HomePage_Banner
HomePage_Banner
HomePage_Banner
HomePage_Banner

ಇಂದು ಸೆಪ್ಟಂಬರ್-5 : ಶಿಕ್ಷಣ ತಜ್ಞ ಭಾರತರತ್ನ ಡಾ| ಎಸ್. ರಾಧಾಕೃಷ್ಣನ್‌ರವರ ಜನ್ಮದಿನ: ಶಿಕ್ಷಕರ ದಿನಾಚರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಾನವನ ಜೀವನದಲ್ಲಿ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆ. ನಾವು ಪಡೆದ ಶಿಕ್ಷಣದಿಂದ ನಮ್ಮ ಮುಂದಿನ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಇದರಲ್ಲಿ ಶಿಕ್ಷಕರ ಪಾತ್ರ ಮಹತ್ವವಾದುದು. ಉತ್ತಮ ವ್ಯಕ್ತಿಯಾಗಿ ಬಾಳಲು ಮಾರ್ಗದರ್ಶನ ನೀಡಿದ ಮಹಾನ್ ನಾಯಕರಲ್ಲಿ ಶಿಕ್ಷಣ ಪ್ರೇಮಿ, ಶಿಕ್ಷಣ ತಜ್ಞ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಒಬ್ಬರು. ಇವರು ಉತ್ತಮ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ಧೀಮಂತ ವ್ಯಕ್ತಿ. ಇವರು ಶಿಕ್ಷಣದ ಬಗ್ಗೆ ಅತ್ಯಂತ ಗೌರವ, ಪ್ರೀತಿ, ನಿಷ್ಠೆ ಹೊಂದಿದ್ದರು. ಸ್ವತಃ ಶಿಕ್ಷಕರಾಗಿ ಹಲವಾರು ವರ್ಷಗಳ ಕಾಲ ಸೇವೆ ಮಾಡಿರುವ ಡಾ. ಎಸ್. ರಾಧಾಕೃಷ್ಣನ್ ಭಾರತ ಕಂಡ ಅಗ್ರಗಣ್ಯ ಶಿಕ್ಷಕರಲದಲಿ ಪ್ರಮುಖರು.

ತಮ್ಮ ಜನ್ಮದಿನವನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಸೆಪ್ಟಂಬರ್ ೫ರಂದು ಆಚರಿಸುವಂತೆ ಸೂಚಿಸಿದ ಮಹಾನ್ ವ್ಯಕ್ತಿ ಡಾ| ಎಸ್. ರಾಧಾಕೃಷ್ಣನ್. ರಾಧಾಕೃಷ್ಣನ್‌ರವರು ತಮಿಳುನಾಡಿನ “ತಿರುತ್ತಣಿ” ಎಂಬಲ್ಲಿ ಸೆಪ್ಟಂಬರ್ 5ರಂದು 1888ರಲ್ಲಿ ಜನಿಸಿದರು. ತಂದೆ ವೀರಸ್ವಾಮಿ, ತಾಯಿ ಸೀತಮ್ಮ ಸರ್ವೇಪಲ್ಲಿ ಎಂಬುವುದು ಅವರ ಮನೆತನದ ಹೆಸರು.

