HomePage_Banner
HomePage_Banner
HomePage_Banner
HomePage_Banner

ಮೊಟ್ಟೆತ್ತಡ್ಕ: ಕಾಂಗ್ರೆಸ್ ಬೂತ್ ಮಟ್ಟದ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಬಿಜೆಪಿ ಮಾರಿಯನ್ನೋಡಿಸುವ ಆಟಿ ಕಳಂಜವಾಗಬೇಕಿದೆ ಕಾಂಗ್ರೆಸ್ – ಎಂ.ಬಿ ವಿಶ್ವನಾಥ್ ರೈ

ಪುತ್ತೂರು: ಕಾಂಗ್ರೆಸ್ ಚಟುವಟಿಕೆಗಳು ಬಿರುಸಿನಿಂದ ಕೂಡಿದ್ದರೂ ಅದು ವರ್ಷಕ್ಕೊಮ್ಮೆ ಬರುವ ಆಟಿ ಕಳಂಜನಂತಿದೆ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಾರೆ. ಆಟಿ ಕಳಂಜ ಧಾರ್ಮಿಕತೆಗೆ ಮಸಿ ಬರೆಯುತ್ತಿರುವ ಈ ಬಿಜೆಪಿಗೆ ಆಟಿ ಕಳಂಜ ಬರುವುದು ಮಾರಿಯನ್ನು ಓಡಿಸಲು ಎಂಬುದು ಅರ್ಥೈಸಲಿ. ಆದ್ದರಿಂದ ದೇಶದಲ್ಲಿ, ರಾಜ್ಯದಲ್ಲಿ ಬಿಜೆಪಿ ಎಂಬ ಮಾರಿಯನ್ನು ಆಟಿ ಕಳಂಜನಂತೆ ಓಡಿಸಿ ದೇಶವನ್ನು ಸುಭೀಕ್ಷೆಯತ್ತ ತರುವುದೇ ಕಾಂಗ್ರೆಸ್ ಧ್ಯೇಯವಾಗಿದೆ ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ್ ರೈಯವರು ಹೇಳಿದರು.

ಮುಂಬರುವ ತಾಲೂಕು ಪಂಚಾಯತ್, ಜಿಲ್ಲಾ ಪಂಚಾಯತ್ ಚುನಾವಣೆಯ ದೃಷ್ಟಿಕೋನದಿಂದ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸಿ ಭದ್ರಪಡಿಸಬೇಕಾಗಿದೆ ಎಂಬುದಾಗಿ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿ ಬೂತ್ ಸಮಿತಿಯನ್ನು ರಚಿಸಿರುವ ಹಿನ್ನೆಲೆಯಲ್ಲಿ ಸೆ.೫ ರಂದು ಮೊಟ್ಟೆತ್ತಡ್ಕ ಕಾಂಗ್ರೆಸ್ ಬೂತ್ ಮಟ್ಟದ ಸಭೆಯಲ್ಲಿ ಅವರು ಮಾತನಾಡಿದರು. ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಿಜೆಪಿಯ ಯಾರೂ ಹೋರಾಟ ಮಾಡಿದವರಲ್ಲ. ಮಹಾತ್ಮ ಗಾಂಧೀಜಿಯನ್ನು ಹತೈಗೈದಂತಹ ಗೋಡ್ಸೆ ಬಿಜೆಪಿಯ ಪ್ರಧಾನ ಸೇವಕ. ಆದರೂ ಅವರು ನಾವು ದೇಶಪ್ರೇಮಿಗಳು ಎಂದು ತೋರಿಸುತ್ತಿದ್ದಾರೆ. ಕಳೆದ ಏಳು ವರ್ಷಗಳಿಂದ ಕೇವಲ ಸುಳ್ಳಿನ ಕಂತೆಯನ್ನೇ ಹೇಳಿಕೊಂಡು ಜನರ ಅದರಲ್ಲೂ ಯುವಜನರ ಹಾದಿಯನ್ನು ತಪ್ಪಿಸಿ ನಿರುದ್ಯೋಗವನ್ನು ಸೃಷ್ಟಿಸುತ್ತಿದ್ದಾರೆ. ಅಂದು ಇಂದಿರಾ ಗಾಂಧಿಯವರು ಉಳುವವನೇ ಒಡೆಯ ಎಂಬ ಕಾನೂನನ್ನು ಜಾರಿಗೊಳಿಸಿ ಬಡವರಿಗೆ ಭೂಮಿಯನ್ನು ನೀಡಿರುತ್ತಾರೆ. ಆದರೆ ಅದೇ ಹಿರಿಯರ ಮಕ್ಕಳು ಮಾತ್ರ ನಾವು ಬಿಜೆಪಿ ಎಂದು ಚಪ್ಪಾಳೆ ಹೊಡೆಯುತ್ತಿರುವುದು ಬೇಸರದ ಸಂಗತಿ ಎಂದ ಅವರು ಬಿಜೆಪಿ ಪಕ್ಷದಲ್ಲಿ ಬರೀ ಶ್ರೀಮಂತರು ಮಾತ್ರ ಇರಬೇಕು, ಬಡವರು ಬಡವರಾಗಿಯೇ ಉಳಿಯಬೇಕು ಎನ್ನುವ ಧೋರಣೆಯಾಗಿದೆ. ಅತ್ಯಂತ ಶ್ರೀಮಂತ ಪಕ್ಷವಾಗಿರುವ ಬಿಜೆಪಿ ದೇಶದಲ್ಲಿ ಅಭದ್ರತೆಯ ವಾತಾವರಣವನ್ನು ಸೃಷ್ಟಿಸಿರುವುದು ಆತಂಕದ ವಿಷಯವಾಗಿದೆ ಎಂದು ಅವರು ಹೇಳಿದರು.

ಮೆದುಳಿಗೆ ಹಿಂದುತ್ವದ ಹುಳ ಬಿಟ್ಟು ಯುವಜನರ ದಾರಿ ತಪ್ಪಿಸುತ್ತಿದೆ ಬಿಜೆಪಿ – ಮೌರಿಸ್ ಮಸ್ಕರೇನ್ಹಸ್:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರಿಸ್ ಮಸ್ಕರೇನ್ಹಸ್ ಮಾತನಾಡಿ, ಗಾಂಧಿ ತತ್ವವೇ ಕಾಂಗ್ರೆಸ್ ತತ್ವ. ಅಂಬೇಡ್ಕರ್‌ರವರ ಸಂವಿಧಾನವೇ ಕಾಂಗ್ರೆಸ್ ಪಕ್ಷದ ಜೀವಾಳ, ಅದುವೇ ಸೊಬಗು ಎಂಬಂತೆ ಕಾಂಗ್ರೆಸ್ ಪಕ್ಷ ಹಿಂದಿನಿಂದಲೂ ಕೆಲಸ ಮಾಡಿಕೊಂಡು ಬರುತ್ತಿದೆ. ಬ್ಲಾಕ್ ಅಧ್ಯಕ್ಷರಾಗಿರುವ ವಿಶ್ವನಾಥ್ ರೈಯವರ ಆಶಯದಂತೆ ಎಲ್ಲೆಲ್ಲಿ ಬೂತ್‌ಗಳು ನಿಷ್ಕ್ರೀಯವಾಗಿದೆಯೋ ಅವನ್ನು ಬಡಿದೆಬ್ಬಿಸಿ ಸಕ್ರಿಯಗೊಳಿಸಬೇಕು ಎನ್ನುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದೇವೆ. ಬಿಜೆಪಿ ಪಕ್ಷವು ಜನರ ಮೆದುಳಿಗೆ ನಮ್ಮದು ಹಿಂದುತ್ವ ಎಂಬುದಾಗಿ ಹುಳ ಬಿಟ್ಟು ದಾರಿ ತಪ್ಪಿಸುತ್ತಿದ್ದಾರೆ. ಹಲವರು ಮುಗ್ಧ ಜನರು ಸುಮ್ಮನೇ ಕೇಸ್ ದಾಖಲಿಸಿಕೊಂಡು ಮೂಲೆಗುಂಪು ಆಗಿದ್ದಾರೆ. ಇದಕ್ಕೆ ತೊಗಾಡಿಯ, ಮಹೇಂದ್ರ ಕುಮಾರ್, ಸತ್ಯಜಿತ್ ಸುರತ್ಕಲ್‌ನಂತಹರು ಉದಾಹರಣೆಯಾಗಿದ್ದಾರೆ. ಯುವಜನರು ತಟಸ್ಥರಾದರೂ ಪರವಾಗಿಲ್ಲ, ತಮ್ಮ ಭವಿಷ್ಯವನ್ನು ಹಾಳು ಮಾಡಬೇಡಿ ಎಂದರು.

