HomePage_Banner
HomePage_Banner
HomePage_Banner
HomePage_Banner

ವಾರಂತ್ಯದ ಕರ್ಫ್ಯೂ ವರ್ತಕರ ಅಂಗಡಿ ತೆರೆಯದಿದ್ದರೂ ಪೇಟೆ ಫುಲ್ ರಶ್..!!

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಾರಂತ್ಯ ಕರ್ಫ್ಯೂ ತೆರವು ಮಾಡಬೇಕು ನಮಗೆ ವ್ಯವಹಾರಕ್ಕೆ ಅವಕಾಶಕೊಡಬೇಕೆಂದು ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಮನವಿ ಮಾಡಿದ್ದರೂ ಕೊನೆಗೆ ಮುಂದಿನ ವಾರ ಕರ್ಫ್ಯೂ ತೆರವುಗೊಳಿಸುವ ಕುರಿತು ಶಾಸಕರ ಭರವಸೆ ವರ್ತಕರು ಈ ವಾರ ವಾರಂತ್ಯದ ಕರ್ಫ್ಯೂ ಮಾರ್ಗಸೂಚಿ ಪಾಲಿಸಿದ್ದಾರೆ. ಆದರೆ ಪುತ್ತೂರು ಪೇಟೆಯಲ್ಲಿ ವರ್ತಕರ ಅಂಗಡಿ ಹೊರತು ಪಡಿಸಿ ಉಳಿದೆಲ್ಲಾ ವ್ಯವಹಾರಗಳು ನಡೆಯುತ್ತಿದ್ದು, ಪೇಟೆ ಫುಲ್ ಎಂದಿನಂತೆ ವಾಹನ, ಸಾರ್ವಜನಿಕರ ಸಂಚಾರವಿದ್ದು, ಫುಲ್ ರಶ್ ಇರುವುದು ಕಂಡು ಬಂದಿದೆ.

ಪುತ್ತೂರು ಪೇಟೆಯಲ್ಲಿ ವಾರಾಂತ್ಯ ಕರ್ಫ್ಯೂ ಸಹಜ ಸ್ಥಿತಿಯಲ್ಲಿದ್ದು, ಕೆಸ್ಸಾರ್ಟಿಸಿ ಬಸ್ಸುಗಳು ಓಡಾಟ ನಡೆಸಿದೆ. ಬ್ಯಾಂಕ್ ಶಾಖೆಗಳು ತೆರದಿದ್ದವು. ಸರ್ವಿಸ್ ಅಟೋ ರಿಕ್ಷಾಗಳ, ಟೂರಿಸ್ಟ್ ವಾಹನಗಳ ಓಡಾಟ ಎಂದಿನಂತಿತ್ತು. ಹೊಟೇಲ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನು ನೀಡಲಾಗುತ್ತಿತ್ತು. ಖಾಸಗಿ ವಾಹನಗಳು ಎಂದಿನಂತೆ ಸಂಚಾರ ನಡೆಸಿದೆ.

ವರ್ತಕರ ಬೇಡಿಕೆ:
ದಿನಸಿ, ಹೊಟೇಲ್. ಹಾಲು, ತರಕಾರಿ, ಹಣ್ಣು ಹಂಪಲು ವ್ಯಾಪಾರದ ಜೊತೆಗೆ ಇತರ ವ್ಯಾಪಾರ ವ್ಯವಹಾರಕ್ಕೂ ವೀಕೆಂಡ್ ಕರ್ಫ್ಯೂ ಸಂದರ್ಭದಲ್ಲಿ ಅನುಮತಿ ನೀಡಬೇಕು ಎಂದು ಪುತ್ತೂರು, ಉಪ್ಪಿನಂಗಡಿ, ನೆಲ್ಯಾಡಿ ಸಹಿತ ವಿವಿಧ ಭಾಗಗಳ ವರ್ತಕ ಸಮುದಾಯದ ಬೇಡಿಕೆಯಾಗಿತ್ತು. ಆದರೆ ಕೊರೊನಾ ನಿಯಂತ್ರಣ ಮಾರ್ಗಸೂಚಿಯಲ್ಲಿ ಕೋವಿಡ್ ಪಾಸಿಟಿವಿಟಿ ಶೇ.2ಕ್ಕಿಂತ ಕಡಿಮೆ ಬಂದರೆ ಕರ್ಫ್ಯೂ ತೆರವುಗೊಳಿಸಲಾಗುವುದು ಎಂದು ಜಿಲ್ಲಾಡಳಿತ ಸೂಚನೆ ಇತ್ತು. ಈ ನಡುವೆ ವರ್ತಕರ ನಿಯೋಗ ಶಾಸಕರಲ್ಲಿಗೆ ಹೋಗಿತ್ತು. ಕೊನೆಗೆ ಶಾಸಕರು ಮುಂದಿನ ವಾರ ವೀಕೆಂಡ್ ಕರ್ಫ್ಯೂ ತೆರವು ಕುರಿತು ಸೋಮವಾರ ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಅಲ್ಲಿನ ತನಕ ಈ ವಾರದ ಸಹಕಾರ ನೀಡುವಂತೆ ಮನವಿ ಮಾಡಿದರು. ಅವರ ಮನವಿಗೆ ಸ್ಪಂಧಿಸಿದ ವರ್ತಕರು ಶನಿವಾರ ವೀಕೆಂಡ್ ಕರ್ಫ್ಯೂಗೆ ಸಹಕಾರ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.