ಪ್ರಾಥಮಿಕ, ಪ್ರೌಢ, ಕಾಲೇಜು ಹಂತದ ಶಿಕ್ಷಣ ಹಾಗೂ ಸ್ನಾತಕೋತ್ತರ ಪದವಿಯನ್ನು ಮುಗಿಸಿ, ನಂತರ ಮದ್ರಾಸಿನ ವಿ.ವಿ.ಯಲ್ಲಿ ತತ್ವಶಾಸ್ತ್ರದಲ್ಲಿ ಪಿಎಚ್‌ಡಿ ಪದವಿಯನ್ನು ಗಳಿಸಿದರು. ರಾಧಾಕೃಷ್ಣನ್‌ರವರು ಶಿಕ್ಷಣ ಇಲಾಖೆಯ ಉಪಸಹಾಯಕ ಇನ್ಸ್‌ಪೆಕ್ಟರ್ ಆಗಿ ಮದ್ರಾಸಿನಲ್ಲಿ ಮೊದಲ ಸೇವೆ ಆರಂಭಿಸಿದರು. ನಂತರ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜು, ಸಯ್ಯದ್‌ಪೇಟೆಯ ಟೀಚರ‍್ಸ್ ಟ್ರೈನಿಂಗ್ ಕಾಲೇಜು, ಅಂಧ್ರದ ಅನಂತರಪುರ ಹಾಗೂ ರಾಜಮಂಡ್ರಿಯ ಸರಕಾರಿ ಕಾಲೇಜಿನಲ್ಲಿ ಸೇವೆ ಸಲ್ಲಿಸಿದರು. ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕೆಲಸ ನಿರ್ವಹಿಸಿದರು. ನಂತರ ಕೋಲ್ಕತ್ತ ವಿ.ವಿ.ಯಲ್ಲಿ ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿ, 1939ರಲ್ಲಿ ಕಾಶಿ ವಿ.ವಿ.ಯಲ್ಲಿ ಉಪಕುಲಪತಿಯಾಗಿ, 1949ರಲ್ಲಿ ಯುನೆಸ್ಕೋದ ವಾರ್ಷಿಕ ಸಮ್ಮೇಳನದ ಅಧ್ಯಕ್ಷರಾಗಿ ಕೆಲ ನಿರ್ವಹಣೆ ಹಾಗೂ ರಷ್ಯಾದಲ್ಲಿ ಭಾರತದ ರಾಯಬಾರಿಯಾಗಿರೂ ಕೆಲಸ ನಿರ್ವಹಿಸಿದ್ದಾರೆ. ಭಾರತದ ಶಿಕ್ಷಕನೊಬ್ಬ ಮೊಟ್ಟ ಮೊದಲ ಉಪರಾಷ್ಟ್ರಪತಿಯಾಗಿ, ನಂತರ ರಾಷ್ಟ್ರಪತಿಯಾಗಿ ಕೆಲಸ ನಿರ್ವಹಿಸಿದ್ದಾರೆ. ೧೯೫೪ರಲ್ಲಿ ಭಾರತ ಸರಕಾರದ ಅತ್ಯುನ್ನತ ಪ್ರಶಸ್ತಿಯಾದ “ಭಾರತ ರತ್ನ”ವನ್ನು ನೀಡಿ ಗೌರವಿಸಲಾಯಿತು. ಭಾರತೀಯ ಶಿಕ್ಷಣ ರಂಗಕ್ಕೆ ಇವರು ನೀಡಿದ ಕೊಡುಗೆ ಅಪಾರ. ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟವರು. ಇವರಿಗೆ ಹಲವಾರು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಆದರ್ಶ ಗುರುವಾಗಿ, ಶಿಕ್ಷಣದ ಹಿತಚಿಂತಕರಾಗಿ, ಬರಹಗಾರರಾಗಿ, ರಾಜಕೀಯ ಕ್ಷೇತ್ರದ ಪರಿಣಿತರಾಗಿ ಭಾರತ ದೇಶವನ್ನು ಸಮೃದ್ಧಗೊಳಿಸಲು ಶೈಕ್ಷಣಿಕರಣಗೊಳಿಸಿದ ದಾರ್ಶನಿಕ ವ್ಯಕ್ತಿ. ರಾಷ್ಟ್ರದ ಶಿಕ್ಷಣದ ಚಿಲುಮೆಯಾಗಿ ಕಂಗೊಳಿಸಿದ ರಾಧಕೃಷ್ಣನ್ 1975 ಎಪ್ರಿಲ್ 17ರಂದು ದಿಗಂತದಲ್ಲಿ ಲೀನರಾದರು. ವಿದ್ಯಾದಾನ ಮಾಡುವ ಗುರು ವೃಂದಕ್ಕೆ ನಾವೆಲ್ಲರೂ ಗೌರವ ನೀಡಿದಾಗ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ.

