HomePage_Banner
HomePage_Banner
HomePage_Banner
HomePage_Banner

ವಸತಿಯೋಜನೆ, ನರೇಗ ಕೂಲಿ ಕೊಡುವಲ್ಲಿ, ಪಡಿತರ ವಿತರಣೆಯಲ್ಲಿ ಬಿಜೆಪಿ ಶಾಸಕರು ಅಭಿವೃದ್ಧಿ ಪರ ವಿಚಾರದಲ್ಲಿ ವೈಫಲ್ಯ ಕಂಡಿದ್ದಾರೆ – ಮಹಮ್ಮದ್ ಬಡಗನ್ನೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಮೂರುವರೆ ವರ್ಷದಲ್ಲಿ ಒಂದೇ ಒಂದು ವಸತಿ ಯೋಜನೆಯಿಲ್ಲ
  • ನರೇಗದಲ್ಲಿ 10 ಕೋಟಿ ಮಂದಿಗೆ ಕೂಲಿ ಹಣ ಕೊಟ್ಟಿಲ್ಲ
  • 6 ತಿಂಗಳಿನಿಂದ ಪಡಿತರ ಚೀಟಿ ಕೊಡಲು ಆಗುತ್ತಿಲ್ಲ
  • ಗ್ರಾ.ಪಂಗಳು ಚುಚ್ಚು ಮದ್ದು ಕೊಡುವ ಏಜೆನ್ಸಿಗಳಾಗಿವೆ
  • ವೀಕೆಂಡ್ ಕರ್ಫ್ಯೂ ತೆರವು ಮಾಡಲು ಶಾಸಕರಿಗೆ ಧ್ವನಿ ಇಲ್ಲ

ಪುತ್ತೂರು: ಬಿಜೆಪಿ ನೇತೃತ್ವದ ರಾಜ್ಯ ಮತ್ತು ಕೇಂದ್ರ ಸರಕಾರ ಅಭಿವೃದ್ಧಿ ದೃಷ್ಟಿಯಲ್ಲಿ ವಿಫಲ ಕಂಡಿದೆ. ರಾಜ್ಯ ಸರಕಾರ ಮೂರುವರೆ ವರ್ಷಕ್ಕಿಂತ ಹೆಚ್ಚು ಆಡಳಿತ ಮಾಡುತ್ತಿದ್ದು, ಕೇವಲ ಸಿಡಿ ಹಗರಣ, ಇನ್ನಿತರ ದಂದೆಗಳು, ಕಿಕ್ ಬ್ಯಾಕ್‌ಗಳು, ಅವ್ಯವಹಾರದ ದೃಷ್ಟಿಯಲಿ ಇಲ್ಲಿಯ ತನಕ ಬಂದಿದೆ. ಪುತ್ತೂರು ತಾಲೂಕಿಗೆ ಸಂಬಂಧಿಸಿ ವಸತಿ ಯೋಜನೆ, ನರೇಗದಲ್ಲಿ ದುಡಿದವರಿಗೆ ಕೂಲಿ ವೇತನ ಕೊಡುವಲ್ಲಿ, ಬಿಪಿಎಲ್ ಪಡಿತರ ವಿತರಣೆಯಲ್ಲಿ ವಿಫಲತೆ ಕಂಡಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಆರೋಪಿಸಿದ್ದಾರೆ.

ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹಿಂದಿನ ಶಾಸಕರು ಬಂದಂತಹ ಅನುದಾನವನ್ನು ಬಿಡುಗಡೆ ಮಾಡಿದ್ದು ಮತ್ತು ಅದನ್ನು ಶಂಕು ಸ್ಥಾಪನೆ ಮಾಡಿದ್ದು ಬಿಟ್ಟರೆ ಬೇರೆನು ಮಾಡಿಲ್ಲ. ಬಿಜೆಪಿ ಸರಕಾರ ಗ್ರಾಮೀಣ ಭಾಗಕ್ಕೆ ಯಾವುದೇ ಅನುದಾನ ಕೊಡಲಿಲ್ಲ ಎಂಬುದನ್ನು ಆಧಾರ ರೂಪವಾಗಿ ಹೇಳಬಲ್ಲೆ ಎಂದ ಅವರು ಶಕುಂತಳಾ ಶೆಟ್ಟಿಯವರು ತಂದ ಅನೇಕ ಯೋಜನೆ, ಮೆಡಿಕಲ್ ಕಾಲೇಜು ಅನಷ್ಠಾನ ಮಾಡುತ್ತಿದ್ದರೆ ಇವತ್ತು ಮೂರು ಜಿಲ್ಲೆಗಳಿಗೆ ಪ್ರಯೋಜನ ಆಗುತ್ತಿತ್ತು. ಕೋವಿಡ್ ಸಂಬಂಧಿಸದ ಅಭಿನಂದನೆ ಸನ್ಮಾನ ಪಡೆಯುವುದು ಬಿಟ್ಟರೆ ಬೇರೆನು ಮಾಡಿಲ್ಲ. ಮಾದ್ಯಮದ ಮೂಲಕ ತಿಳಿದಂತೆ ಕಾಂಗ್ರೆಸ್ ಮುಕ್ತ ಸಮಜ ಮಾಡಲು ಹೊರಡುವ ಮೊದಲು ಜನಸಾಮಾನ್ಯರಿಗೆ ಬಿಪಿಎಲ್ ಕಾರ್ಡ್ ಮಾಡಿ ಕೊಡಿ, ಜನರಿಗ ಮನೆ ಕೊಡಿ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಕೂಲಿ ಕೊಡಿ ಎಂದು ಆಗ್ರಹಿಸಿದರು.

