HomePage_Banner
HomePage_Banner
HomePage_Banner
HomePage_Banner

ಉಪ್ಪಿನಂಗಡಿ: ದ್ವಿಚಕ್ರ ವಾಹನ ಆಕ್ಟಿವಾಗೆ ಬುಲೆಟ್ ಟ್ಯಾಂಕರ್ ಡಿಕ್ಕಿ – ಉಪ್ಪಿನಂಗಡಿ ಖಾಸಗಿ ಹೈಸ್ಕೂಲ್ ವಿದ್ಯಾರ್ಥಿ ಅಧ್ವಿತ್ ಸ್ಥಳದಲ್ಲೇ ಮೃತ್ಯು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ತಾಯಿ ಕರಾಯ ಅಂಗನವಾಡಿ ಕಾರ್‍ಯಕರ್ತೆ ಅನುರಾಧ ಗಂಭೀರ ಗಾಯ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ ೭೫ರಲ್ಲಿ, ಇಲ್ಲಿನ ಗಾಂಧಿಪಾರ್ಕ್ ಬಳಿ ಬುಲೆಟ್ ಟ್ಯಾಂಕರ್ ತನ್ನ ಎದುರಿನಲ್ಲಿ ಹೋಗುತ್ತಿದ್ದ ಆಕ್ಟಿವಾಗೆ ಹಿಂದಿನಿಂದ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಆಕ್ಟಿವಾದಲ್ಲಿದ್ದ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟು, ಸವಾರೆ ತಾಯಿ ಗಂಭೀರ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಮೃತಪಟ್ಟಿರುವ ನತದೃಷ್ಠ, ಉಪ್ಪಿನಂಗಡಿ ಸಂತ ಮೇರಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಅಧ್ವಿತ್ (೧೫ ವ.) ಎಂಬವರಾಗಿದ್ದು, ತನ್ನ ತಾಯಿ ಅನುರಾಧ ಗಂಭೀರ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಕರಾಯ ಗ್ರಾಮದ ಕಲ್ಲೇರಿ ನಿವಾಸಿ ರಿಕ್ಷಾ ಚಾಲಕ ಜನಾರ್ದನ ಎಂಬವರ ಪತ್ನಿಯಾಗಿರುವ ಅನುರಾಧಾರವರು ಉಜ್ರುಬೆಟ್ಟು ಅಂಗನವಾಡಿ ಕೇಂದ್ರದ ಕಾರ್‍ಯಕರ್ತೆಯಾಗಿದ್ದು, ಸೆ. ೬ರಂದು ಬೆಳಿಗ್ಗೆ ೧೦ನೇ ತರಗತಿ ಕಲಿಯುತ್ತಿರುವ ಪುತ್ರ ಅಧ್ವಿತ್ ಪರೀಕ್ಷೆ ಬರೆದ ಪುಸ್ತಕವನ್ನು ಶಾಲೆಗೆ ಕೊಡುವ ಸಲುವಾಗಿ ಹೋದವರು, ಶಾಲೆಯಲ್ಲಿ ಪುಸ್ತಕಕೊಟ್ಟು ಬರುವಾಗ ಹೆದ್ದಾರಿಯಲ್ಲಿ ಗಾಂಧಿಪಾರ್ಕ್ ಬಳಿ ಪೆಟ್ರೋಲ್ ಬಂಕ್ ಬಳಿಯಲ್ಲಿ ಪೇಟೆ ಕಡೆಗೆ ಬರುತ್ತಿರುವಾಗ ತನ್ನ ಹಿಂದಿನಿಂದಲೇ ಹಾಸನ ಕಡೆಯಿಂದ ಬಂದ ಬುಲೆಟ್ ಟ್ಯಾಂಕರ್ ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.

ಟ್ಯಾಂಕರ್ ಡಿಕ್ಕಿ ಹೊಡೆದ ರಭಸಕ್ಕೆ ಆಕ್ಟಿವಾದ ಹಿಂದೆ ಕುಳಿತಿದ್ದ ಅಧ್ವಿತ್ ತನ್ನ ಬಲಕ್ಕೆ ರಸ್ತೆಗೆ ಬಿದ್ದಿದ್ದು, ತಲೆಗೆ ಗಾಯಗೊಂಡು ರಕ್ತಸೋರಿಕೆ ಆಗಲಾರಂಭಿಸಿ ಸ್ಥಳದಲ್ಲೇ ಮೃತಪಟ್ಟರೆನ್ನಲಾಗಿದೆ. ಆಕ್ಟಿವಾ ಚಾಲನೆ ಮಾಡಿಕೊಂಡಿದ್ದ ಅನುರಾಧಾರವರು ತನ್ನ ಎಡಕ್ಕೆ ಬಿದ್ದಿದ್ದು, ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

