HomePage_Banner
HomePage_Banner
HomePage_Banner
HomePage_Banner

ಸೆ.15:ಮೊಟ್ಟೆತ್ತಡ್ಕ ಮಣ್ಣಾಪು ಕೊರಗಜ್ಜ, ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ಗಣಹೋಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಹಾಗೂ ಮೂಲ ಶಿಲಾ ಪುನರ್ ಪ್ರತಿಷ್ಠೆ ಮತ್ತು ನೇಮೋತ್ಸವದ ನೇತೃತ್ವ ವಹಿಸಿದ್ದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ಸೆ. 5ರಂದು ಶ್ರೀ ಕ್ಷೇತ್ರದಲ್ಲಿ ಸಭೆ ನಡೆಯಿತು.

ನರ್ತನ ಚಾವಡಿ ನಿರ್ಮಾಣಕ್ಕೆ ಭಕ್ತರಿಂದ ದೇಣಿಗೆ ಆಹ್ವಾನ:
ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರು ಮಾತನಾಡಿ, ಮಣ್ಣಾಪು ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಮುಂಭಾಗದಲ್ಲಿ ಭಕ್ತರಿಗೆ ಆಸೀನರಾಗಲು ಹಾಗೂ ಪೂಜೆಯನ್ನು ಕೈಗೊಳ್ಳಲು ಈಗಾಗಲೇ ತಾತ್ಕಾಲಿಕವಾಗಿ ಶ್ರೀ ಕ್ಷೇತ್ರದ ಭಕ್ತರು ತೆಂಗಿನ ಮರದ ಗರಿಕೆಯ ಚಾವಡಿಯನ್ನು ನಿರ್ಮಿಸಿದ್ದಾರೆ. ಆದರೆ ಸಿಮೆಂಟ್ ಶೀಟು ಹೊದಿಕೆಯ ನರ್ತನ ಚಾವಡಿಯನ್ನು ಶಾಶ್ವತವಾಗಿ ಶ್ರೀ ಕ್ಷೇತ್ರದಲ್ಲಿ ನಿರ್ಮಾಣ ಮಾಡುವುದು ಹಾಗೂ ಉಚಿತವಾಗಿ ನರ್ತನ ಚಾವಡಿ ನಿರ್ಮಾಣ ಕುರಿತು ಭಕ್ತರಲ್ಲಿ ಕೇಳಿಕೊಳ್ಳಲಾಗುವುದು. ಇದಕ್ಕಾಗಿ ನರ್ತನ ಚಾವಡಿಯ ಬಜೆಟ್ ಎಷ್ಟು ಎಂದು ಶೀಘ್ರದಲ್ಲಿಯೇ ತಿಳಿಸಲಾಗುವುದು. ಈಗಾಗಲೇ ಶ್ರೀ ಕ್ಷೇತ್ರದ ಆಹಾರ ದಾಸ್ತಾನು ಕೊಠಡಿ ನಿರ್ಮಾಣಕ್ಕೆ ಮೆಟಿರಿಯಲ್ಸ್ ನೀಡುತ್ತೇವೆ ಎಂದು ಭಕ್ತರು ವಾಗ್ದಾನ ಮಾಡಿರುತ್ತಾರೆ. ಮುಂದಿನ ದಿನಗಳಲ್ಲಿ ಭಕ್ತರು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದರು.

ಸೆ.15ರಂದು ಗಣಹೋಮ:
ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದಲ್ಲಿ ಕೊರಗಜ್ಜರ ಪ್ರತಿಷ್ಠಾಪನೆಯಾದ ಬಳಿಕ ನಿರಂತರ ಅಗೇಲು ಸೇವೆ ನಡೆಯುತ್ತಿದೆ. ಅದರಂತೆ ಶ್ರೀ ಕ್ಷೇತ್ರದಲ್ಲಿ ಯಾವುದೇ ದೋಷ ಬರಕೂಡದು ಎಂಬ ದೃಷ್ಟಿಯಲ್ಲಿ ಶ್ರೀ ಕ್ಷೇತ್ರದಲ್ಲಿ ಗಣಹೋಮ ನಡೆಸಬೇಕು ಎಂದು ತೀರ್ಮಾನಿಸಲಾಗಿದ್ದು, ಶ್ರೀ ಕ್ಷೇತ್ರದ ಭಕ್ತರಿಂದ ಸೆ.೧೫ ರಂದು ಪೂರ್ವಾಹ್ನ ಗಣಹೋಮ ಜರಗಲಿರುವುದು. ಬಳಿಕ ಕೊರಗಜ್ಜನಿಗೆ ಬೊಂಡದ ಅಭಿಷೇಕ, ಮಧ್ಯಾಹ್ನ ಅನ್ನಸಂತರ್ಪಣೆ ಜರಗಲಿರುವುದು. ಕೊರಗಜ್ಜರನ್ನು ನಂಬಿದ ಎಲ್ಲಾ ಭಕ್ತರಿಗೆ ಆಯುರಾರೋಗ್ಯ ಸಿಗಲಿ ಎಂಬುದಾಗಿ ಈ ಗಣಹೋಮವನ್ನು ಏರ್ಪಡಿಸಲಾಗಿದೆ ಹಾಗೂ ಸೆ.೧೬ ರಂದು ಸಂಕ್ರಮಣ ಸೇವೆ ನಡೆಯಲಿದೆ ಎಂದು ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ವಿಶ್ವನಾಥ್ ಪೂಜಾರಿ ಮೊಟ್ಟೆತ್ತಡ್ಕರವರು ಹೇಳಿದರು.

ಶ್ರೀ ಕ್ಷೇತ್ರ ಮಣ್ಣಾಪು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆ, ದೈವದ ಪ್ರಧಾನ ಅರ್ಚಕ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ಸುಜೀರ್ ಶೆಟ್ಟಿ ನುಳಿಯಾಲು ಸಹಿತ ಶ್ರೀ ಕ್ಷೇತ್ರದ ಭಕ್ತಾಧಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಗಂಗಾಧರ ಮಣ್ಣಾಪು ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.