HomePage_Banner
HomePage_Banner
HomePage_Banner
HomePage_Banner

ಕಲ್ಲುಗುಡ್ಡೆ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಗುರುಶ್ರೀ ಸ್ವಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ನೂಜಿಬಾಳ್ತಿಲ-ಕಲ್ಲುಗುಡ್ಡೆ ಶಾಖೆಯ ಗುರುಶ್ರೀ ಸ್ವ ಸಹಾಯ ಸಂಘಗಳ ಸದಸ್ಯರಿಗೆ ಲಾಭಾಂಶ ವಿತರಣೆ ಕಾರ್ಯಕ್ರಮ ಕಲ್ಲುಗುಡ್ಡೆ ಜೆಜೆ ಆಡಿಟೋರಿಯಂ ಸಭಾಂಗಣದಲ್ಲಿ ಸೆ.3ರಂದು ನಡೆಯಿತು. ಜೆಜೆ ಆಡಿಟೋರಿಯಂ ಮಾಲಕ ಸ್ಯಾಮುವೆಲ್ ಜೋಸ್‌ರವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಗ್ರಾಮದ ಎಲ್ಲಾ ಸಮುದಾಯದ ಜನರನ್ನು ಒಗ್ಗೂಡಿಸಿ ಆರ್ಥಿಕ ವ್ಯವಹಾರ ನಡೆಸುವಲ್ಲಿ ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘ ಯಶಸ್ವಿಯಾಗಿದೆ. ಜತೆಗೆ ಇಲ್ಲಿನ ಸಿಬ್ಬಂದಿಗಳು ಕೂಡ ಗ್ರಾಹಕರೊಂದಿಗೆ ಉತ್ತಮ ರೀತಿಯಲ್ಲಿ ವ್ಯವಹರಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದು ಹೇಳಿ ಸಂಸ್ಥೆ ಉತ್ತರೋತ್ತರ ಅಭಿವೃದ್ಧಿ ಹೊಂದಲಿ ಎಂದು ಹೇಳಿ ಶುಭಹಾರೈಸಿದರು.


ನೂಜಿಬಾಳ್ತಿಲ ಶಾಖಾ ಸಲಹಾ ಸಮಿತಿ ಅಧ್ಯಕ್ಷ ವಸಂತ ಪೂಜಾರಿ ಬದಿಬಾಗಿಲುರವರು ಸ್ವ ಸಹಾಯ ಸಂಘದ ಸದಸ್ಯರಿಗೆ ಉಡುಗೊರೆ ವಿತರಣೆ ಮಾಡಿ ಮಾತನಾಡಿ, ನೂಜಿಬಾಳ್ತಿಲ, ರೆಂಜಿಲಾಡಿ ಗ್ರಾಮದ ಜನರ ಸಹಕಾರ, ಜೆಜೆ ಆಡಿಟೋರಿಯಂ ಮಾಲಕ ಸ್ಯಾಮುವೆಲ್ ಜೋಸ್ ಅವರ ಪ್ರಯತ್ನದಿಂದ ಕಲ್ಲುಗುಡ್ಡೆ ಶಾಖೆ ಆರಂಭಿಸಲು ನಮಗೆ ಸಾಧ್ಯವಾಗಿದೆ. ಬ್ಯಾಂಕ್, ಶಾಲೆ, ಧಾರ್ಮಿಕ ಕೇಂದ್ರಗಳು ಎಲ್ಲಾ ಸಮುದಾಯದವರಿಗೂ ಸಂಬಂಧಿಸಿರುವಂತಹದ್ದು, ಆರ್ಥಿಕ ನೆರವು ಪಡೆದ ಸದಸ್ಯರು ತಮ್ಮ ಕುಟುಂಬದ ಅಭಿವೃದ್ಧಿ ಉದ್ದೇಶಗಳಿಗೆ ಬಳಸಿಕೊಂಡಾಗ ನಮ್ಮ ಗುರಿ ಮುಟ್ಟಲು ಸಾಧ್ಯ ಎಂದರು.

ಆಲಂಕಾರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮುತ್ತಪ್ಪ ಪೂಜಾರಿ ನೈಯ್ಯಲ್ಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಘದ ನಿರ್ದೇಶಕ, ನಿಕಟಪೂರ್ವ ಅಧ್ಯಕ್ಷ ಕೆ.ಚಂದ್ರಶೇಖರ ಆಲಂಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಸಹಾಯಕ ಕಾರ್ಯನಿರ್ವಾಹಣಾಧಿಕಾರಿ ಯೋಗೀಶ್ ಕುಮಾರ್ ಅಗತ್ತಾಡಿಯವರು ಸ್ವ ಸಹಾಯ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಿದರು. ಗುರುಶ್ರೀ ಸ್ವಸಹಾಯ ಸಂಘದ ಸದಸ್ಯರಿಗೆ ಲಾಭಾಂಶದ ಜೊತೆಗೆ ಸಂಘದ ವತಿಯಿಂದ ಉಡುಗೊರೆ ನೀಡಲಾಯಿತು.

ನೂತನ ಸಂಘಗಳ ಉದ್ಘಾಟನೆ
ನೂತನ ಗುರುಶ್ರೀ ಸ್ವಸಹಾಯ ಸಂಘಗಳಾದ ವನದುರ್ಗೆ, ಸೈಂಟ್ ಜಾರ್ಜ್, ಏಕದಂತ ಹಾಗೂ ಧರ್ಮದೈವ ಸಂಘಗಳನ್ನು ಈ ಸಂದರ್ಭದಲ್ಲಿ ಉದ್ಘಾಟಿಸಲಾಯಿತು. ಸಂಘದ ನಿರ್ದೇಶಕ ಜಯಪ್ರಕಾಶ್ ದೋಳರವರು ಸಂಘದ ಸದಸ್ಯರಿಗೆ ದಾಖಲೆ ಹಸ್ತಾಂತರಿಸಿ ನೂತನ ಸ್ವ ಸಹಾಯ ಸಂಘವನ್ನು ಉದ್ಘಾಟಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಿಂಗಪ್ಪ ಪೂಜಾರಿ ನೈಯ್ಯಲ್ಗ ಸ್ವಾಗತಿಸಿದರು. ಕುಸುಮಾಧರ ಎನ್ಕಾಜೆ ವಂದಿಸಿದರು. ಸಿಬ್ಬಂದಿ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕೊಯಿಲ ಶಾಖಾ ಸಲಹಾ ಸಮಿತಿಯ ಅಧ್ಯಕ್ಷ ಜನಾರ್ದನ ಕದ್ರ, ಕಡಬ ಶಾಖಾ ಸಲಹ ಸಮಿತಿ ಉಪಾಧ್ಯಕ್ಷ ಆನಂದ, ಗೋಪಿನಾಥ್ ನಿಡ್ಮೇರ್, ಹರಿಶ್ಚಂದ್ರ ಪಲಯಮಜಲು, ಶ್ರೀಧರ ಪೂಜಾರಿ ಕಂಪ, ಕುಸುಮಾಧರ ಎನ್ಕಾಜೆ, ಸಂಜೀವ ಪೂಜಾರಿ ನೈಲ, ಸೀಮಾ ಶಶಿಧರ್, ಸೇಸಪ್ಪ ಪೂಜಾರಿ ನೆಕ್ಕಿಲಾಡಿ, ಗಂಗಾಧರ ಅಗತ್ತಾಡಿ ಮತ್ತಿತರರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.