HomePage_Banner
HomePage_Banner
HomePage_Banner
HomePage_Banner

ಸರಕಾರಿ ಶಾಲೆಗಳಲ್ಲಿ ಸವಾಲಿನ ಮಧ್ಯೆ ಗುಣಮಟ್ಟದ ಶಿಕ್ಷಣ : ಸಚಿವ ಅಂಗಾರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೂಜಿಬಾಳ್ತಿಲ : ಸರಕಾರಿ ಶಾಲೆಗಳು ವಿವಿಧ ಸವಲತ್ತುಗಳನ್ನು ಪಡೆದುಕೊಂಡಿದ್ದರೂ, ಅಲ್ಲಿರುವ ವಿವಿಧ ಸವಾಲುಗಳ ಮಧ್ಯೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಯಶಸ್ವಿಯಾಗಿದೆ. ಮಕ್ಕಳ ಸಂಖ್ಯೆಗಳಿಗೆ ಅನುಗುಣವಾಗಿ ಶಿಕ್ಷಕರನ್ನು ಸರಕಾರ ನೇಮಕ ಮಾಡುತ್ತಿದೆ. ಜತೆಗೆ ಅತಿಥಿ ಶಿಕ್ಷಕರು ಗೌರವ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ಕಲಿಕೆಗೆ ಯಾವುದೇ ಸಮಸ್ಯೆಯಾದಂತೆ ಪೂರಕ ಕ್ರಮವನ್ನು ಸರಕಾರ ಕೈಗೊಳ್ಳುತ್ತಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು. ದ.ಕ ಜಿಲ್ಲಾಧಿಕಾರಿಗಳ ಮಳೆ ಹಾನಿ ಯೋಜನೆಯ 32 ಲಕ್ಷ ರೂ.ನಲ್ಲಿ ನಿರ್ಮಿಸಲಾದ ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ.ಶಾಲೆಯ ನೂತನ ತರಗತಿ ಕೊಠಡಿಗಳನ್ನು ಸಚಿವರು ಸೆ.1ರಂದು ಉದ್ಘಾಟಿಸಿ ಮಾತನಾಡಿದರು.

ಗೌರವಾರ್ಪಣೆ:
ಶಾಲೆಯ ನಿವೃತ್ತ ಶಿಕ್ಷಕಿ ಸಚಿದೇವಿ, ಶಾಲೆಯ ಅಭಿವೃದ್ಧಿಗೆ ಸಹಕರಿಸಿದ ಪಿಡಿಒ ಆನಂದ ಎ., ಜಿ.ಪಂ.ಕಿರಿಯ ಅಭಿಯಂತ ಹುಕ್ಕೇರಿ, ಗುತ್ತಿಗೆದಾರರಾದ ಅಶೋಕ್, ಶಾಹಿದ್, ಇಂಜಿನಿಯರ್ಗಳಾದ ದುರ್ಗಾ ಪ್ರಸಾದ್ ಕೆ.ಪಿ., ಅನಿಲ್ ಕೆರ್ನಡ್ಕ ,ಎಸ್.ಡಿ.ಎಂ.ಸಿ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ ,ಅವರನ್ನು ಸಚಿವರು ಸಮ್ಮಾನಿಸಿದರು. ಈ ವೇಳೆ ಸಚಿದೇವಿ ಅವರು ಶಾಲೆಯ ಎಲ್ಲ ತರಗತಿಗಳಿಗೆ ಡ್ರಮ್ ಅನ್ನು ಕೊಡುಗೆಯಾಗಿ ಹಸ್ತಾಂ ತರಿಸಿದರು. ಶಿಕ್ಷಕಿ ಲೂಸಿ ಸಮ್ಮಾನ ಪತ್ರವಾಚಿಸಿದರು. ನೂಜಿಬಾಳ್ತಿಲ ಗ್ರಾಮ.ಪಂ.ಅಧ್ಯಕ್ಷೆ ಗಂಗಮ್ಮಾ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳು ಮೂಲಸೌಕರ್ಯಗಳಿಂದ ಅಭಿವೃದ್ಧಿಗೊಳ್ಳುವುದರಿಂದ ಮಕ್ಕಳ ಸಂಖ್ಯೆ ಹೆಚ್ಚಾಗಲು ಹಾಗೂ ಕಲಿಕೆಗೆ ಪೂರಕ ವಾತಾವರಣ ಸಿಗಲಿದೆ ಎಂದರು.ಎಸ್.ಡಿ.ಎಂ.ಸಿ‌ ಅಧ್ಯಕ್ಷ ಲಕ್ಷ್ಮಣ ಗೌಡ ಸಾಂತ್ಯಡ್ಕ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷ ಇಮ್ಯಾನುವೆಲ್ ಪಿ.ಜೆ., ನೂಜಿಬಾಳ್ತಿಲ ಸಿ.ಆರ್.ಪಿ.ಗೋವಿಂದ ನಾಯ್ಕ್ ಪ್ರಾ.ಶಾ.ಶಿ.ಸಂಘದ ಜಿಲ್ಲಾಧ್ಯಕ್ಷ ಶಿವಪ್ರಸಾದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಮಲ್ ಕುಮಾರ್ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸುಂದರಿ ಸ್ವಾಗತಿಸಿದರು. ಶಿಕ್ಷಕಿ ಶ್ರೀಲತಾ ವಂದಿಸಿದರು. ಶಿಕ್ಷಕಿ ಗೀತಾ ಎಂ. ಕಾರ್ಯಕ್ರಮ ನಿರೂಪಿಸಿದರು.

ಮೇಲ್ದರ್ಜೆಗೆ ಕ್ರಮ:
ಸುಳ್ಯ ವಿಧಾನ ಸಭೆ ಕ್ಷೇತ್ರದಲ್ಲಿ ಅಭಿವೃದ್ಧಿ ನಿರಂತವಾಗಿ ನಡೆಯುತ್ತಿದೆ.ಅಭಿವೃದ್ಧಿ ಪೂರಕ ಯೋಜನೆಗಳಿಗೆ ಜನರ ಸಹಕಾರ ಅತ್ಯಗತ್ಯ, ನೂಜಿಬಾಳ್ತಿಲದಲ್ಲಿ 9 ಹಾಗೂ 10ನೇ ತರಗತಿ ಆರಂಭಿಸಲು ಬಂದ ಬೇಡಿಕೆಗಳ ಬಗ್ಗೆ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ, ಪೂರಕ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.