HomePage_Banner
HomePage_Banner
HomePage_Banner
HomePage_Banner

ಇರ್ದೆ; ತಡೆಗೋಡೆ ಬಿದ್ದು ಮನೆ ಶೌಚಾಲಯಕ್ಕೆ ಹಾನಿ- ಅಪಾರ ನಷ್ಟ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
ನಿಡ್ಪಳ್ಳಿ; ಬೆಟ್ಟಂಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಇರ್ದೆ ಜನತಾ ಕಾಲನಿ ನಿವಾಸಿ ಹಂಝರವರ ಪತ್ನಿ ಮರಿಯಮ್ಮರವರ ಮನೆಗೆ ಪಕ್ಕದ ತಡೆಗೋಡೆ ಜರಿದು ಬಿದ್ದ ಪರಿಣಾಮ ಮನೆ ಮತ್ತು ಶೌಚಾಲಯಕ್ಕೆ ಹಾನಿಯಾದ ಘಟನೆ ಸೆ.3 ರಂದು ರಾತ್ರಿ ಸಂಭವಿಸಿದೆ.
ಅಂದು ರಾತ್ರಿ ಎಡೆಬಿಡದೆ ಸುರಿದ ವಿಪರೀತ ಮಳೆಗೆ ಮನೆಯ ಪಕ್ಕದ ತಡೆಗೋಡೆ ಜರಿದು ಬಿದ್ದಿದೆ. ಇದರಿಂದ ಅವರ ಮನೆ, ಮನೆಯ ಮಾಡು ಮತ್ತು ಶೌಚಾಲಯಕ್ಕೆ ಹಾನಿಯಾಗಿದ್ದು ಅಪಾರ ನಷ್ಟ ಸಂಭವಿಸಿದ್ದು ಸುಮಾರು ರೂ.60 ಸಾವಿರ ನಷ್ಟ ಸಂಭವಿಸಿರ ಬಹುದೆಂದು ಅಂದಾಜಿಸಲಾಗಿದೆ.
ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರ.ಡಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸೌಮ್ಯ, ಸದಸ್ಯರಾದ ಮೊಯಿದು ಕುಂಞ ಕೋನಡ್ಕ, ಮಹಾಲಿಂಗ ನಾಯ್ಕ ನೆಲ್ಯಾರ್ಣೆ, ಗ್ರಾಮಕರಣಿಕ ಕನಕ ರಾಜ್, ಗ್ರಾಮ ಸಹಾಯಕ ವಿಜಯ ಪಾರ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.