HomePage_Banner
HomePage_Banner
HomePage_Banner
HomePage_Banner

ಅಕ್ಷಯ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಕ್ಷಯ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಪ್ರವರ್ತಿತ ಅಕ್ಷಯ ಕಾಲೇಜಿನಲ್ಲಿ ‌ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಗುರುವಂದನಾ ಕಾರ್ಯಕ್ರಮ ‌ನಡೆಯಿತು. ಕಾರ್ಯಕ್ರಮವನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ‌ ಸಮಿತಿ‌ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ದೀಪಪ್ರಜ್ವಲನ ಗೈಯುವ ಮೂಲಕ ಉದ್ಘಾಟಿಸಿದರು. ಬಳಿಕ ಅತಿಥಿಗಳು ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಪುತ್ತೂರು ವಿಕ್ಟರ್ಸ್ ಶಾಲೆಯ ನಿವೃತ್ತ ‌ಶಿಕ್ಷಕ ಜೆರೋಮಿಯಸ್ ಪಾಸ್, ಮುಖ್ಯ ಗುರು ಶ್ರೀನಿವಾಸ್ ಹೆಚ್. ಬಿ., ನಾರಾಯಣ ಗುರು‌ಶಾಲೆಯ ಶಿಕ್ಷಕ ಚಂದ್ರಶೇಖರ ಕೆ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೌರವಾರ್ಪಣೆ ಸ್ವೀಕರಿಸಿದ ‌ಶಿಕ್ಷಕರು, ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಗೆ ‌ದಾರಿದೀಪವಾಗಲಿ‌ ಎಂದು ಶುಭಹಾರೈಸುತ್ತಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಅಲ್ಲದೆ, ಅಕ್ಷಯ ಕಾಲೇಜಿನ ಉಪನ್ಯಾಸಕಿ ಹಾಗೂ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ವೀಣಾ ಮತ್ತು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ‌ಕೇಶವ ಪ್ರಸಾದ್ ಮುಳಿಯ ಅವರನ್ನು ‌ವಿಶೇಷವಾಗಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೇಶವ ಪ್ರಸಾದ್ ಮುಳಿಯ ಅವರು, ದೇಶವನ್ನು ಸುಂದರಗೊಳಿಸುವಲ್ಲಿ‌ ಶಿಕ್ಷಕರ ಪಾತ್ರ ಮಹತ್ವದ್ದು. ಅಕ್ಷಯ ಸಂಸ್ಥೆಗಳ ಅಧ್ಯಕ್ಷ ಜಯಂತ ನಡುಬೈಲು ಅವರ ಮೂಲಕ ಸಂಸ್ಥೆಯು‌ ಅತ್ಯುತ್ತಮವಾಗಿ‌ ಮುನ್ನಡೆಯುತ್ತಿದೆ. ಮತ್ತಷ್ಟು ಯಶಸ್ವಿಯಾಗಿ ಮುನ್ನಡೆಯಲಿ ಎಂದು ಹಾರೈಸಿ ಸರ್ಕಾರವು ಶಿಕ್ಷಕರಿಗೆ ವಿಶೇಷವಾಗಿ ಉತ್ತೇಜನ ನೀಡಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಮುಳಿಯ ಕೇಶವ ಪ್ರಸಾದ್ ಅವರು ಪುತ್ತೂರು ಮಹಾಲಿಂಗೇಶ್ವರ ದೇವರ ಭಾವಚಿತ್ರ ವನ್ನು ಜಯಂತ‌ ನಡುಬೈಲು ಅವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಕ್ಷಯ ಕಾಲೇಜಿನ ಅಧ್ಯಕ್ಷರಾದ ಜಯಂತ ‌ನಡುಬೈಲು‌ ಅವರು ಮಾತನಾಡಿ, ಇದು ಕಾಲೇಜು‌ ಆರಂಭಗೊಂಡ ಬಳಿಕದ ಪ್ರಥಮ‌ ಕಾರ್ಯಕ್ರಮ. ಮೊದಲ ಕಾರ್ಯಕ್ರಮದಲ್ಲಿ‌ ಗುರು ಸಮಾನರಾದ ಶಿಕ್ಷಕರನ್ನು ಗೌರವಿಸುತ್ತಿರುವುದಕ್ಕೆ ಸಂತಸವಾಗುತ್ತಿದೆ. ಸುದೈವ ಯೋಗವಾಗಿ ಕಾಲೇಜು ಮುನ್ನಡೆಸುವ ಯೋಗ ಸಿಕ್ಕಿದೆ. ಎಲ್ಲರ ಸಹಕಾರದಿಂದ ಎಲ್ಲರ ಜೊತೆಗೂಡಿಕೊಂಡು ಮುಂದಕ್ಕೆ ಸಾಗುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಕಲಾವತಿ‌ ಜಯಂತ ನಡುಬೈಲು, ಆಡಳಿತಾಧಿಕಾರಿ ಅರ್ಪಿತ್ ಸೇರಿದಂತೆ ಕಾಲೇಜಿನ ಉಪನ್ಯಾಸಕ ವರ್ಗ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾಲೇಜಿನ ಫ್ಯಾಷನ್ ಡಿಸೈನಿಂಗ್ ಉಪನ್ಯಾಸಕಿ‌ ಪ್ರೀಮಾ ಮತ್ತು‌ ತಂಡ ಪ್ರಾರ್ಥಿಸಿದರು. ಪ್ರಾಂಶುಪಾಲರಾದ ಸಂಪತ್ ಪಕ್ಕಳ ಸ್ವಾಗತಿಸಿದರು. ಶೃತಿ, ಲಿಖಿತಾ ‌ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕ ಕಿಶೋರ್ ಕುಮಾರ್ ರೈ ವಂದಿಸಿದರು. ವಾಣಿಜ್ಯ ವಿಭಾಗ ಉಪನ್ಯಾಸಕಿ ಭವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.