HomePage_Banner
HomePage_Banner
HomePage_Banner
HomePage_Banner

ಗೋಳಿತ್ತಟ್ಟು: ಮಿಯಾವಾಕಿ ಅರಣ್ಯಕ್ಕೆ ವಿಜ್ಞಾನಿಗಳ ತಂಡ ಭೇಟಿ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ: ಗೋಳಿತ್ತಟ್ಟು ಸರಕಾರಿ ಉ.ಹಿ.ಪ್ರಾ.ಶಾಲೆಯ ಮೈದಾನದಲ್ಲಿ ‘ಮಿಯಾವಾಕಿ’ ಪರಿಕಲ್ಪನೆಯಡಿ ನಿರ್ಮಾಣಗೊಂಡಿರುವ ಅರಣ್ಯ ಪ್ರದೇಶಕ್ಕೆ ಮಂಗಳೂರು ನಿಟ್ಟೆ ಯುನಿವರ್ಸಿಟಿಯ ವಿಜ್ಞಾನಿಗಳ ತಂಡ ಇತ್ತೀಚೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ.
ಗೋಳಿತ್ತಟ್ಟು ಶಾಲಾ ಆಟದ ಮೈದಾನದಲ್ಲಿ ಮಿಯಾ ವಾಕಿ ಪರಿಕಲ್ಪನೆಯಡಿ ಸುಮಾರು25ಕ್ಕೂ ಹೆಚ್ಚು ಬಗೆಯ ಅರಣ್ಯ ಉತ್ಪನ್ನಗಳ ಹಾಗೂ ವಿವಿಧ ಹಣ್ಣುಗಳನ್ನು ಬೆಳೆಯುವ ಸುಮಾರು 600ರಷ್ಟು ಗಿಡಗಳನ್ನು ಬೆಳೆಸಲಾಗುತ್ತಿದೆ. ಇಲ್ಲಿಗೆ ನಿಟ್ಟೆ ಯುನಿವರ್ಸಿಟಿಯ ಯುವ ವಿಜ್ಞಾನಿಗಳಾದ ಸ್ಮಿತಾ ಹೆಗ್ಡೆ, ಸೌಮಿಕಾ ದೇಸಾಯಿ, ಜೇಕಬ್ ತೋಮಸ್, ಶರಣ್ಯ ಕೌಶಲನ್, ಅಲೋಸಿಯಸ್, ರಚೆಲ್ ಮಥಾಯಿಸ್, ಕೌಸ್ತುಭ, ಅನನ್ಯಾರವರ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದೆ. ಈ ಅರಣ್ಯ ನಿರ್ಮಾಣದ ಪ್ರೇರಕ, ಪರಿಸರ ಪ್ರೇಮಿಯಾಗಿರುವ ಮೆಸ್ಕಾಂ ಪವರ್‌ಮ್ಯಾನ್ ದುರ್ಗಾಸಿಂಗ್‌ರವರು ವಿಜ್ಞಾನಿಗಳ ತಂಡಕ್ಕೆ ಮಾಹಿತಿ ನೀಡಿದರು. ಗೋಳಿತ್ತಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ದನ ಪಟೇರಿ, ಪಿಡಿಒ ವೆಂಕಟೇಶ್, ಉಪವಲಯಾರಣ್ಯಾಧಿಕಾರಿ ಸುನೀಲ್, ಅರಣ್ಯ ರಕ್ಷಕ ದೇವಿಪ್ರಸಾದ್, ಗೋಳಿತ್ತಟ್ಟು ಶಾಲಾ ಮುಖ್ಯಶಿಕ್ಷಕ ಶೀನಪ್ಪ ನಾಯ್ಕ್ ಎಸ್., ಪವರ್‌ಮ್ಯಾನ್ ಗೋಪಾಲ್‌ಚೌಹಾಣ್ ಹಾಗೂ ಶಿಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.