ಬಿಜೆಪಿ ಒಂದು ಧರ್ಮಕ್ಕೆ ಸೀಮಿತವಾದ ಪಕ್ಷ-ಶಕೂರ್ ಹಾಜಿ:
ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್.ಎ ಶಕೂರ್ ಹಾಜಿ ಮಾತನಾಡಿ, ಕಾಂಗ್ರೆಸ್ ಎಂದಿಗೂ ಸತ್ಯವನ್ನೇ ನುಡಿಯುವ ಪಕ್ಷವಾಗಿದೆ ಆದರೆ ಬಿಜೆಪಿ ಸುಳ್ಳಿನ ಸರಮಾಲೆಯನ್ನೇ ಪೋಣಿಸಿ ಜನರ ಹಾದಿಯನ್ನು ತಪ್ಪಿಸುವ ಪಕ್ಷವಾಗಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಏನು ಕೊಟ್ಟಿದೆ ಎಂದು ಬಿಜೆಪಿ ಹೇಳುತ್ತಿದೆಯಲ್ಲ, ಈ ಬಿಜೆಪಿ ಪಕ್ಷವು ಕಳೆದ ಏಳು ವರ್ಷಗಳಿಂದ ಅಲ್ಪಸಂಖ್ಯಾತರಿಗೆ ಏನು ಕೊಟ್ಟಿದೆ ಎಂದು ಹೇಳಲಿ. ಕಾಂಗ್ರೆಸ್‌ನಲ್ಲಿ ಎಲ್ಲಾ ವರ್ಗದ ಜನರಿದ್ದು ಒಂದು ಮನೆಯ ಸದಸ್ಯರಂತೆ ಇದ್ದೇವೆ ಹೊರತು ಒಂದು ಧರ್ಮಕ್ಕೆ ಸೀಮಿತವಾಗಿಲ್ಲ ಎಂದು ಬಿಜೆಪಿ ತಿಳಿಯಬೇಕಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಸದಸ್ಯರು ಭಿನ್ನಾಭಿಪ್ರಾಯವನ್ನು ತೋರ್ಪಡಿಸದೆ ನಾವೆಲ್ಲಾ ಕಾಂಗ್ರೆಸ್ಸಿಗರು ಎಂದು ಅರಿತು ಹೋರಾಟ ಮಾಡಿದಾಗ ಜಯ ನಮ್ಮದೇ ಆಗುತ್ತದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಸಭೆಗಳು ಜಂಕ್ಷನ್‌ಗಳಲ್ಲಿ, ಆದರೆ ಬಿಜೆಪಿಗರದ್ದು ಸಂಧಿ ಸಂಧಿಯಲ್ಲಿ-ಸಂತೋಷ್ ಭಂಡಾರಿ:
ರಾಜೀವ್‌ಗಾಂಧಿ ಪಂಚಾಯತ್‌ರಾಜ್ ಸಂಘಟನೆಯ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಭಂಡಾರಿ ಚಿಲ್ಮೆತ್ತಾರು ಮಾತನಾಡಿ, ಕಾಂಗ್ರೆಸ್ ಪಕ್ಷದ ಸಭೆಗಳು ನಡೆಯುವುದು ಜನಸಂಚಾರವಿರುವ ಜಂಕ್ಷನ್‌ಗಳಲ್ಲಿ, ಆದರೆ ಬಿಜೆಪಿಗರದ್ದು ಸಂಧಿ ಸಂಧಿಯಲ್ಲಿ. ಏನು ಅಭಿವೃದ್ಧಿ ಮಾಡಿದಿರಿ ಅಂತ ಏನಾದ್ರು ಕೇಳಿದ್ರೆ ದೇಶದ್ರೋಹಿಗಳು ಎಂಬ ಪಟ್ಟ ಬೇರೆ. ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯ, ಡಿಕೆಶಿ ಪರಸ್ಪರ ಸರಿಯಿಲ್ಲ ಎಂದು ಮಾಧ್ಯಮದ ಮುಖಾಂತರ ಬಿಜೆಪಿಗಳು ಹೇಳಿಸುತ್ತಿದ್ದಾರೆ. ಆದರೆ ಸಿದ್ಧರಾಮಯ್ಯ, ಡಿಕೆಶಿ ಇವರೀರ್ವರು ಒಂದೇ ವೇದಿಕೆಯಲ್ಲಿ ನಗುಮುಖದಿಂದ ಕಾಣಿಸಿಕೊಳ್ಳುತ್ತಾರೆ. ಆದರೆ ಇಲ್ಲಿ ಬಿಜೆಪಿ ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್‌ರವರದ್ದು ಟೀಂ ಬೇರೆ ಬೇರೆ ಎಂದ ಅವರು ಕೇಂದ್ರದಿಂದ ರಾಜ್ಯ, ರಾಜ್ಯದಿಂದ ಪಂಚಾಯತ್‌ವರೆಗೆ ಕಾಂಗ್ರೆಸ್ ಪಕ್ಷ ಬಲವರ್ಧನೆಗೊಳ್ಳಬೇಕು ಎನ್ನುವ ದೃಷ್ಟಿಯಲ್ಲಿ ಪ್ರಸ್ತುತ ಕಾಂಗ್ರೆಸ್ ಪಕ್ಷವು ನಿರಂತರ ಸಭೆಗಳನ್ನು ನಡೆಸುತ್ತಾ ಬಂದಿವೆ. ಕಾಂಗ್ರೆಸ್ ಪಕ್ಷವು ಹಿಂದಿನಿಂದಲೂ ಏಕತೆಯ ಭಾರತವನ್ನು ಕಟ್ಟಬೇಕು ಎಂಬ ಸಿದ್ಧಾಂತವನ್ನು ಪರಿಪಾಲಿಸಿಕೊಂಡು ಬಂದಿದೆ ಎಂದು ಅವರು ಹೇಳಿದರು.

ಸರಕಾರಿ ಅಧಿಕಾರಿಗಳಲ್ಲಿ ಬಹುತೇಕ ಬಿಜೆಪಿಗರೇ ಇರುವುದು ವಿಪರ್‍ಯಾಸ-ಪುರುಷೋತ್ತಮ್ ರೈ:
ಆರ್ಯಾಪು ಗ್ರಾಮ ಪಂಚಾಯತ್ ಸದಸ್ಯ ಬೂಡಿಯಾರ್ ಪುರುಷೋತ್ತಮ್ ರೈ ಮಾತನಾಡಿ, ಕೆಮ್ಮಿಂಜೆ ಗ್ರಾಮದಲ್ಲಿ ಕಾಂಗ್ರೆಸ್‌ನ ಬಲಿಷ್ಟ ಗ್ರಾಮವಾಗಿ ಹೊರಹೊಮ್ಮಿದೆ ಹಾಗೂ ಕಾಂಗ್ರೆಸ್ ಅಭಿವೃದ್ಧಿಗೆ ಏನು ನೀಡಿದೆ ಎಂದು ಎಲ್ಲರಿಗೂ ತಿಳಿದ ವಿಚಾರ. ಬಿಜೆಪಿಗರ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಸೋಲಾಗಿದೆ. ಪಂಚಾಯತ್‌ನಿಂದ ಕೇಂದ್ರದ ತನಕ ಬಿಜೆಪಿಯಲ್ಲಿ ಬರೀ ವೀಕ್ ಸದಸ್ಯರೇ ಗೆದ್ದು ಬಂದಿರುವುದು ಮಾತ್ರವಲ್ಲದೆ ಸರಕಾರಿ ಅಧಿಕಾರಿಗಳಲ್ಲಿ ಬಹುತೇಕ ಬಿಜೆಪಿಗರೇ ಇರುವುದು ವಿಪರ್‍ಯಾಸ. ಬರೀ ಶ್ರೀಮಂತರನ್ನು ಮಾತ್ರ ಒಲೈಸುತ್ತಾ, ಬಡವರನ್ನು, ಮಧ್ಯಮ ವರ್ಗದವರನ್ನು ಕಡೆಗಣಿಸುತ್ತಾ ಬಂದಿರುವ ಈ ಬಿಜೆಪಿ ಸರಕಾರವನ್ನು ಜಿಲ್ಲಾ ಹಾಗೂ ತಾಲೂಕು ಪಂಚಾಯತ್, ಶಾಸಕ ಸ್ಥಾನ, ಸಂಸದ ಸ್ಥಾನದಿಂದ ತೊಲಗಿಸುವ ಕಾರ್ಯಕ್ಕೆ ಮುನ್ನುಡಿ ಇಡೋಣ ಎಂದರು.

