HomePage_Banner
HomePage_Banner
HomePage_Banner
HomePage_Banner

ಸವಣೂರು : ನಿವೃತ ಅಂಗನವಾಡಿ ಕಾರ್ಯಕರ್ತೆ ಮಮತಾ ಜಿ.ಬಡಿಕಿಲ್ಲಾಯ ಅವರಿಗೆ ಶಿವಳ್ಳಿ ಸಂಪದದಿಂದ ಗೌರವಾರ್ಪಣೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಸವಣೂರು : ಶಿವಳ್ಳಿ ಸಂಪದದ ಬೆಳಂದೂರು ವಲಯದ ಮಹಿಳಾ ಸಂಪದದ ವತಿಯಿಂದ ಸವಣೂರು ಅಂಗನವಾಡಿಯಲ್ಲಿ 32 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಸೇವಾನಿವೃತ್ತಿ ಹೊಂದಿದ ಮಮತಾ ಜಿ.ಬಡಿಕಿಲ್ಲಾಯ ಇವರನ್ನು ಶಿಕ್ಷಕರ ದಿನಾಚರಣೆ ಪ್ರಯುಕ್ತ ಅವರ ಸ್ವ ಗೃಹದಲ್ಲಿ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಮಹಿಳಾ ಸಂಪದದ ಅಧ್ಯಕ್ಷರಾದ ಅಶ್ವಿನಿ ನಿಡ್ವಣ್ಣಾಯರವರು 32 ವರ್ಷಗಳ ನಿಸ್ವಾರ್ಥ ಸೇವೆಯ ಬಗ್ಗೆ ತಿಳಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು. ಮಹಿಳಾ ಸಂಪದದ ಕಾರ್ಯದರ್ಶಿ ಇಂದಿರಾ ಬಿ.ಕೆ. ಸ್ವಾಗತಿಸಿ, ಕಾರ್ಯಕ್ರಮಕ್ಕೆ ಸದಸ್ಯರಾದ ಪೂರ್ಣಿಮಾ ಉಪಾಧ್ಯಾಯ ವಂದಿಸಿದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಸಂಪದದ ಸದಸ್ಯರಾದ ಅಶ್ವಿನಿ ಟಿ., ಕ್ಷಮಾ ಭಟ್, ಸೀತಾ ಬಡಿಕಿಲ್ಲಾಯ, ಮುಂತಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.