HomePage_Banner
HomePage_Banner
HomePage_Banner
HomePage_Banner

ಕಾರ್ಯಕರ್ತರು ರಾಷ್ಟ್ರಾಭಿಮಾನದ ಸಂಕೇತಗಳಾಗಬೇಕು: ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಬಿಜೆಪಿಯು ಕಾಂಗ್ರೆಸ್‌ನಂತೆ ನಾಯಕರನ್ನು ಆಧಾರಿತವಾದ ಪಕ್ಷವಲ್ಲ. ಇದು ಕಾರ್ಯಕರ್ತರನ್ನು ಆಧಾರಿತವಾದ ಪಕ್ಷ. ಈ ದೇಶವನ್ನು ರಾಷ್ಟ್ರೋತ್ಥಾನದತ್ತ ಕೊಂಡೊಯ್ಯಬೇಕಿದ್ದು, ರಾಷ್ಟ್ರಭಿಮಾನದ ಸಂಕೇತವಾಗಿ ನಮ್ಮ ಕಾರ್ಯಕರ್ತರು ಮೂಡಿಬರಬೇಕು ಎನ್ನುವ ಆಶಯದೊಂದಿಗೆ ಪ್ರತಿ ಬೂತ್ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರನ್ನು ಗೌರವಿಸುವ ಕೆಲಸಕ್ಕೆ ಬಿಜೆಪಿಯಿಂದ ನಡೆಯಲಿದೆ ಎಂದು ಪುತ್ತೂರು ಶಾಸಕ ಸಂಜೀವ ಮಠಂದೂರು ತಿಳಿಸಿದರು. ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿಯಿಂದ ನಡೆಯಲಿರುವ ಬೂತ್ ಸಮಿತಿ ಅಧ್ಯಕ್ಷರ ನಾಮಫಲಕ ಅಳವಡಿಸುವ ಕಾರ್ಯಕ್ರಮಕ್ಕೆ ಬಜತ್ತೂರು ಗ್ರಾಮದ 45ನೇ ಬೂತ್‌ನ ಅಧ್ಯಕ್ಷ ದೇರಣ್ಣ ಗೌಡ ಓಮಂದೂರು ಅವರ ಮನೆಯಲ್ಲಿ ಸೆ.4ರಂದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಪ್ರತಿ ಬೂತ್‌ಗಳು ಬಿಜೆಪಿಯ ಅಸ್ತಿತ್ವದ ಕೇಂದ್ರಗಳಾಗಬೇಕು. ಈ ಬಾರಿ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಬಿಜೆಪಿ ಪಕ್ಷದಿಂದ ಆರಿಸಿ ಬಂದು ಪ್ರಧಾನಿಯಾದ ಮೋದಿಯವರು ನೆರವೇರಿಸಿದ್ದು, ಶತಮಾನದ ಸ್ವಾತಂತ್ರ್ಯ ಸಂಭ್ರಮದಲ್ಲಿಯೂ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಪ್ರಧಾನಿಯೇ ಈ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಬೇಕು. ಅದಕ್ಕಾಗಿ ಕಾರ್ಯಕರ್ತರು ಪ್ರತಿ ಬೂತ್‌ನಲ್ಲಿಯೂ ಬಿಜೆಪಿಯ ಅಸ್ತಿತ್ವವಿರುವಂತೆ ನೋಡಿಕೊಳ್ಳಬೇಕು. ಕಾರ್ಯಕರ್ತರೇ ಬಿಜೆಪಿ ಪಕ್ಷದ ಜೀವಾಳವಾಗಿದ್ದು, ಅವರೇ ಪಕ್ಷದ ನಾಯಕರು ಎಂದರು.

ಭ್ರಷ್ಟಾಚಾರ ಮುಕ್ತ ಸಂಕಲ್ಪ ತೊಟ್ಟು ಈ ದೇಶದ ಪ್ರಧಾನಿಯಾದ ನರೇಂದ್ರ ಮೋದಿಯವರು ತನ್ನ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ರಹಿತ ಕಾರ್ಯಕ್ರಮ ನೀಡಿದ್ದು, ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ದೇಶದ ಜನರ ಆರೋಗ್ಯ ರಕ್ಷಣೆಗಾಗಿ ಅವರು ಕೈಗೊಂಡ ಕ್ರಮದಿಂದಾಗಿ ಜಗತ್ತೇ ಮೆಚ್ಚುಗೆ ಪಡುವಂತಾಗಿದೆ. ಹಿಂದೂಗಳ ಶೃದ್ಧಾ ಕೇಂದ್ರವಾದ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಕನಸು ಮೋದಿಯವರ ಆಡಳಿತಾವಧಿಯಲ್ಲಿ ನನಸಾಗುವಂತಾಗಿದೆ. ರೈತರ ಮಕ್ಕಳಿಗೆ ಶಿಷ್ಯ ವೇತನ, ಫಸಲ್ ವಿಮಾ ಯೋಜನೆ, ಸಾಲ ಮನ್ನಾ, ಬಡ್ಡಿಮನ್ನಾ ಹೀಗೆ ಹಲವು ಉತ್ತಮ ಕಾರ್ಯಕ್ರಮಗಳನ್ನು ನೀಡುವ ಮೂಲಕ ಕೇಂದ್ರ ಹಾಗೂ ಬಿಜೆಪಿ ನೇತೃತ್ವದ ರಾಜ್ಯ ಸರಕಾರಗಳು ರೈತಾಪಿ ವರ್ಗಕ್ಕೆ, ಕೂಲಿ ಕಾರ್ಮಿಕರಿಗೆ ಉತ್ತಮ ಬದುಕು ನೀಡುವ ಕೆಲಸ ಮಾಡಿದೆ ಎಂದರು.