ವಸತಿ ಅನುಷ್ಠಾನ ಮಾಡುವಲ್ಲಿ ವಿಫಲ:
ಮಹಾತ್ಮಗಾಂಧೀಜಿಯವರ ಆಶಯದಂತೆ ಗ್ರಾ.ಪಂಗಳಿಗೆ ಅತ್ಯಂತ ಹೆಚ್ಚಿನ ಶಕ್ತಿ ಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳಿವೆ. ಈ ಕಾರ್ಯಾಕ್ರಮಗಳಲ್ಲೊಂದಾದ ಜನಸಾಮಾನ್ಯರಿಗೆ ವಸತಿ ಕೊಡುವ ನಿಟ್ಟಿನಲ್ಲಿ ಪಂಚಾಯತ್ ಅಧಿನಿಯಮದಲ್ಲಿ ವಸತಿ ಯೋಜನೆ ಕೊಡಲು ನಮ್ಮ ಶಾಸಕರಿಗೆ ಕಳೆದ ಮೂರುವರೆ ವರ್ಷದಲ್ಲಿ ಆಗಿಲ್ಲ. ಕಳೆದ ೫ ವರ್ಷಗಳಿಂದ ದಾಖಲೆ ನೋಡಿದಾಗ ಸಿದ್ಧರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಈ ಕ್ಷೇತ್ರದಲ್ಲಿ ಶಾಸಕಿಯಾಗಿದ್ದ ಶಕುಂತಳಾ ಶೆಟ್ಟಿಯವರು ಸುಮಾರು ೬ಸಾವಿರ ವಸತಿಗಳನ್ನು ಅನುಷಠಾನ ಮಾಡಿದ್ದಾರೆ. ಆದರೆ ಈಗಿನ ಶಾಸಕರಿಗೆ ಮೂರುವರೆ ವರ್ಷದಲ್ಲಿ ಒಂದೇ ಒಂದು ಪಂಚಾಯತ್ ನಲ್ಲಿ ಮನೆಗಳನ್ನು ಕೊಡಲು ಸಾಧ್ಯವಾಗಿಲ್ಲ ಎಂದು ಮಹಮ್ಮದ್ ಬಡಗನ್ನೂರು ಆರೋಪಿಸಿದರು.

ಉದ್ಯೋಗ ಖಾತ್ರಿಯಲ್ಲಿ ಖಾತೆಗೆ ಕೂಲಿ ಸಿಕ್ಕಿಲ್ಲ:
ದೇಶದಲ್ಲಿ ಯುಪಿಎ ಸರಕಾರ ಇದ್ದಂತಹ ಸಂದರ್ಭದಲ್ಲಿ ಜಾರಿಗೆ ತಂದಿರುವ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಬಡವರ ಪಾಲಿಗೆ ವರದಾನವಾಗಿತ್ತು. ಅನೇಕ ರೀತಿಯಲ್ಲಿ ಕೂಲಿ ಕೆಲಸದಲ್ಲಿ ಆಸಕ್ತಿ ಇರುವರಿಗೆ ಉದ್ಯೋಗ ಕೊಡಿಸುವ ಕೆಲಸ ಆಗಿದೆ. ಆದರೆ ಈಗಾಗಲೇ ಕಳೆದ ಎರಡು ತಿಂಗಳಿನಿಂದ ಅಂದರೆ ಜೂ. ೨೦ರಿಂದ ಈ ಜಿಲ್ಲೆಯಲ್ಲಿ ೧೦ ಕೋಟಿ ಕೂಲಿ ಕಾರ್ಮಿಕರಿಗೆ ