂಗಡಿ ಬಂದ್ ಮಾಡಿದರೆ ಅಂಗಡಿಯ ಬಾಡಿಗೆ ಪಾವತಿಸುವುದು ಹೇಗೆ? ಸಿಬ್ಬಂದಿಗೆ ಸಂಬಳ ನೀಡುವುದು ಹೇಗೆ? ವಿದ್ಯುತ್ ಬಿಲ್, ಸಾಲದ ಕಂತುಗಳನ್ನು ಪಾವತಿಸುವುದು ಹೇಗೆ? ಸರ್ಕಾರದಿಂದ ಯಾವುದೇ ಪರಿಹಾರದ ಸ್ಪಂದನ ಲಭಿಸದೆ ಇರುವಾಗ, ಪದೇ ಪದೇ ವೀಕೆಂಡ್ ಕರ್ಪ್ಯೂ ಹೆಸರಿನಲ್ಲಿ ವರ್ತಕರನ್ನು ಶೋಷಿಸುವುದು ಸರಿಯಲ್ಲ. ಅವಶ್ಯಕ ಸೇವೆಗೆ ನೀಡಿದ ಸಮಯಾವಕಾಶದಲ್ಲೇ ಉಳಿದೆಲ್ಲಾ ವ್ಯಾಪಾರಕ್ಕೂ ಅವಕಾಶ ನೀಡಿ ಎಂದು ವರ್ತಕರು ವಿನಂತಿಸಿದರು.

ಇದಕ್ಕೆ ತಹಸೀಲ್ದಾರ್ ರಮೇಶ್ ಬಾಬು ಪ್ರತಿಕ್ರಿಯಿಸಿ ವರ್ತಕ ಸಮುದಾಯಯದ ನೋವು ಅರ್ಥವಾಗಿದೆ. ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಆದರೆ ಸರಕಾರದ ನಿಯಮವನ್ನು ಜಾರಿಗೊಳಿಸುವ ಹೊಣೆಗಾರಿಕೆ ಅಧಿಕಾರಿ ವರ್ಗದ ಮೇಲಿರುವುದರಿಂದ ನಿಯಮ ಉಲ್ಲಂಘನೆಯನ್ನು ಕಾನೂನು ಕ್ರಮಕ್ಕೆ ಒಳಪಡಿಸುವುದು ನಮಗೆ ಅನಿವಾರ್ಯವಾಗಿದೆ. ಅದಾಗ್ಯೂ ಸೋಮವಾರ ಉಸ್ತುವಾರಿ ಸಚಿವರು, ಜಿಲ್ಲೆಯ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಚರ್ಚಿಸಲಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ ಕೋವಿಡ್ ಪ್ರಮಾಣ ಶೇಕಡಾ ಎರಡೂವರೆಗೆ ಇಳಿದಿದೆ ಮುಂದಿನ ವಾರ ಅದು ೨ಕ್ಕೆ ಬಂದು ನಿಂತರೆ ಸಹಜವಾಗಿಯೇ ವೀಕೆಂಡ್ ಕರ್ಪ್ಯೂ ಹಿಂಪಡೆಯುವ ಸಾಧ್ಯತೆಯೂ ಇದೆ. ಆದ ಕಾರಣ ಈ ವಾರವೊಂದು ನಮ್ಮೊಂದಿಗೆ ಸಹಕರಿಸಬೇಕು ಎಂದರು.

ಆಗ ವರ್ತಕ ಸಂಘದ ಸದಸ್ಯರು ಪ್ರತಿಕ್ರಿಯಿಸಿ ನಿಮ್ಮ ಮತ್ತು ಶಾಸಕರ ಈ ಭರವಸೆಗೆ ಮನ್ನಣೆ ನೀಡುತ್ತೇವೆ. ಈ ವಾರದ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ನಿಯಮಾವಳಿಯನ್ನು ಪಾಲಿಸುತ್ತೇವೆ, ಆದರೆ ಮುಂದಿನ ವಾರಕ್ಕೆ ಮತ್ತೆ ಇದೇ ಮುಂದುವರಿದರೆ ನಾವು ಈಗಾಗಲೇ ತೆಗೆದುಕೊಂಡಿರುವ ನಿರ್ಣಯಕ್ಕೆ ಬದ್ಧರಾಗುತ್ತೇವೆ ಎಂದರು.

ಸಭೆಯಲ್ಲಿ ಉಪ್ಪಿನಂಗಡಿ ವರ್ತಕ ಸಂಘದ ಅಧ್ಯಕ್ಷ ಪ್ರಶಾಂತ್ ಡಿ’ಕೋಸ್ತ, ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಯುನಿಕ್, ಉಪಾಧ್ಯಕ್ಷ ಶಬೀರ್ ಕೆಂಪಿ, ಪ್ರಮುಖರಾದ ಜಲೀಲ್ ಮುಕ್ರಿ, ಕೈಲಾರ್ ರಾಜಗೋಪಾಲ ಭಟ್, ಯು.ಟಿ. ತೌಸೀಫ್, ಯು.ಟಿ. ಇರ್ಷಾದ್, ಜಯಪ್ರಕಾಶ್ ಶ್ರೀನಿಧಿ, ಇಸ್ಮಾಯಿಲ್ ಇಕ್ಬಾಲ್, ರಿಯಾಝ್ ಇಂಡಿಯನ್ ಮಾತನಾಡಿ ವರ್ತಕರ ಸಂಕಷ್ಠಗಳನ್ನು ವಿವರಿಸಿದರು.
ಸಭೆಯಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಮುಳಿಯ, ಉಪಾಧ್ಯಕ್ಷ ವಿನಾಯಕ ಪೈ, ಉಪ ತಹಸೀಲ್ದಾರ್ ಚೆನ್ನಪ್ಪ ಗೌಡ, ಎಸ್.ಐ. ಕುಮಾರ್ ಕಾಂಬ್ಲೆ, ಗ್ರಾಮಕರಣಿಕ ಹರೀಶ್ ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ಸ್ವಾಗತಿಸಿ, ವಂದಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.