೧ ತಾಸು ವಾಹನ ಸಂಚಾರಕ್ಕೆ ತಡೆ:
೨ ದಿನಗಳ ವೀಕೆಂಡ್ ಕರ್ಫ್ಯೂ ಬಳಿಕ ಸೋಮವಾರ ಬೆಳಿಗ್ಗಿನಿಂದಲೇ ಪೇಟೆಯಲ್ಲಿ, ಹೆದ್ದಾರಿಯಲ್ಲಿ ವಾಹನಗಳ ಓಡಾಟ ಸಂಖ್ಯೆ ಅಧಿಕ ಕಂಡು ಬಂದಿತ್ತು. ಅದಾಗ್ಯೂ ಅಪಘಾತ ಸಂಭವಿಸಿದ ತಕ್ಷಣ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ತಡೆ ಉಂಟಾಗಿ, ಸುಮಾರು ೧ ತಾಸು ಕಾಲ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು. ಉಪ್ಪಿನಂಗಡಿ ಮತ್ತು ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಬಂದು ವಾಹನಗಳ ಸಂಚಾರಕ್ಕೆ ಇದ್ದ ಅಡೆತಡೆಗಳನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ನಿರಂತರ ಅಪಘಾತ, ಹಲವು ಸಾವು-ನೋವು ಘಟಿಸಿದ ಜಾಗ
ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಪಾಸ್ ರಸ್ತೆಯಲ್ಲಿ ಇರುವ ಪೆಟ್ರೋಲ್ ಬಂಕ್ ಎದುರು ಈ ಘಟನೆ ಸಂಭವಿಸಿದ್ದು, ಇಲ್ಲಿ ನಿರಂತರ ಅಪಘಾತ ನಡೆಯುತ್ತಿದ್ದು, ಈಗಾಗಲೇ ೫ಕ್ಕೂ ಅಧಿಕ ಸಾವು ಸಂಭವಿಸಿದೆ. ಮತ್ತು ಹಲವಾರು ಅಪಘಾತದಲ್ಲಿ ಹತ್ತಾರು ಮಂದಿ ಗಾಯಗೊಂಡಿರುತ್ತಾರೆ. ಹೀಗಾಗಿ ಈ ಜಾಗ ಅಪಘಾತ ವಲಯ ಎಂದೇ ಗುರುತಿಸಲ್ಪಟ್ಟಿದೆ.

ಗಾಂಧಿಪಾರ್ಕ್‌ನಿಂದ ಪೆಟ್ರೋಲ್ ಬಂಕ್ ತನಕವೂ ರಸ್ತೆ ಇಳಿಜಾರು ಇದ್ದು, ವಾಹನಗಳು ವೇಗವಾಗಿ ಬರುತ್ತಿರುತ್ತದೆ. ಅದೇ ರೀತಿ ಇಲ್ಲಿ ನಟ್ಟಿಬೈಲ್ ಕಡೆಗೆ ಹೋಗುವ ಮತ್ತು ಪೆಟ್ರೋಲ್ ಬಂಕ್‌ಗೆ ಹೋಗುವ ಅಡ್ಡ ರಸ್ತೆ ಇದೆ. ಹೀಗಾಗಿ ಈ ರಸ್ತೆಯಲ್ಲಿ ಬರುವ ವಾಹನಗಳು ನೇರವಾಗಿ ಹೆದ್ದಾರಿಗೆ ಸಂಪರ್ಕ ಆಗುತ್ತದೆ. ಹೀಗಾಗಿಯೂ ಇಲ್ಲಿ ಹೆಚ್ಚು ಅಪಘಾತ ನಡೆಯುತ್ತಿರುತ್ತದೆ.

ಬೇರಿಕೇಡ್ ಮಾಯ, ಹಂಪ್ಸ್ ನಿರ್ಮಿಸಲು ಆಗ್ರಹ:
ಇಲ್ಲಿ ೭ ವರ್ಷದ ಹಿಂದೆ ಹೆಚ್ಚುತ್ತಿರುವ ಅಪಘಾತವನ್ನು ತಡೆಗಟ್ಟುವ ಸಲುವಾಗಿ ಸ್ಥಳೀಯ ಸಂಘ ಸಂಸ್ಥೆ ಮತ್ತು ದಾಣಿಗಳ ಸಹಕಾರ ಪಡೆದುಕೊಂಡು ಶಾಸಕರಾಗಿದ್ದ ಶಕುಂತಳಾ ಶೆಟ್ಟಿರುವ ಈ ಜಾಗಕ್ಕೆ ಮತ್ತು ಹಿರೇಬಂಡಾಡಿ ತಿರುವಿನಲ್ಲಿ ಬೇರಿಕೇಡ್ ಹಾಕಿಸಿದ್ದರು. ಆದರೆ ಅದು ಕೆಲವು ಸಮಯ ಮಾತ್ರ ಅಲ್ಲಿ ಇದ್ದು ಬಳಿಕ ಮಾಯವಾಗಿರುತ್ತದೆ. ಆದ ಕಾರಣ ಈ ಜಾಗದಲ್ಲಿ ನಡೆಯುವ ಅಪಘಾತವನ್ನು ತಡೆಗಟ್ಟುವ ಸಲುವಾಗಿ ವೇಗ ತಡೆ ಹಂಪ್ಸ್ ಹಾಕುವಂತೆ ಸಾರ್ವಜನಿಕರಿಂದ ಆಗ್ರಹ ವ್ಯಕ್ತವಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.