HomePage_Banner
HomePage_Banner
HomePage_Banner
HomePage_Banner

ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಮಹಾತ್ಮಾಗಾಂಧಿ ರಥ ಚಾಲನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಸ್ವರಾಜ್ಯದತ್ತ, ರಾಮರಾಜ್ಯದ ಕಡೆಗೆ ಜನರ ನಡಿಗೆ, ಘೋಷಣೆ, ಪ್ರತಿಜ್ಞಾ ಸ್ವೀಕಾರ-ಗಾಂಧಿ ಜಯಂತಿಯ ಆಚರಣೆಯಾಗಲಿ

ಅಕ್ಟೋಬರ್ 2ರಂದು ಗಾಂಧೀ ಜಯಂತಿಯ ದಿವಸ ಪ್ರತಿ ಮನೆಯಿಂದ ಪ್ರತೀ ಗ್ರಾಮಗಳಲ್ಲಿ ಬೆಳಿಗ್ಗೆ ೮ಗಂಟೆಯಿಂದ ೯ರವರೆಗೆ ಸ್ವಾತಂತ್ರ್ಯದ ಘೋಷಣೆಗಳೊಂದಿಗೆ ಗಾಂಧಿ ನಡಿಗೆ ನಡೆಯಲಿದೆ. 9ರಿಂದ 9.15ರ ವರೆಗೆ ಘೋಷಣೆಗಳ ಪ್ರತಿಜ್ಞಾ ಸ್ವೀಕಾರ 9.20ರಿಂದ 9.40ರ ವರೆಗೆ ಮಹಾತ್ಮ ಗಾಂಧೀಜಿಗೆ ನುಡಿ ನಮನ ಸಲ್ಲಿಸಲಾಗುವುದು. ಊರಿನ ಅಭಿವೃದ್ಧಿಗೆ ಕೊಡುಗೆ ಕೊಟ್ಟವರನ್ನು ಕೊಡುಗೆಯನ್ನು ಗುರುತಿಸಲಾಗುವುದು. ಉಪಹಾರದ ನಂತರ ಅವರವರಿಗೆ ಆಯಾ ಊರಿಗೆ ಅನುಕೂಲವಾಗುವ ರೀತಿಯಲ್ಲಿ ಸ್ವಚ್ಚತೆ ಮತ್ತು ಶ್ರಮದಾನವನ್ನು ಅಪರಾಹ್ನ 12 ಗಂಟೆಯ ತನಕ ಮಾಡಬಹುದೆಂದು ಅಭಿಪ್ರಾಯ ನೀಡಿದ್ದೇವೆ. ಈ ಸಲ ಗಾಂಧೀ ಜಯಂತಿ ದಿನ ಪ್ರತಿಯೊಬ್ಬರು ಗ್ರಾಮ ಸ್ವರಾಜ್ಯದತ್ತ, ರಾಮರಾಜ್ಯದ ಕಡೆಗೆ, ಹಳ್ಳಿಯಿಂದ ಡೆಲ್ಲಿಗೆ ಸ್ವಯಂ ಆಡಳಿತದತ್ತ, ಭ್ರಷ್ಟಾಚಾರ ರಹಿತ ಸ್ವಚ್ಚ ಊರಿನ ಕಡೆಗೆ ನಡೆಯುವ ಸಾಮರಸ್ಯದ ಹೆಜ್ಜೆಯಾಗಬೇಕೆಂದು ಸುದ್ದಿಯ ಆಶಯವಾಗಿದೆ. ಅದನ್ನು ಆಚರಿಸಲು ಮತ್ತು ಯಶಸ್ವಿಗೊಳಿಸಲು ಪ್ರತಿಯೊಂದು ಗ್ರಾಮ ಪಂಚಾಯತ್, ಸರಕಾರಿ ಇಲಾಖೆಯನ್ನು, ಸಂಘ ಸಂಸ್ಥೆಗಳನ್ನು, ಜನಪ್ರತಿನಿಧಿಗಳನ್ನು ತೊಡಗಿಸಿಕೊಳ್ಳಲಾಗುವುದು. ಸುದ್ದಿ ಚಾನೆಲ್ ಸ್ಟುಡಿಯೋಕ್ಕೆ ಕರೆದು ಜನರೊಂದಿಗೆ ಚರ್ಚಿಸಲಾಗುವುದು.

