HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ; ರೋಟರಿ ಪುತ್ತೂರು ಸಿಟಿ ವತಿಯಿಂದ ವಿದ್ಯಾ ಸೇತು ಪುಸ್ತಕ ವಿತರಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  •   ಮಕ್ಕಳ ಕಲಿಕೆಗೆ ಪ್ರೇರಣೆಯಾಗಲಿ- ಪ್ರಮೋದ್ ಮಲ್ಲಾರ
   ನಿಡ್ಪಳ್ಳಿ; ರೋಟರಿ ಪುತ್ತೂರು ಸಿಟಿ ವತಿಯಿಂದ ಬೆಟ್ಟಂಪಾಡಿ ಸರಕಾರಿ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ವಿದ್ಯಾ ಸೇತು ಪುಸ್ತಕ ವಿತರಣೆ ಕಾರ್ಯಕ್ರಮ  ಸೆ.6 ರಂದು ಶಾಲೆಯಲ್ಲಿ ನಡೆಯಿತು. ಪುಸ್ತಕ ವಿತರಿಸಿದ ರೋಟರಿ ಪುತ್ತೂರು ಸಿಟಿ ಅಧ್ಯಕ್ಷ ಪ್ರಮೋದ್ ಮಲ್ಲಾರ  ಮಾತನಾಡಿ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ ಉತ್ತಮ ಫಲಿತಾಂಶ ಪಡೆದು ಶಾಲೆಗೆ, ಶಿಕ್ಷಕರಿಗೆ ಮತ್ತು ಹೆತ್ತವರಿಗೆ ಹೆಸರು ತರುವಂತಾಗ ಬೇಕು ಎಂಬುದು ನಮ್ಮ ಕ್ಲಬ್‌ನ ಮುಖ್ಯ ಉದ್ದೇಶ. ಮಕ್ಕಳು ಹೆಚ್ಚು ಅಂಕ ಪಡೆಯಲು ವಿದ್ಯಾಭ್ಯಾಸಕ್ಕಾಗಿ ಈ ಪುಸ್ತಕ ಒಂದು ಪ್ರೇರಣೆಯಾಗಲಿ ಎಂದು ಹೇಳಿ ಶುಭ ಹಾರೈಸಿದರು.
 
ಕ್ಲಬ್‌ನ ಕಾರ್ಯದರ್ಶಿ ಗುರುರಾಜ್ ಮಾತನಾಡಿ ಎಸ್.ಎಸ್.ಎಲ್.ಸಿ ಮಕ್ಕಳ ಉತ್ತಮ ಕಲಿಕೆಗಾಗಿ ಉತ್ತೇಜನ ನೀಡುವ ಸಲುವಾಗಿ ಶಿಕ್ಷಣ ತಜ್ಞರು ಸೇರಿ ಈ ವಿದ್ಯಾ ಸೇತು ಎಂಬ ಪುಸ್ತಕ ತಯಾರಿಸಲಾಗಿದೆ. ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಈ ಪುಸ್ತಕ ಉಪಯೋಗವಾಗಲಿ ಎಂದು ಹೇಳಿದರು. ಕ್ಲಬ್‌ನ ಸದಸ್ಯ ಲಾರೆನ್ಸ್ ಗೊನ್ಸಾಲ್ವಿಸ್, ಶಾಲಾಭಿವೃದ್ದಿ ಸಮಿತಿ ಸದಸ್ಯ ಸತ್ಯನಾರಾಯಣ ರೈ ನುಳಿಯಾಲು ಮಾತನಾಡಿ ಕ್ಲಬ್‌ನ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲಾಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಸುಂದರ್ ನಾಯಕ್ ಬಾಳೆಗುಳಿ ಅಧ್ಯಕ್ಷತೆ ವಹಿಸಿ ಮಾತನಾಡಿ ರೋಟರಿ ಪುತ್ತೂರು ಸಿಟಿ ನಮ್ಮ ಶಾಲೆಯ ಮೇಲೆ ಪ್ರೀತಿ ಇಟ್ಟು ಸಹಕಾರ ನೀಡುತ್ತಿರುವುದಕ್ಕೆ ನಾವು ಚಿರಋಣಿಯಾಗಿದ್ದೇವೆ.ಮುಂದೆಯೂ ಅವರ ಸಹಕಾರ ನಮ್ಮ ಶಾಲೆಗೆ ಇರಲಿ. ಈ ಪುಸ್ತಕ ಅಭ್ಯಾಸ ಮಾಡಿ ನೂರಕ್ಕೆ ನೂರು ಫಲಿತಾಂಶ ಬರಲಿ ಎಂದರು. ಕ್ಲಬ್‌ನ ಸದಸ್ಯ ನಿವೃತ್ತ ಸೈನಿಕ ರಾಮಚಂದ್ರ ಪುಚ್ಚೆರಿ,ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ, ರೋಟರಿ ಕ್ಲಬ್ ಸದಸ್ಯ ಪೊಡಿಯ ಶಾಲಾಭಿವೃದ್ದಿ ಸಮಿತಿ ಸದಸ್ಯ ರಾಧಾಕೃಷ್ಣ ರೈ ಪಟ್ಟೆ, ರೋಟರಿ ಕ್ಲಬ್ ಸದಸ್ಯ ನಿವೃತ್ತ ಶಿಕ್ಷಕ ಪದ್ಮನಾಭ ಶೆಟ್ಟಿ, ಶಾಲಾಭಿವೃದ್ದಿ ಸಮಿತಿ ಸದಸ್ಯ ಗಂಗಾಧರ ಸಿ.ಎಚ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪ್ರಾರ್ಥಿಸಿ ಮುಖ್ಯ ಗುರು ಶ್ಯಾಮಲಾ ಸ್ವಾಗತಿಸಿ ಪ್ರಾಸ್ತಾವಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ವಂದಿಸಿ ಸಹಶಿಕ್ಷಕಿ ಉಮಾ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕಿಯರಾದ ಸೌಮ್ಯ ಲಕ್ಷ್ಮಿ, ಭಾರತಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
       ” ವಿದ್ಯಾ ಸೇತು ” ವಿದ್ಯಾರ್ಜನೆಗಾಗಿ ಕೈಗನ್ನಡಿ ಎಂಬ ಈ ವಿನೂತನ ಪುಸ್ತಕ   ಕಲಿಕೆಯಲ್ಲಿ ಹಿಂದುಳಿದ ಹತ್ತನೇ ತರಗತಿ ವಿದ್ಯಾರ್ಥಿಗಳ ಹೆಚ್ಚಿನ ಕಲಿಕೆಗಾಗಿ ರೋಟರಿ ಕ್ಲಬ್ ಈ ಪುಸ್ತಕ ತಯಾರಿಸಿದ್ದು ಜಿಲ್ಲಾ ಮಟ್ಟದಲ್ಲಿ ವಿತರಿಸಲು ಕ್ರಮಕೈಗೊಂಡಿದ್ದು ತಾಲೂಕಿನಲ್ಲಿ ನಮ್ಮ ಶಾಲೆ ಆಯ್ಕೆ ಮಾಡಿ ನೀಡಲಾಗಿದೆ. ರೋಟರಿ ಪುತ್ತೂರು ಸಿಟಿ  ಈ ಹಿಂದೆಯೂ ನಮ್ಮ ಶಾಲೆಯ ಅನ್ನಚತ್ರ ನಿರ್ಮಾಣಕ್ಕೆ ರೂ ಒಂದು ಲಕ್ಷ ನೀಡಿ ಸಹಕರಿಸಿರುವುದು ಶ್ಲಾಘನೀಯ. ಮುಂದೆಯೂ ಕ್ಲಬ್‌ನ ಇನ್ನಷ್ಟೂ ಸಹಕಾರ ಇರಲಿ.
         ಶ್ಯಾಮಲಾ ಶೆಟ್ಟಿ
  ಮುಖ್ಯ ಗುರು, ಕ್ಲಬ್ ಸದಸ್ಯರು
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.