HomePage_Banner
HomePage_Banner
HomePage_Banner
HomePage_Banner

ಬೆಳ್ಳಾರೆ ಜೆಸಿಐ ಮತ್ತು ಯುವ ಜೇಸಿ ವಿಭಾಗದ ನಿರ್ಮಾಣದಲ್ಲಿ, ಸವಣೂರಿನ ಯುವ ಪ್ರತಿಭೆ ಕೃಷ್ಣಪ್ಪ ಬಂಬಿಲ ನಿರ್ದೇಶನದಲ್ಲಿ ನಿರ್ಮಾಣವಾಗುತ್ತಿರುವ ಕಿರುಚಿತ್ರ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

 ‌‌‌ ‌ ವರದಿ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಜೆ.ಸಿ.ಐ ಬೆಳ್ಳಾರೆ ನಿರ್ಮಾಣದಲ್ಲಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ನಿರ್ದೇಶನದಲ್ಲಿ, ಕ್ಷಯಾ ಚಿಕಿತ್ಯಾ ಘಟಕ ಆರೋಗ್ಯ ಇಲಾಖೆ ಸುಳ್ಯದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಜೇಸಿ ಲೋಕೇಶ್ ತಂಟೆಪ್ಪಾಡಿರವರ ಪರಿಕಲ್ಪನೆಯಂತೆ ಕೇಂದ್ರ ಸರಕಾರದ ಯೋಜನೆಯಾದ ಕ್ಷಯಾಮುಕ್ತ ಭಾರತ 2025 ರ ಕಲ್ಪನೆಯ ಕಿರುಚಿತ್ರ ಬೆಳ್ಳಾರೆ ಪರಿಸರದ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಸವಣೂರು ಸಮೀಪದ ಮಂಜುನಾಥನಗರದ ಬಂಬಿಲ ನಿವಾಸಿಯಾಗಿರುವ, ಯುವ ಪ್ರತಿಭೆ ಕೃಷ್ಣಪ್ಪ ಬಂಬಿಲರವರು ಈಗಾಗಲೇ ರಂಗಭೂಮಿ ಕಲಾವಿದರಾಗಿ, ನಿರ್ದೇಶಕರಾಗಿ, ಕಿರುಚಿತ್ರ ನಟನಾಗಿ, ನಿರ್ದೇಶಕರಾಗಿ ಹೆಸರನ್ನು ಪಡೆದಿದ್ದಾರೆ.

ಚಿತ್ರೀಕರಣ

ಸೆ. 5 ರಂದು ಬೆಳ್ಳಾರೆ ಸುತ್ತಮುತ್ತ ಭರದಿಂದ ಚಿತ್ರೀಕರಣ ನಡೆಯುತ್ತಿದ್ದು, ತುಳು ಸಾಹಿತಿ ಸತೀಶ್ ಕಕ್ಯೆಪದವು ಸಂಭಾಷಣೆ ಮತ್ತು ಚಿತ್ರಕಥೆ, ಆಶ್ವಿನ್ ಚೆಂಡ್ತಿಮಾರ್ ಛಾಯಾಗ್ರಾಹಣದಲ್ಲಿ ಮೂಡಿಬರಲಿರುವ ಈ ಕಿರು ಚಿತ್ರದಲ್ಲಿ ಬೆಳ್ಳಾರೆಯ ಜೇಸಿ ಮತ್ತು ಜೂನಿಯರ್ ಜೇಸಿ ಸದಸ್ಯರುಗಳೇ ಅಭಿನಯ ಮಾಡುತ್ತಿರುವುದು ವಿಶೇಷವಾಗಿದೆ.

ನಿರ್ದೇಶಕ ಕೃಷ್ಣಪ್ಪ ಬಂಬಿಲ

ಸೆ. 6 ರಂದು ಬೆಳ್ಳಾರೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕಿರುಚಿತ್ರದ ಪೋಸ್ಟರ್ ಬಿಡುಗಡೆಯಾಗಲಿದೆ. ಜೇಸಿಯ ಬೆಳ್ಳಾರೆ ಅಧ್ಯಕ್ಷ ಪದ್ಮನಾಭ ಕಲಾಸುಮ ಮತ್ತು ಸದಸ್ಯರು ಪೂರ್ಣ ಸಹಕಾರ ನೀಡಿದ್ದಾರೆ. ಸೆ. 11 ರಂದು ದ.ಕ.ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ರವರು ಬೆಳ್ಳಾರೆಯಲ್ಲಿ ಚಿತ್ರದ ಬಿಡುಗಡೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಲಾವಿದರು
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.