HomePage_Banner
HomePage_Banner
HomePage_Banner
HomePage_Banner

ಕೋವಿಶೀಲ್ಡ್ ಲಸಿಕೆ ಪಾರದರ್ಶಕವಾಗಿ ನೀಡಲು ಮನವಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಉಪ್ಪಿನಂಗಡಿ: ಕೆಲವು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೋವಿಶೀಲ್ಡ್ ಲಸಿಕೆ ನೀಡುವ ಸಂದರ್ಭ ಗ್ರಾ.ಪಂ. ಸದಸ್ಯರು ಮಧ್ಯಪ್ರವೇಶಿಸಿ ಟೋಕನ್‌ಗಳನ್ನು ಎತ್ತಿಟ್ಟುಕೊಳ್ಳುತ್ತಿದ್ದು, ಸರದಿ ಸಾಲಿನಲ್ಲಿ ನಿಂತವರಿಗೆ ಕೊಡದೇ ತಮ್ಮವರಿಗೆ ಇದನ್ನು ಕೊಟ್ಟು ಅವರಿಗೆ ಮೊದಲು ಲಸಿಕೆ ಸಿಗುವಂತೆ ಮಾಡುತ್ತಿದ್ದಾರೆ. ಆದ್ದರಿಂದ ಲಸಿಕೆ ವಿತರಣೆಯಲ್ಲಿ ಯಾವುದೇ ತಾರತಮ್ಯವಿಲ್ಲದೆ, ಮೊದಲು ಬಂದವರಿಗೆ ಮೊದಲ ಆದ್ಯತೆಯ ನೆಲೆಗಟ್ಟಿನಲ್ಲಿ ಪಾರದರ್ಶಕವಾಗಿ ಲಸಿಕೆ ನೀಡಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ನಮ್ಮೂರು- ನೆಕ್ಕಿಲಾಡಿ ಸಂಸ್ಥೆಯು ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮುಶಾಕಿರ್ ಹುಸೈನ್ ಅವರಿಗೆ ಮನವಿ ಸಲ್ಲಿಸಿದೆ.

ಲಸಿಕೆ ನೀಡುವ ಕೇಂದ್ರಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳಿದ್ದಲ್ಲಿ ಗ್ರಾ.ಪಂ. ವ್ಯಾಪ್ತಿಗಳಲ್ಲಿ ಶಾಲೆ, ಸಮುದಾಯ ಭವನ, ಗ್ರಾ.ಪಂ. ಸಭಾಂಗಣಗಳಲ್ಲೂ ಲಸಿಕೆ ನೀಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಿರುವುದು ಉತ್ತಮ ವಿಷಯವೇ. ಆದರೆ ಇಂತಹ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಗ್ರಾ.ಪಂ. ಸದಸ್ಯರುಗಳು ಇದರ ಟೋಕನ್ ಹಂಚುವ ಜವಾಬ್ದಾರಿಯನ್ನು ತಾವು ವಹಿಸಿಕೊಳ್ಳುತ್ತಿದ್ದು, ಇದರಿಂದಾಗಿ ಸರದಿ ಸಾಲಿನಲ್ಲಿ ನಿಲ್ಲದಿದ್ದರೂ ಪಕ್ಷಾಧಾರಿತವಾಗಿ, ಧರ್ಮಾಧಾರಿತವಾಗಿ ತಮಗೆ ಬೇಕಾದವರಿಗೆ ಟೋಕನ್ ಹಂಚುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಇಲ್ಲಿ ಸರದಿ ಸಾಲಿನಲ್ಲಿ ನಿಂತವರು ಲಸಿಕೆ ಪಡೆಯಲು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಲಸಿಕೆ ಹಾಕುವ ಕಾರ್ಯಕ್ರಮವು ಪಾರದರ್ಶಕವಾಗಿ ನಡೆಯಬೇಕೆಂದಿದ್ದರೆ ಟೋಕನ್ ವ್ಯವಸ್ಥೆಯನ್ನು ರದ್ದು ಮಾಡಬೇಕು. ಸರದಿ ಸಾಲಿನಲ್ಲಿ ಯಾರು ನಿಂತಿರುತ್ತಾರೋ, ಅವರಿಗೆ ಕ್ರಮ ಪ್ರಕಾರವಾಗಿ ಲಸಿಕೆ ಕೊಡುವ ವ್ಯವಸ್ಥೆ ಮಾಡಬೇಕು. ಲಸಿಕೆ ಹಂಚಿಕೆಯ ವಿಷಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಸರಕಾರಿ ಅಧಿಕಾರಿಗಳನ್ನು ಬಿಟ್ಟು ಇತರ ಯಾರನ್ನೂ ಮಧ್ಯ ಪ್ರವೇಶಿಸಲು ಅವಕಾಶ ನೀಡಬಾರದು. ಹಾಗಾದಾಗ ಮಾತ್ರ ಲಸಿಕೆಯನ್ನು ರಾಜಕೀಯವಾಗಿ ವಿತರಣೆ ಮಾಡುವುದು ತಪ್ಪುತ್ತದೆ ಹಾಗೂ ಲಸಿಕೆ ನೀಡುವ ಕಾರ್ಯಕ್ರಮ ಪಾರದರ್ಶಕವಾಗಿ ನಡೆಯುತ್ತದೆ. ಇದರೊಂದಿಗೆ ಆರೋಗ್ಯ ಕೇಂದ್ರಗಳಲ್ಲಿಯೂ ದಿನಾ ಲಸಿಕೆ ಕೊಡುವ ಕಾರ್ಯವನ್ನು ನಡೆಸಿದರೆ ಜನರ ದಟ್ಟಣೆಯನ್ನೂ ತಪ್ಪಿಸಬಹುದು ಹಾಗೂ ವಯಸ್ಸು, ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಗೆ ಬರಲು ಸಾಧ್ಯವಿಲ್ಲದೆ, ಮಲಗಿಕೊಂಡೇ ಇರುವಂತವರಿಗೆ ಮನೆಯಲ್ಲಿಯೇ ಲಸಿಕೆ ಕೊಡುವ ವ್ಯವಸ್ಥೆಯನ್ನು ಆರೋಗ್ಯ ಇಲಾಖೆ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಡಾ. ಮುಶಾಕಿರ್ ಹುಸೈನ್ ಮಾತನಾಡಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಮಾನದಂಡದಲ್ಲಿಯೇ ಲಸಿಕೆಯನ್ನು ನೀಡಬೇಕು. ಟೋಕನ್ ವಿತರಣೆಯಿಂದಾಗಿ ಹಲವು ಕಡೆ ಅವ್ಯವಸ್ಥೆಗಳಾಗಿವೆ. ಈಗಾಗಲೇ ಕೆಲವು ಗ್ರಾ.ಪಂ.ಗಳಲ್ಲಿ ಟೋಕನ್ ವ್ಯವಸ್ಥೆಯನ್ನೇ ರದ್ದುಗೊಳಿಸಿ, ಸರದಿ ಸಾಲಿನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಅಂತಹ ಅವ್ಯವಸ್ಥೆಗಳು ಕಂಡು ಬಂದರೆ ಅಲ್ಲಿ ಲಸಿಕೆ ಕಾರ್ಯಕ್ರಮ ಪಾರದರ್ಶಕವಾಗಿ ನಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮನವಿ ಸಲ್ಲಿಸಿದ ನಿಯೋಗದಲ್ಲಿ ನಮ್ಮೂರು- ನೆಕ್ಕಿಲಾಡಿ ಅಧ್ಯಕ್ಷ ಜತೀಂದ್ರ ಶೆಟ್ಟಿ, ಕಾರ್ಯದರ್ಶಿ ಖಲಂದರ್ ಶಾಫಿ, ಉಪಾಧ್ಯಕ್ಷರಾದ ರೂಪೇಶ್ ರೈ, ಅನಿ ಮಿನೇಜಸ್, ಖಜಾಂಚಿ ಅಬ್ದುರ್ರಹ್ಮಾನ್ ಯುನಿಕ್ ಇದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.