ಸ್ಥಳೀಯ ನಗರಸಭಾ ಸದಸ್ಯೆ ಶೈಲಾ ಪೈ, ಬ್ಲಾಕ್ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ವಿಶ್ವಜಿತ್ ಅಮ್ಮುಂಜರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎರಡು ಕಾಂಗ್ರೆಸ್ ಬೂತ್ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಪ್ರಮುಖರಾದ ಸುರೇಶ್ ಪೂಜಾರಿ, ರೊನಾಲ್ಡ್ ಮೊಂತೇರೋ, ಮಹಮ್ಮದ್ ಬಿ, ಸುರೇಂದ್ರ ಎ, ಅಬ್ದುಲ್ಲ ಕೆ.,ಮೋಹನ್ ಮಾರಾರ್, ಬ್ಯಾಪ್ಟಿಸ್ಟ್ ಮಿನೇಜಸ್, ನಾರಾಯಣ ನಾಯ್ಕ, ವಲೇರಿಯನ್ ಮಾರ್ಟಿಸ್, ಹನೀಫ್, ರವೀಂದ್ರ ರೈ, ರಹಮತ್, ಕಿರಣ್ ಕುಮಾರ್, ವಿನೋದ್ ಮೊಂತೇರೋ, ವಿಶ್ವ, ನವಾಜ್ ಆಕರ್ಷಣ್, ರಂಜನ್ ಕುಮಾರ್, ಶಾಶ್ವತ್, ಸಂಜೀವ, ಉಮೇಶ್, ನವಾಜ್, ಲೋಹಿತ್, ಅಬೂಬಕ್ಕರ್ ಸಿದ್ಧೀಕ್, ಸಲೀಂ, ಅನಿಲ್ ಡಿ’ಸೋಜ, ಇಕ್ಬಾಲ್, ಶಶಿಧರ ಸಹಿತ ಹಲವರು ಉಪಸ್ಥಿತರಿದ್ದರು. ಉದ್ಯಮಿ ರಫೀಕ್ ಎಂ.ಕೆ ಸ್ವಾಗತಿಸಿ, ಚೇತನ್ ಕುಮಾರ್ ವಂದಿಸಿದರು.

