HomePage_Banner
HomePage_Banner
HomePage_Banner
HomePage_Banner

‘ಯಶದ ಸೊಗಕೆ ಗೌರವದೊಸಗೆ’ – ಶಿಕ್ಷಕರೆಲ್ಲರು ಸೇರಿ ರಚಿಸಿದ ಬಿ.ಇ.ಒ ಸಿ.ಲೋಕೇಶ್ ಜೀವನ, ವೃತ್ತಿ ಪಯಣದ ‘ಯಶೋಗಾಥಾ’

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಶಿಕ್ಷಕರ ದಿನಾಚರಣೆಯಂದು ಅನಾವರಣ

ಪುತ್ತೂರು: ಶಿಕ್ಷಣ ಕ್ಷೇತ್ರದ ಏರಿಳಿತಗಳಿಗಂಜದೆ ನಿರಂತರ ಕರ್ತವ್ಯ, ನಿಷ್ಟ ಸಾಧನೆಯ ಛಲದಿಂದ ಶಿಕ್ಷಣ ಇಲಾಖೆಯನ್ನು ನಲವತ್ತು ಸರಕಾರಿ ಇಲಾಖೆಗಳಲ್ಲೇ ಪ್ರಥಮಸ್ಥಾನಿಯಾಗಿಸಿ ತಾನೂ ಅತ್ಯುತ್ತಮ ಅಧಿಕಾರಿಯಾಗಿ ‘ಪ್ರಜಾಮತ’ ಗಳ ಮೂಲಕ ಹೊರಹೊಮ್ಮಿರುವ ಕೀರ್ತಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರಾದ ಲೋಕೇಶ್. ಸಿ. ಯವರದು. ಈ ನಿಟ್ಟಿನಲ್ಲಿ ಪುತ್ತೂರಿನ ಶಿಕ್ಷಕರೆಲ್ಲರ ಸಹಕಾರ, ಸದಾಶಯದಗಳೊಂದಿಗೆ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಯವರ ಜೀವನ, ವೃತ್ತಿ ಪಯಣವನ್ನಾಧರಿಸಿದ ಹೊಸ ಪರಿಕಲ್ಪನೆಯ ‘ಯಶೋಗಾಥಾ’ ಎಂಬ ಹೊತ್ತಗೆಯು ಸೆ.5ರಂದು ಇಲ್ಲಿನ ಪುರಭವನದಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅನಾವರಣಗೊಳ್ಳಲಿದೆ.

ಎಡೆಬಿಡದೆ ಕಾಡಿದ ಕೊರೊನಾ ಲಾಕ್ಡೌನ್ ಸಮಸ್ಯೆಗಳನ್ನು ಕಡೆಗಣಿಸಿ ಎಸ್. ಎಸ್. ಎಲ್. ಸಿ ಪರೀಕ್ಷೆಯ ಜತೆ ಎಲ್ಲಾ ವಿದ್ಯಾರ್ಥಿಗಳ ಸುಗಮ ಕಲಿಕೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಹೆಣೆದ ಕಾರ್ಯತಂತ್ರ ರಾಜ್ಯವ್ಯಾಪಿ ಪ್ರಶಂಸೆಗೊಳಗಾಯಿತು. ನಿರಂತರ, ತತ್ಪರ ಕಾರ್ಯಪ್ರವೃತ್ತಿಯೊಂದಿಗೆ ನಡೆಸಿದ ಪುತ್ತೂರು ತಾಲೂಕಿನ ಅವಿರತ ಶಿಕ್ಷಣ ಸೇವೆಗಾಗಿ ಅವರನ್ನು ಅಭಿನಂದಿಸುವ ಕಾರ್ಯವನ್ನು ಅವರ ಯಶೋಗಾಥಾ ಕೃತಿಯ ಮೂಲಕ ಶಿಕ್ಷಕರು ಮಾಡಲಿದ್ದಾರೆ. ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ, ಶಾಸಕ ಸಂಜೀವ ಮಠಂದೂರು ಮತ್ತು ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಮಲ್ಲೇಸ್ವಾಮಿಯವರ ಶುಭನುಡಿಗಳೊಂದಿಗೆ ಕೃತಿಯು ಘನತೆ ಪಡೆದಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರು ಬಿ. ಐತಪ್ಪ ನಾಯ್ಕರವರ ಮಾರ್ಗದರ್ಶನ, ಸರ್ವೆ ಶಾಲಾ ಶಿಕ್ಷಕಿ ಶ್ರೀಮತಿ ಸುನೀತಾ ಎನ್.ರವರ ಪರಿಕಲ್ಪನೆ, ವಳಾಲು ಪ್ರೌಢಶಾಲಾ ಶಿಕ್ಷಕಿ ಶ್ರೀಮತಿ ಪುಷ್ಪಲತಾ. ಎಂ. ರವರ ಬರಹದ ಕಾಯಕವಿದೆ. ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯ ಗುರು ನಾರಾಯಣ ಭಟ್ ‘ಬೆಂಬಲದ ನುಡಿ’ಯಾದರೆ ಉಪ್ಪಿನಂಗಡಿ ಸ. ಪ. ಪೂ ಕಾಲೇಜು ಉಪ ಪ್ರಾಂಶುಪಾಲ ದಿವಾಕರ ಆಚಾರ್ಯ ‘ಮುನ್ನುಡಿ’ಯಾಗಿದ್ದಾರೆ. ಪುತ್ತೂರಿನ ಹೆಸರಾಂತ ಜ್ಞಾನಗಂಗಾ ಪ್ರಕಾಶನದ ಹಿರಿ ನೆರಳಿನಲ್ಲಿ ಹೊರಬರುವ ಈ ಪುಸ್ತಕದಲ್ಲಿ ಶ್ರೀಮತಿ ಜಯಲಕ್ಷ್ಮಿ ಜೋಯಿಸ್ ರವರ ವಿನ್ಯಾಸದ ಕೈಚಳಕವಿದೆ. ಲೋಕೇಶ್. ಸಿ. ಯವರ ಆಪ್ತರೂ, ನಿಕಟವರ್ತಿಗಳೂ, ಶಿಕ್ಷಣ ಇಲಾಖೆಗಳ ಮುಖ್ಯಸ್ಥರೂ ಅನುಭವಿ ಲೇಖಕರೂ, ಶುಭಾಶಯ ಕೋರಿರುವ ಈ ಕೃತಿಯು ಪುತ್ತೂರಿನ ಸಮಸ್ತ ಶಿಕ್ಷಕರ ಗೌರವದ ಉಡುಗೊರೆಯಾಗಿ ಅನಾವರಣಗೊಳ್ಳುತ್ತಾ ತಾಲೂಕಿನಲ್ಲೇ ವಿಶಿಷ್ಟ ಸಾಧನೆಯಾಗಿ ಹೊರಹೊಮ್ಮಲಿದೆ. ಈ ಐತಿಹಾಸಿಕ ಕ್ಷಣಗಳಿಗೆ ಪುತ್ತೂರು ಪುರಭವನದ ಶಿಕ್ಷಕ ದಿನಾಚರಣೆಯ ವೇದಿಕೆಯ ಗಣ್ಯ ಅತಿಥಿ ಮಹೋದಯರು ಸಾಕ್ಷಿಯಾ ಗಲಿದ್ದಾರೆಂದು ಕಛೇರಿಯ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.