HomePage_Banner
HomePage_Banner
HomePage_Banner
HomePage_Banner

ಕೆಲಂಬೀರಿ: ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಕಾಣಿಯೂರು: ನೆಹರು ಯುವಕೇಂದ್ರ ಮಂಗಳೂರು ಇದರ ಸಹಯೋಗದಲ್ಲಿ ಯುವಶಕ್ತಿ ಫ್ರೆಂಡ್ಸ್ ಕೆಲಂಬೀರಿ ಬರೆಪ್ಪಾಡಿ ಇದರ ವತಿಯಿಂದ ಸ್ವಾತಂತ್ರ್ಯ ಸಂಭ್ರಮದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಫಿಟ್ ಇಂಡಿಯಾ ಫ್ರೀಡಂ ರನ್ ಜಾಥಾ ಸೆ.5 ರಂದು ಬರೆಪ್ಪಾಡಿ ವಾಲಿಬಾಲ್ ಕ್ರೀಡಾಂಗಣದಲ್ಲಿ ನಡೆಯಿತು.

ಜಾಥಾವು ವಾಲಿಬಾಲ್ ಕ್ರೀಡಾಂಗಣದಿಂದ ಕೆಲಂಬೀರಿ ಬ್ರಹ್ಮ ಬೈದೆರುಗಳ ಗರಡಿತನಕ ಭಾರತ್ ಮಾತಾ ಕೀ ಜೈ ಘೋಷಣೆಯೊಂದಿಗೆ ಸಾಗಿತು.ಬೆಳಂದೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ಕೆಡೆಂಜಿಕಟ್ಟ ಜಾಥಾ ಉದ್ದೇಶಿಸಿ ಮಾತನಾಡಿದರು.ಯುವಜನ ಒಕ್ಕೂಟದ ಜಿಲ್ಲಾ ಅಧ್ಯಕ್ಷರು ಮತ್ತು ರಾಜ್ಯ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ನೆಹರು ಯೂವಕೇಂದ್ರ ಮಂಗಳೂರು ಇದರ ಪುತ್ತೂರು ತಾಲೂಕು ಸಂಯೋಜಕರಾದ ಗೌತಮ್ ರಾಜ್ ಕರಂಬಾರು,ಕಡಬ ತಾಲೂಕು ಸಂಯೋಜಕರಾದ ಜಸ್ವಂತ್,ತಿರಂಗಾ ವಾರಿಯರ್ಸ್ ಕುದ್ಮಾರು ಇದರ ಸಂಚಾಲಕರಾದ ಲೋಕೇಶ್ ಬಿ ಎನ್ ಉಪಸ್ಥಿತರಿದ್ದರು.

ಯುವಶಕ್ತಿ ಫ್ರೆಂಡ್ಸ್ ನ ಕೋಶಾಧಿಕಾರಿ ಸಚಿನ್ ಎಸ್ ಸಿ ಸ್ವಾಗತಿಸಿ ನಿರೂಪಿಸಿದರು.ಕಾರ್ಯದರ್ಶಿ ಸಫ್ವಾನ್ ಫಿಟ್ ಇಂಡಿಯಾ ಫ್ರೀಡಂ ರನ್ ಪ್ರತಿಜ್ಞೆ ಬೋಧಿಸಿದರು.ಯುವಶಕ್ತಿ ಫ್ರೆಂಡ್ಸ್ ಸದಸ್ಯರು ಜಾಥಾದಲ್ಲಿ ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.