HomePage_Banner
HomePage_Banner
HomePage_Banner
HomePage_Banner

ತಾಲೂಕಿನ ಎಲ್ಲಾ ಇಲಾಖೆಗಳಲ್ಲಿ ಕೆಲಸಕ್ಕೆ ಅನುಕೂಲ ವ್ಯವಸ್ಥೆ- ಇಲಾಖೆಗೆ ಬರುವ ಸಾರ್ವಜನಿಕರಿಗೆ ಸೌಲಭ್ಯಗಳ ವ್ಯವಸ್ಥೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತಾಲೂಕಿನ ಇಲಾಖೆಗಳನ್ನು ಸಂಘ ಸಂಸ್ಥೆಗಳು ದತ್ತು ತೆಗೆದುಕೊಳ್ಳುವಂತೆ ಮಾಡುವ ವ್ಯವಸ್ಥೆ ಬಗ್ಗೆ ಚಿಂತನೆ
  • ಜನಮೆಚ್ಚಿದ ಅಧಿಕಾರಿ/ಸಿಬಂದಿಗಳಿಗೆ ಸಂಘ ಸಂಸ್ಥೆಗಳ  ಸಹಯೋಗದೊಂದಿಗೆ ಸಾರ್ವಜನಿಕ ಸನ್ಮಾನಕ್ಕೆ ಸಿದ್ದತೆ

ತಾಲೂಕಿನ ಎಲ್ಲಾ ಸರಕಾರಿ ಇಲಾಖೆಗಳು ನಮಗಾಗಿಯೇ ಇರುವುದು. ಅಧಿಕಾರಿಗಳು ಮತ್ತು ಸಿಬಂದಿಗಳಿರುವುದು ಜನರ ಸೇವೆಗಾಗಿ, ಅವರ ಸೇವೆಯನ್ನು ಗುರುತಿಸುವುದು ನಮ್ಮ ಕರ್ತವ್ಯ. ಇಲಾಖೆಗಳಲ್ಲಿ ಅವರಿಗೆ ಕೆಲಸಗಳನ್ನು ಮಾಡಲು ಬೇಕಾದ ಅನುಕೂಲತೆಗಳನ್ನು ಸರಕಾರ ಕಲ್ಪಿಸಬೇಕು. ಅದು ಸಾಧ್ಯವಾಗದಿದ್ದರೆ ಜನತೆಯೇ ಮುಂದೆ ಬಂದು ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಬೇಕು. ಸಾರ್ವಜನಿಕರು ಸೇವೆಗಾಗಿ ಕಚೇರಿಗೆ ಬರುವಾಗ ಅಲ್ಲಿ ಅವರಿಗೆ ಕುಳಿತುಕೊಳ್ಳಲು ಬೇಕಾದ ವ್ಯವಸ್ಥೆಗಳು, ಕುಡಿಯುವ ನೀರು, ಶೌಚಾಲಯ ಸೌಲಭ್ಯ ಎಲ್ಲವೂ ದೊರಕಬೇಕು. ಅದನ್ನು ಮಾಡುವ ಮೂಲಕ ಇಲಾಖೆಯವರು ಉತ್ತಮ ಸೇವೆ ಮಾಡುವಂತೆ ಮತ್ತು ಅಲ್ಲಿಗೆ ಬರುವ ಜನರಿಗೆ ಉತ್ತಮ ಸೇವೆ ದೊರೆಯುವಂತೆ ಮಾಡುವ ಜವಾಬ್ದಾರಿ ಸರಕಾರದ್ದು ಜನಪ್ರತಿನಿಧಿಗಳದ್ದು ಮತ್ತು ಜನತೆಯದ್ದೂ ಆಗಿದೆ ಎಂದು ನಾವು ನಂಬಿದ್ದೇವೆ.

ಅದನ್ನು ಕಾರ್ಯರೂಪಕ್ಕೆ ತರಲು ಪ್ರಥಮ ಹೆಜ್ಜೆಯಾಗಿ ಇತ್ತೀಚೆಗೆ ಜನರು ಓಟಿನ ಮೂಲಕ ಆಯ್ಕೆ ಮಾಡಿದ ಸರಕಾರಿ ಇಲಾಖೆಗಳ ಜನ ಮೆಚ್ಚಿದ ಅಧಿಕಾರಿ/ಸಿಬಂದಿಗಳಿಗೆ ತಾಲೂಕಿನ ಎಲ್ಲಾ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸಾರ್ವಜನಿಕ ಸನ್ಮಾನಕ್ಕೆ ಏರ್ಪಾಡು ಮಾಡಲಾಗುವುದು. ಅಲ್ಲದೆ ಪ್ರತಿಯೊಂದು ಇಲಾಖೆಯ ಸಿಬಂದಿಗಳು ತಮ್ಮ ಸೇವೆಗೆ ಜವಾಬ್ದಾರರಾಗಿರುವಂತೆ ಅವರಿಗೆ ಉತ್ತಮ ವ್ಯವಸ್ಥೆಯನ್ನು ಒದಗಿಸುವುದಲ್ಲದೆ ಅಲ್ಲಿಗೆ ಸೇವೆಗಾಗಿ ಬರುವ ಜನರಿಗೆ ಬೇಕಾದ ಸೌಲಭ್ಯವನ್ನು ಸಂಘ-ಸಂಸ್ಥೆಗಳು ದತ್ತು ತೆಗೆದುಕೊಂಡ ರೀತಿಯಲ್ಲಿ ಒದಗಿಸುವ ವ್ಯವಸ್ಥೆ ಒದಗಿಸುವ ಬಗ್ಗೆಯೂ ಚರ್ಚಿಸಿ ತಿಳಿಸಲಾಗುವುದು. ಆ ಮೂಲಕ ಇಲಾಖೆಯ ಸಿಬಂದಿಗಳು ಉತ್ತಮ ಸೇವೆ ನೀಡುವಂತೆ ಮಾಡಿ ನಮ್ಮ ಊರು, ನಮ್ಮ ತಾಲೂಕು ಭ್ರಷ್ಟಾಚಾರ ರಹಿತ ಆಗುವಂತೆ ಮಾಡಲು ಪ್ರಯತ್ನಿಸಲಾಗುವುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.