HomePage_Banner
HomePage_Banner
HomePage_Banner
HomePage_Banner

ನೆಕ್ಕಿಲಾಡಿಯಲ್ಲಿ ಬಿಜೆಪಿ. ಹಿಂದುಳಿದ ವರ್ಗಗಳ ಮೋರ್ಚಾ ಪ್ರತಿನಿಧಿಗಳ ಘೋಷಣೆ, ರಕ್ಷಾಬಂಧನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸಂಘಟನೆ ಮೂಲಕ ಪಕ್ಷ ಬಲಪಡಿಸಲು ಕಾರ್ಯಕರ್ತರು ಸನ್ನದರಾಗಬೇಕು-ಸುನಿಲ್ ದಡ್ಡು

ಉಪ್ಪಿನಂಗಡಿ: ಸಂಘಟನೆ ಮೂಲಕ ಪಕ್ಷ ಬಲಪಡಿಸಲು ಕಾರ್ಯಕರ್ತರು ಸನ್ನದ್ಧರಾಗಬೇಕು ಎಂದು ಪುತ್ತೂರು ಬಿಜೆಪಿ. ಗ್ರಾಮಾಂತರ ಮಂಡಲ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ಹೇಳಿದರು.
ಅವರು ೩೪-ನೆಕ್ಕಿಲಾಡಿ ಶ್ರೀ ಗುರು ರಾಘವೇಂದ್ರ ಕಲಾ ಮಂದಿರದಲ್ಲಿ ಬಿಜೆಪಿ. ಮಹಾಶಕ್ತಿ ಕೇಂದ್ರ ಉಪ್ಪಿನಂಗಡಿ ವತಿಯಿಂದ ಆಯೋಜಿಸಿದ್ದ ಹಿಂದುಳಿದ ವರ್ಗಗಳ ಮೋರ್ಚಾ ಪ್ರತಿನಿಧಿಗಳ ಘೋಷಣೆ ಮತ್ತು ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮುಕುಂದ ಗೌಡ ಮಾತನಾಡಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಲೋಕಸಭೆವರೆಗೂ ಪಕ್ಷದ ಜನಪ್ರತಿನಿಧಿಗಳು ಇದ್ದು ಸರಕಾರದ ಯೋಜನೆಗಳನ್ನು ಮನೆ ಮನೆ ತಲುಪಿಸುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

ಪಕ್ಷದ ಪದಾಧಿಕಾರಿಗಳಾದ ಪ್ರವೀಣ ಪ್ರಭು, ಸದಾನಂದ ಮಣಿಯಾಣಿ, ಉಷಾ ಮುಳಿಯ, ಸುರೇಶ ಅತ್ರಮಜಲು, ಜಯಂತ ಪೊರೋಳಿ, ಪ್ರಸಾದ್ ಬಂಡಾರಿ, ಪ್ರಮುಖರಾದ
ಚಂದಪ್ಪ ಮೂಲ್ಯ, ಉಮೇಶ ಮೂಲ್ಯ, ಉಮೇಶ ಶೆಣೈ, ಪ್ರಶಾಂತ್ ನೆಕ್ಕಿಲಾಡಿ, ಸದಾನಂದ ಪೂಜಾರಿ, ವಸಂತ, ನಾಗೇಶ, ತಿಮ್ಮಪ್ಪ ಪೂಜಾರಿ, ಚಿದಾನಂದ, ಧನಂಜಯ, ಗೀತಾ, ರೇವತಿ, ನಿತೀನ್, ಚಂದ್ರಶೇಖರ ಉಪಸ್ಥಿತರಿದ್ದರು.

ಬಿಜೆಪಿ ಹಿಂದುಳಿದ ವರ್ಗದ ಸಹ ಸಂಚಾಲಕಿ ಸ್ವಪ್ನ ಗಾಣಿಗ ಸ್ವಾಗತಿಸಿ, ಉಮೇಶ್ ಒಡ್ರಪಾಲ್ ವಂದಿಸಿದರು. ರತ್ನಾಕರ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.