ವಿಭಾಗ ಪ್ರಕೋಷ್ಠದ ಸಹಪ್ರಭಾರಿ ಗೋಪಾಲ ಕೃಷ್ಣ ಹೇರಳೆ ಮಾತನಾಡಿ, ಶಾಸಕರೇ ಅವರ ಬಳಿ ತೆರಳಿ ಕಾರ್ಯಕರ್ತರನ್ನು ಗೌರವಿಸುವುದು ಅದ್ಭುತ ವಿಷಯವಾಗಿದ್ದು, ಪಕ್ಷದ ವಿಚಾರಧಾರೆಯನ್ನು ಮನೆಮನೆಗೆ ತಲುಪಿಸುವ ಕಾರ್ಯ ಕಾರ್ಯಕರ್ತರಿಂದಾಗಬೇಕು. ಕಾರ್ಯಕರ್ತರು ಮನಸ್ಸು ಮಾಡಿದ್ದಲ್ಲಿ ಎಲ್ಲಾ ಬೂತ್‌ಗಳ ಪ್ರತಿ ಮನೆಯೂ ಬಿಜೆಪಿಯ ಮನೆಗಳಾಗುತ್ತವೆ ಎಂದರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಧಾಕೃಷ್ಣ ರೈ ಬೂಡಿಯಾರ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳನ್ನು ಮನೆ ಮನೆಗೆ ತಲುಪಿಸುವಲ್ಲಿ ಬೂತ್ ಅಧ್ಯಕ್ಷರಿಗೆ ಹೆಚ್ಚಿನ ಜವಾಬ್ದಾರಿಯಿದೆ. ಇದನ್ನು ಯಶಸ್ವಿಯಾಗಿ ನಿರ್ವಹಿಸಿದಾಗ ಮಾತ್ರ ಎಲ್ಲೆಲ್ಲೂ ಬಿಜೆಪಿಯ ಕಮಲ ಅರಳಲಿದೆ ಎಂದರು. ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಗನ್ನೀವಾಸ ರಾವ್ ಮಾತನಾಡಿದರು. ವೇದಿಕೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುತ್ತೂರು ನಗರಸಭೆ ಅಧ್ಯಕ್ಷ ಜೀವಂಧರ ಜೈನ್, ಬಿಜೆಪಿ ಹಿಂದುಳಿದ ವರ್ಗ ವಿಭಾಗದ ಜಿಲ್ಲಾಧ್ಯಕ್ಷ ಆರ್.ಸಿ. ನಾರಾಯಣ, ಪುಡಾ ಅಧ್ಯಕ್ಷರಾದ ಭಾಮಿ ಆಶೋಕ್ ಶೆಣೈ, ಜಿಲ್ಲಾ ಉಪಾಧ್ಯಕ್ಷೆ ಜಯಂತಿ ನಾಯಕ್, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪುರುಷೋತ್ತಮ ಮುಂಗ್ಲಿಮನೆ, ನಿತಿನ್ ಶಾಂತಿವನ, ಬಜತ್ತೂರು ಗ್ರಾ.ಪಂ. ಅಧ್ಯಕ್ಷೆ ಪ್ರೇಮ, ಬೂತ್ ಅಧ್ಯಕ್ಷ ದೇರಣ್ಣ ಗೌಡ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಹಿಂದುಳಿದ ಮೋರ್ಚಾ ತಾಲೂಕು ಅಧ್ಯಕ್ಷ ಸುನೀಲ್ ದಡ್ಡು, ಉಪ್ಪಿನಂಗಡಿ ಮಹಾ ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ಸುರೇಶ್ ಅತ್ರೆಮಜಲು, ಉಪ್ಪಿನಂಗಡಿ ಸಿಎ ಬ್ಯಾಂಕ್ ನಿರ್ದೇಶಕರಾದ ಜಗದೀಶ್ ರಾವ್ ಮಣಿಕ್ಕಳ, ಯಶವಂತ ಗುಂಡ್ಯ, ಬಜತ್ತೂರು ಗ್ರಾ.ಪಂ. ಉಪಾಧ್ಯಕ್ಷೆ ಸ್ಮಿತಾ, ಸದಸ್ಯರಾದ ಗಂಗಾಧರ ಕೆ.ಎಸ್., ಉಮೇಶ್ ಓಡ್ರಪಾಲು, ಭಾಗೀರಥಿ, ಮಾಧವ ಒರುಂಬೋಡಿ, ಪ್ರಮುಖರಾದ ಆನಂದ ಕೆ.ಎಸ್., ಪುರುಷೋತ್ತಮ ಮಣಿಕ್ಕಳ, ಸುಧಾಕರ ಕನಿಯ, ರಮೇಶ್ ಪಂರ್ದಾಜೆ ಮತ್ತಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವು ಪುತ್ತೂರು ವಿಧಾನ ಸಭಾ ಕ್ಷೇತ್ರದ 229 ಬೂತ್‌ಗಳಲ್ಲಿ ನಡೆಯಲಿದೆ. ಉಪ್ಪಿನಂಗಡಿ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಬಜತ್ತೂರು ಸ್ವಾಗತಿಸಿದರು. ಬಜತ್ತೂರು ಶಕ್ತಿ ಕೇಂದ್ರದ ಸಂಚಾಲಕ ವಸಂತ ಪಿಜಕ್ಕಳ ವಂದಿಸಿದರು. ಗ್ರಾ.ಪಂ. ಸದಸ್ಯ ಗಂಗಾಧರ ಪಿ.ಎನ್. ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.