HomePage_Banner
HomePage_Banner
HomePage_Banner
HomePage_Banner

ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಕೆದಿಲ(ಗಡಿಯಾರ) ಹಿರಿಯ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕಿ ಸುಚೇತ ಆಯ್ಕೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ವಿಟ್ಲ: ಶಿಕ್ಷಕರ ದಿನಾಚರಣೆಯ ಅಂಗವಾಗಿ ಕೊಡಲ್ಪಡುವ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಕೆದಿಲ(ಗಡಿಯಾರ) ಹಿರಿಯ ಪ್ರಾಥಮಿಕ. ಶಾಲೆಯ ಮುಖ್ಯೋಪಾದ್ಯಾಯರಾದ ಸುಚೇತರವರು ಆಯ್ಕೆಯಾಗಿದ್ದಾರೆ. ಸುಚೇತರವರು ೨೦೧೬ರಲ್ಲಿ ಕೆದಿಲ(ಗಡಿಯಾರ) ಶಾಲೆಗೆ ಮುಖ್ಯೋಪಾದ್ಯಾಯರಾಗಿ ಭಡ್ತಿಹೊಂದಿ ಆಗಮಿಸಿದ್ದರು. ಬಳಿಕದ ದಿನಗಳಲ್ಲಿ ನಿರಂತರವಾಗಿ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸಲು ಹಲವಾರು ಧನಾತ್ಮಕ ಚಟುವಟಿಕೆಗಳನ್ನು ನಡೆಸಿದ್ದರು.

ಸುಚೇತರವರು ೧೯೮೮ರಲ್ಲಿ  ಮಂಗಳೂರು ತಾಲೂಕಿನ ಕಲ್ಲಾಡಿ ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕಿಯಾಗಿ ತನ್ನ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ಬಳಿಕ ೧೯೯೪ರಲ್ಲಿ ಅಡ್ಡೂರು ಹಿ.ಪ್ರಾ. ಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು. ಅಲ್ಲಿಂದ ೨೦೦೭ರಲ್ಲಿ ಪಡುಪೆರಾರು ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡಿದ್ದರು. ೨೦೧೬ರಲ್ಲಿ ಪಡುಪೆರಾರು ಶಾಲೆಯಲ್ಲಿ   ಮುಖ್ಯಶಿಕ್ಷಕಿಯಾಗಿ ಭಡ್ತಿಹೊಂದಿ ಗಡಿಯಾರ ಹಿ.ಪ್ರಾ. ಶಾಲೆಗೆ ವರ್ಗಾವಣೆಗೊಂಡು ಬಂದಿದ್ದರು. ಸುಚೇತರವರು ದಿವಂಗತ ವೈ. ಗೋಪಾಲ ಪೂಜಾರಿ – ಪದ್ಮಾವತಿ ದಂಪತಿಯ ಪುತ್ರಿಯಾಗಿದ್ದು, ಪತಿ ಬಂಟ್ವಾಳ ತಾಲೂಕಿನ ಅಮ್ಮುಂಜೆ ಅನುದಾನಿತ ಹಿ.ಪ್ರಾ ಶಾಲಾ ಶಿಕ್ಷಕ ಮಹಾಬಲ, ಪುತ್ರ ಬೆಂಗಳೂರಿನ ಸಿಸ್ಕೋ ಕಂಪೆನಿಯ ಉದ್ಯೋಗಿ ತ್ರಿಭುವನ್, ಪುತ್ರಿ ಮುಲ್ಕಿ ವಿಜಯ ಕಾಲೇಜಿನ ಬಿ.ಕಾಂ.ವಿದ್ಯಾರ್ಥಿನಿ ವೈದೇಹಿರವರೊಂದಿಗೆ ಬಂಟ್ವಾಳ ತಾಲೂಕು ಅಮ್ಟೂರು ಗ್ರಾಮದ ದಾಸಕೋಡಿ ಭಾಗ್ಯಲಕ್ಷ್ಮಿ ನಿಲಯದಲ್ಲಿ ವಾಸವಾಗಿದ್ದಾರೆ.

ಈ ಭಾರಿಯ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನನಗೆ ಲಭಿಸಿರುವುದು ತುಂಭಾ ಸಂತಸ ತಂದಿದೆ. ನಮ್ಮ ಶಾಲೆಯ ನನ್ನ ಸಹೋದ್ಯೋಗಿ ಶಿಕ್ಷಕರು, ಎಸ್.ಡಿ.ಎಂ.ಸಿ ಪದಾಧಿಕಾರಿಗಳು, ಊರವರ ಸಹಕಾರದಿಂದಾಗಿ ನನಗೆ ಈ ಪ್ರಶಸ್ತಿ ಲಭಿಸಲು ಸಾಧ್ಯವಾಗಿದೆ. ನಾನು ಮಾಡುತ್ತಿರುವ ಪ್ರತಿಯೊಂದು ಕೆಲಸದಲ್ಲು ನನ್ನ ಪತಿ ಯವರು ಸದಾ ಪ್ರೋತ್ಸಾಹ ನೀಡುತ್ತಿರುವುದರಿಂದ ನನಗೆ ಶಾಲೆಯ ಅಭಿವೃದ್ಧಿಗೆ ನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ – ಸುಚೇತ ಮುಖ್ಯೋಪಾಧ್ಯಾಯರು ಸ.ಹಿ.ಪ್ರಾ. ಶಾಲೆ ಕೆದಿಲ(ಗಡಿಯಾರ)

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.