HomePage_Banner
HomePage_Banner
HomePage_Banner
HomePage_Banner

ಕಾರ್ತಿಕ್ ಮೇರ್ಲರವರ ದ್ವಿತೀಯ ವರ್ಷದ ಸಂಸ್ಮರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಳೆದ ಎರಡು ವರ್ಷಗಳ ಹಿಂದೆ‌ ದುಷ್ಕರ್ಮಿಗಳಿಂದ ಹತ್ಯೆಯಾದ ಹಿಂದು ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲರವರ ದ್ವಿತೀಯ ವರ್ಷದ ಸಂಸ್ಮರಣೆಯು ಸೆ.3ರಂದು ಸಂಜೆ ಸಂಪ್ಯದಲ್ಲಿರುವ ಕಾರ್ತಿಕ್ ಮೇರ್ಲರವರ ಸ್ಮಾರಕ ಬಸ್ ನಿಲ್ದಾಣದ ಬಳಿ ನಡೆಯಿತು. ಕಾರ್ತಿಕ್ ಮೇರ್ಲರವರ‌‌ ಚಿಕ್ಕಪ್ಪ ಕೇಶವ ಸುವರ್ಣ ದೀಪ ಪ್ರಜ್ಚಲನೆ ಮಾಡಿದರು. ಹಿಂದು ಜಾಗರಣ ವೇದಿಕೆ ಭೂ ಸುರಕ್ಷ ಪ್ರಮುಖ್ ಕೃಷ್ಣಪ್ರಸಾದ್ ಶೆಟ್ಟಿ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡಿದರು.


ನುಡಿ ನಮನ ಸಲ್ಲಿಸಿದ ಹಿಂದು ಜಾಗರಣ ವೇದಿಕೆ ವಿಭಾಗ ಕಾರ್ಯದರ್ಶಿ ನ್ಯಾಯವಾದಿ ಚಿನ್ಮಯ್ ರೈ ಮಾತನಾಡಿ, ಹಿಂದು ಜಾಗರಣ ವೇದಿಕೆ ಕಾರ್ಯದರ್ಶಿಯಾಗಿದ್ದ ಕಾರ್ತಿಕ್ ಮೇರ್ಲ ಹಿಂದು ಧರ್ಮದ ರಕ್ಷಣೆಗಾಗಿ ನಿರಂತರವಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಎಲ್ಲರಿಗೂ ಸ್ಫೂರ್ತಿಯ ಚಿಲುಮೆ ಯಾಗಿದ್ದರು. ದುಷ್ಕರ್ಮಿಗಳಿಂದ ಹತ್ಯೆಯಾಗಿ ಎರಡು ವಷಗಳು ಸಂದರೂ ಅವರ ಸಂಘಟನೆಯ ಸ್ಪೂರ್ತಿ ನಮಗೆಲ್ಲರಿಗೂ ಮಾರ್ಗದರ್ಶನ ಎಂದರು.

ಕಾರ್ತಿಕ್ ರವರ ಸಹೋದರ ದೀಪಕ್ ಮೇರ್ಲ, ಹಿಂದು ಜಾಗರಣ ವೇದಿಕೆ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿಅಜಿತ್ ರೈ ಹೊಸಮನೆ, ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ, ಕಾರ್ಯದರ್ಶಿ ಅವಿನಾಸ್ ಪುರುಷರಕಟ್ಟೆ, ಧನಂಜಯ‌ ಪಟ್ಲ, ನಗರ ಕಾರ್ಯದರ್ಶಿ ಕಿರಣ್ ಬೆದ್ರಾಳ, ಉಪಾಧ್ಯಕ್ಷ ಗೀತೇಶ್ ರೈ ಮಡಪ್ಪಾಡಿ, ಮಾತೃ ಸುರಕ್ಷ ಪ್ರಮುಖ್ ಸ್ವಸ್ತಿಕ್ ಸರ್ವೆ, ಕಾರ್ಯದರ್ಶಿ ಪುಷ್ಪರಾಜ್ ಸವಣೂರು, ನಗರ ಕಾರ್ಯದರ್ಶಿ ರಾಜು ಕೋರ್ಟುರಸ್ತೆ, ಮನೀಷ್ ಕುಲಾಲ್, ರಜನೀಶ್,‌ಮನೀಷ್‌ ಬಿರ್ವ,‌ಮನೋಜ್, ಪ್ರೀತಂ ಆರ್ಲಪದವು, ಸಹೋದರ ದೀಪಕ್ ಸೇರಿದಂತೆ ಹಲವು ಮಂದಿ‌ ಕಾರ್ಯಕರ್ತರು ಭಾಗವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.