HomePage_Banner
HomePage_Banner
HomePage_Banner
HomePage_Banner

ಪ್ರವಾಸ ಹೊರಟ ಡಾರ್ಕ್ ರೈಡರ್ಸ್‌ಗೆ ಎದುರಾದ ಕಂಟಕ!? ನೆಲ್ಯಾಡಿಯ ಎಂಜಿರದಲ್ಲಿ ಭೀಕರ ಅಪಘಾತ, ಓರ್ವ ಸಾವು, ಇಬ್ಬರಿಗೆ ಗಾಯ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕುಂಬ್ರದಲ್ಲಿ ಪ್ರವಾಸ ಉದ್ಘಾಟನೆ ವೇಳೆ ಮಗುಚಿಬಿದ್ದ ಮೂರು ಬೈಕ್‌ಗಳು
  • ಆರಂಭದಲ್ಲೇ ದೊರಕಿತ್ತು ವಿಘ್ನದ ಮುನ್ಸೂಚನೆ…!?

ಪುತ್ತೂರು: ಬೈಕ್‌ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವ ಉದ್ದೇಶವನ್ನಿಟ್ಟುಕೊಂಡು ಡಾರ್ಕ್ ರೈಡರ್ಸ್ ಹೆಸರಿನಲ್ಲಿ ಕುಂಬ್ರದಿಂದ ಶಿರಸಿಯ ಹೊಸಹಳ್ಳಿ ಗುಡ್ಡಕ್ಕೆ ಪ್ರವಾಸ ಹೊರಟಿದ್ದ ಯುವಕರ ತಂಡದಲ್ಲಿದ್ದ ಬೈಕ್‌ವೊಂದು ನೆಲ್ಯಾಡಿಯ ಎಂಜಿರ ಎಂಬಲ್ಲಿ ಅಪಘಾತಕ್ಕೆ ಈಡಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಸಹ ಸವಾರ ಗಂಭೀರ ಗಾಯಗೊಂಡಿದ್ದಾನೆ. ಮೃತಪಟ್ಟ ಯುವಕನನ್ನು ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಸಿಆರ್‌ಸಿ ಕಾಲನಿಯ ಮನೋಜ್ ಎಂದು ಗುರುತಿಸಲಾಗಿದೆ. ಗಾಯಗೊಂಡವನನ್ನು ಸಿಆರ್‌ಸಿ ಕಾಲನಿಯ ಸಚಿನ್ ಎಂದು ಹೇಳಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ತಂಡದಲ್ಲಿದ್ದ ಬೈಕ್ ಸವಾರರು ತಮ್ಮ ಬೈಕ್‌ಗಳನ್ನು ತಿರುಗಿಸಿ ಅಪಘಾತದ ಸ್ಥಳಕ್ಕೆ ಆಗಮಿಸುತ್ತಿದ್ದ ವೇಳೆ ತಂಡದಲ್ಲಿದ್ದ ಚೇತನ್ ಕುಮಾರ್ ಎಂಬವರ ಬೈಕ್ ಸ್ಕಿಡ್ ಆಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಾಗಿಸಲಾಗಿದೆ.

 

‌                                                                            ಮೃತ ಮನೋಜ್

 

ಜವರಾಯನಾಗಿ ಬಂದ ಕಂಟೈನರ್ ವಾಹನ
ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಠಾರದಲ್ಲಿ ಸೆ.೦೬ ರಂದು ಬೆಳಿಗ್ಗೆ ಡಾರ್ಕ್ ರೈಡರ್ಸ್ ಬೈಕ್ ತಂಡದ ಉದ್ಘಾಟನೆ ನಡೆದಿತ್ತು. ತಂಡದಲ್ಲಿ ೧೦ ಬೈಕ್‌ಗಳಿದ್ದು ೧೫ ಕ್ಕೂ ಅಧಿಕ ಮಂದಿ ಬೈಕ್ ರೈಡರ್ಸ್ ಇದ್ದರು ಎನ್ನಲಾಗಿದೆ. ಮೃತ ಪಟ್ಟ ಮನೋಜ್‌ರವರು ಕುಂಬ್ರಕ್ಕೆ ಬಂದು ಹೋಗಿದ್ದು ಬಳಿಕ ಪುತ್ತೂರಿನಲ್ಲಿ ತಂಡದೊಂದಿಗೆ ಸೇರಿಕೊಂಡಿದ್ದರು ಎನ್ನಲಾಗಿದೆ. ತಂಡದಲ್ಲಿ ಹಿಂದೂ ಮುಸ್ಲೀಂ ಧರ್ಮದವರಿದ್ದು ಇದೊಂದು ಸೌಹಾರ್ದ ಟೂರ್ ಎಂದು ಹೇಳಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿ ಸಮೀಪದ ಎಂಜಿರದಲ್ಲಿ ಜವರಾಯನಾಗಿ ಬಂದ ಕಂಟೈನರ್ ಲಾರಿಯೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಮನೋಜ್‌ರವರು ಸ್ಥಳದಲ್ಲೇ ಮೃತಪಟ್ಟಿದ್ದು ಸಚಿನ್‌ರವರು ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಇದೇ ವೇಳೆ ತಂಡದಲ್ಲಿದ್ದ ಇತರ ಬೈಕ್ ಸವಾರರು ಮುಂದಕ್ಕೆ ಸಾಗಿದ್ದರು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಪ್ರವಾಸ ಮೊಟಕುಗೊಳಿಸಿ ಅಪಘಾತದ ಸ್ಥಳಕ್ಕೆ ಹಿಂದಿರುಗುತ್ತಿದ್ದ ವೇಳೆ ತಂಡದ ಚೇತನ್ ಕುಮಾರ್ ಚಲಾಯಿಸುತ್ತಿದ್ದ ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ರೈಡಿಂಗ್‌ ಹೊರಟಿದ್ದ ತಂಡ

ಇದ್ದಕ್ಕಿದ್ದಂತೆ ಮಗುಚಿಬಿದ್ದ ಮೂರು ಬೈಕ್‌ಗಳು
ಆರಂಭದಲ್ಲೇ ವಿಘ್ನದ ಮುನ್ಸೂಚನೆ
ಕುಂಬ್ರದಲ್ಲಿ ಉದ್ಘಾಟನೆಯ ವೇಳೆಯೇ ತಂಡಕ್ಕೆ ವಿಘ್ನದ ಸುಳಿವು ದೊರೆತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಉದ್ಘಾಟನೆಯ ವೇಳೆ ನಿಲ್ಲಿಸಿದ್ದ ಮೂರು ಬೈಕ್‌ಗಳು ಒಮ್ಮೆಲೆ ಇದ್ದಕ್ಕಿದ್ದಂತೆ ಮಗುಚಿ ಬಿದ್ದಿವೆ. ಈ ವೇಳೆ ಕೆಲವರು ಇದು ಕೆಟ್ಟ ಶಕುನ ಎಂದು ಹೇಳಿಕೊಂಡಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.