ಕಾಂಗ್ರೆಸ್ ಪಕ್ಷಕ್ಕೆ ನೈತಿಕ ಬಲ ಕೊಟ್ಟಂತಹ ಕೆಮ್ಮಿಂಜೆ ಗ್ರಾಮ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಒಮ್ಮೆಯೂ ಸೋಲಾಗಿಲ್ಲ. ಈ ಭಾಗದಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರು ಇಳಿದ ಹೆಲಿಪ್ಯಾಡ್ ಮೈದಾನ, ಗೇರು ಸಂಶೋಧಾನಾಲಯ, ಅಗ್ನಿಶಾಮಕ ಠಾಣೆ, ಮಕ್ಕಳ ಪಾರ್ಕ್, ಪರಿಶಿಷ್ಟ ಜಾತಿ, ಆಶ್ರಯ ಕಾಲೋನಿ ಎಲ್ಲವೂ ಕಾಂಗ್ರೆಸ್ ಕೊಡುಗೆಯಾಗಿದೆ. ಮೊಟ್ಟೆತ್ತಡ್ಕ-ಕೆಮ್ಮಿಂಜೆ ದೇವಸ್ಥಾನದ ಸಂಪರ್ಕ ರಸ್ತೆ ಅಭಿವೃದ್ದಿಯಾಗಿದ್ದರೂ ಕೆಲವೊಂದು ತಾಂತ್ರಿಕ ಅಡಚಣೆಯಾಗಿದೆ. ನಗರಸಭೆಯು ಬಡವರ ಗೂಡಂಗಡಿಗಳನ್ನು ತೆರವುಗೊಳಿಸುವ ಮೂಲಕ ಬಡವರ ಹೊಟ್ಟೆಗೆ ಹೊಡೆಯುವುದು, ಸ್ವಚ್ಚತೆ ಕಾರ್ಯ ಅಂತ ಹೇಳಿ ಲಕ್ಷಾಂತರ ಬಿಲ್‌ನ್ನು ಲೂಟಿ ಮಾಡುವುದು ಇವೇ ಬಿಜೆಪಿಗರ ಸಿದ್ಧಾಂತವಾಗಿದೆ. ಬಂಡವಾಳಶಾಹಿ ಮಾಧ್ಯಮಗಳ ಹಾಗೂ ಬಿಜೆಪಿ ಪಕ್ಷದ ಅಪಪ್ರಚಾರದಿಂದ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿದೆ. ಅಂದು ಗ್ಯಾಸ್ ಸಿಲಿಂಡರ್‌ಗೆ ೩೫೦ಕ್ಕೆ ಕೇವಲ ಐದು ರೂಪಾಯಿ ಹೆಚ್ಚಳವಾದದ್ದಕ್ಕೆ ಬಿಜೆಪಿಯ ಮಹಿಳಾ ಮಣಿಗಳು ನಾಗಿಣ್ ಡ್ಯಾನ್ಸ್ ಮಾಡಿದ್ದರು. ನಾವು ಬಡವರ ಪರ ಎಂದು ಹೇಳಿದವರು ಇಂದು ೯೦೦ ಆಗಿದೆ, ಪೆಟ್ರೋಲ್, ಡೀಸೆಲ್ ಎಲ್ಲವೂ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿದೆ, ಆಹಾರ ಸಾಮಾಗ್ರಿಗಳ ಬೆಲೆ ಗಗನಕ್ಕೆ ಏರುತ್ತಿದೆ. ಈಗ ಅವರು ಎಲ್ಲಿ ಹೋಗಿದ್ದಾರೆ?. ಬಡವರೂ ಉದ್ಧಾರವಾಗಬೇಕು ಎನ್ನುವ ನಿಟ್ಟಿನಲ್ಲಿ ಶ್ರೀಮಂತರ ಬ್ಯಾಂಕ್ ಎನಿಸಿಕೊಂಡ ಬ್ಯಾಂಕ್‌ಗಳನ್ನು ರಾಷ್ಟ್ರೀಕರಣಗೊಳಿಸಿದವರು ಇಂದಿರಾ ಗಾಂಧಿಯವರು. ಆದರೆ ಇಂದು ಏನಾಯ್ತು ಬ್ಯಾಂಕುಗಳ ಕಥೆ. ದೇವರ, ಧರ್ಮದ ಹೆಸರಿನಲ್ಲಿ ಜನರ ಮನಸ್ಸಿನಲ್ಲಿ ಭಾವನಾತ್ಮಕತೆಯ ಭೀಜವನ್ನು ಭಿತ್ತಿ ಸಮಾಜದ ಅಶಾಂತಿಯನ್ನು ಸೃಷ್ಟಿಸುತ್ತಿರುವವರು ಬಿಜೆಪಿಗರು. ಜಿಡಿಪಿ ಹೆಚ್ಚಳ ಮಾಡ್ತೇವೆ ಅಂದ್ರು, ಗ್ಯಾಸ್, ಡೀಸೆಲ್, ಪೆಟ್ರೋಲ್ ದರವನ್ನು ಏರಿಸಿದ್ದು ಜಿಡಿಪಿನಾ? ಎಚ್.ಮಹಮ್ಮದ್ ಆಲಿ, ಅಧ್ಯಕ್ಷರು ಪುತ್ತೂರು ನಗರ ಕಾಂಗ್ರೆಸ್

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.