ರಾಧಕೃಷ್ಣನ್‌ರವರ ನುಡಿ ಸಂದೇಶಗಳು:

  • ಮಾನವ ಚೇತನಕ್ಕೆ ಗೌರವ ತರುವಂತಹ ನಡತೆಯೇ ಧರ್ಮ
  • ಪ್ರತಿ ಮನುಷ್ಯನ ಜೀವನವು ಬೆಲೆಯುಳ್ಳದ್ದು
  • ನಾವು ಜೀವನದಲ್ಲಿ ಉತ್ತಮ ಜೀವನ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು
  • ವ್ಯಕ್ತಿಗೆ ಹೃದಯ ಸಂಸ್ಕಾರ ಮುಖ್ಯ, ಪರಸ್ಪರ ದ್ವೇಷವನ್ನು ಬಿಟ್ಟು ಬದುಕಲು ಕಲಿಯಬೇಕು
  • ವ್ಯಕ್ತಿ ಗೌರವವೇ ಮಾನವ ಶಿಷ್ಟಾಚಾರದ ತಳಹದಿ
  • ರಾಧಕೃಷ್ಣನ್ ಜಗತ್ತಿನ ಎಲ್ಲಾ ಭಾಗಗಳ ಜನರಿಗೆ ಭರವಸೆಯ ನೀರು, ನೆರಳು ನೀಡಿದರು. ಈ ಬಗೆಯ ಸೂಕ್ಷ್ಮ ಗ್ರಹಿಕೆಯನ್ನು ಅವರು ತಮ್ಮ ತತ್ವಜ್ಞಾನ ಮತ್ತು ಸಾರ್ವಜನಿಕ ಕೊಡುಗೆಗಳಿಗಿಂತ ಶ್ರೇಷ್ಠವೆಂದು ಬಗೆದಿದ್ದರು.

ಡಾ. ಎಸ್ ರಾಧಕೃಷ್ಣನ್‌ರವರು ಭಾರತೀಯರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ. ಶಿಕ್ಷಕ-ವಿದ್ಯಾರ್ಥಿ ಸಂಬಂಧ ಯಾರೂ ಬಿಡಿಸಲಾರದ ಅನುಬಂಧ ಎಂದು ತೋರಿಸಿಕೊಟ್ಟವರು ಡಾ. ರಾಧಕೃಷ್ಣನ್‌ರವರು. ಇವರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ. ರಾಧಕೃಷ್ಣನ್‌ರವರ ಜನ್ಮದಿನವನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸುವ ಮೂಲಕ ಭಾರತದ ಜನರು ಅವರನ್ನು ಸ್ಮರಿಸುತ್ತಾರೆ. ಸೆಪ್ಟೆಂಬರ್ 5 ನಮಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಕಾರಣರಾದ ಗುರುವನ್ನು ನೆನೆಯುವ ದಿನ. ಡಾ. ಎಸ್. ರಾಧಕೃಷ್ಣನ್‌ರವರ ಜನ್ಮದಿನ. ನಮಗೆ ವಿದ್ಯೆ ನೀಡಿದ, ಬುದ್ಧಿ ಹೇಳಿದ ಗುರುವೃಂದಕ್ಕೆ ನಾವೆಲ್ಲರೂ ತಲೆತಗ್ಗಿಸಿ ನಮಿಸೋಣ, ವಂದಿಸೋಣ. ನನ್ನ ಎಲ್ಲಾ ವಿದ್ಯಾರ್ಥಿ ಸಮೂಹಕ್ಕೆ, ನಮ್ಮ ಗುರುವೃಂದಕ್ಕೆ ನಿಮ್ಮ ಮುಂದಿನ ಜೀವನವು ಸುಖಕರವಾಗಿರಲೆಂದು ಹಾರೈಸುತ್ತೇನೆ ಹಾಗೂ ಡಾ. ಎಸ್. ರಾಧಕೃಷ್ಣನ್‌ರವರ ಜನ್ಮದಿನದ ಶುಭಾಶಯಗಳು.

ಗುರುದೇವೋಭವ….ಗುರುವೇ ನಮಃ

ಲೇಖನ : ಕೋಟಿಯಪ್ಪ ಪೂಜಾರಿ ಸೇರ ಎಂ.ಎ.ಬಿ.ಎಡ್

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.