ಇದೇ ಅಕ್ಟೋಬರ್ ೨ರಂದು ಗಾಂಧೀ ಜಯಂತಿ ಆಚರಣೆಯನ್ನು ಈ ಮೇಲಿನ ವಿಶಿಷ್ಠ ರೀತಿಯಲ್ಲಿ ಗಾಂಧಿಯವರ ಆಶಯಗಳ ಈಡೇರಿಕೆಯತ್ತ ಜನರು ಹೆಜ್ಜೆ ಇಡುವ ಕಾರ್ಯಕ್ರಮವನ್ನಾಗಿ ಮಾಡಬೇಕು ಎಂದು ಯೋಚಿಸಿದ್ದೇವೆ. ಮಹಾತ್ಮ ಗಾಂಧೀಯವರು `ಬ್ರಿಟೀಷರನ್ನು ಭಾರತದಿಂದ ಓಡಿಸುವುದೇ ಸ್ವಾತಂತ್ರ್ಯವಲ್ಲ. ಅದು ಸ್ವಾತಂತ್ರ್ಯದತ್ತ ಪ್ರಥಮ ಹೆಜ್ಜೆ. ಭಾರತ ದೇಶದ ಜನರ ಬಡತನ, ಭವಣೆಗಳು ನಿವಾರಣೆಯಾಗಿ ದೇಶದ ಕಟ್ಟ ಕಡೆಯ ದುರ್ಬಲ ವ್ಯಕ್ತಿಯೂ ಸ್ವಾಭಿಮಾನದಿಂದ, ಸ್ವಾವಲಂಬಿಯಾಗಿ ತಲೆ ಎತ್ತಿ ನಡೆಯುವಂತೆ ಆಗುವುದೇ ಸ್ವಾತಂತ್ರ್ಯ’ ಎಂದಿದ್ದಾರೆ.

ತುಂಬು ಯವ್ವನೆಯ ಮಹಿಳೆ ಚಿನ್ನಾಭರಣ ಧರಿಸಿಕೊಂಡು ನಡು ರಾತ್ರಿಯಲ್ಲಿ ಒಬ್ಬಂಟಿಗಳಾಗಿ ರಸ್ತೆಯಲ್ಲಿ ಹೋಗಬಹುದಾದ ರಕ್ಷಣೆಯ ವ್ಯವಸ್ಥೆ ಸಮಾಜದಲ್ಲಿದ್ದರೆ ಅದುವೇ ರಾಮರಾಜ್ಯ ಎಂದು ಹೇಳಿದ್ದಾರೆ. ಪ್ರತಿಯೊಂದು ಹಳ್ಳಿಯು ಸ್ವಾವಲಂಬಿಯಾಗಿ ಸ್ವಯಂ ಆಡಳಿತ ಹೊಂದಿರಬೇಕು. ಆಡಳಿತ ಡೆಲ್ಲಿಯಿಂದ ಹಳ್ಳಿಗೆ ಅಲ್ಲ. ಹಳ್ಳಿಯಿಂದ ಡೆಲ್ಲಿಗೆ ಆಗಬೇಕು ಅದುವೇ ಜನಾಡಳಿತ ಅಥವಾ ಜನ ಸ್ವಾತಂತ್ರ್ಯ ಎಂದಿದ್ದಾರೆ.

ಈ ಮೇಲಿನ ಮೂರು ವಿಚಾರಧಾರೆಗಳನ್ನು ಒಳಗೊಂಡ ಈ ಊರು ನಮ್ಮದು, ನಮ್ಮದೇ ಆಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು ನಮ್ಮವರೇ. ಊರಿನ ಪೂರ್ಣ ಅಭಿವೃದ್ಧಿಯ ಜವಾಬ್ದಾರಿ ನಮ್ಮದು. ಸ್ವಚ್ಚ ಗ್ರಾಮ, ಭ್ರಷ್ಟಾಚಾರ ರಹಿತ ಊರು ನಮ್ಮದಾಗಲಿ ಎಂಬ ಘೋಷಣೆಗಳನ್ನು ಜನರು ತಮ್ಮದಾಗಿಸಿಕೊಳ್ಳಲು ಸುದ್ದಿಯಿಂದ ಅಕ್ಟೋಬರ್ ೨ರಂದು ವಿಶೇಷ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ. ಅದನ್ನು ಕಾರ್ಯರೂಪಕ್ಕೆ ತರಲು ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ಮಹಾತ್ಮ ಗಾಂಧಿ ರಥ ಸಂಚರಿಸಲಿದೆ. ಗ್ರಾಮ ಗ್ರಾಮಗಳಲ್ಲಿ ಪಂಚಾಯತ್ ಮಟ್ಟದಲ್ಲಿ ತಾಲೂಕಿನಾದ್ಯಂತ ಸಭೆಗಳನ್ನು, ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು.

ವೀಕೆಂಡ್ ಕರ್ಫ್ಯೂ, ಲಾಕ್‌ಡೌನ್ (ಬಲಾತ್ಕಾರದ ಬಂದ್) ಬಗ್ಗೆ ಜನಾಕ್ರೋಶ, ವರ್ತಕರ ಪ್ರತಿಭಟನೆ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.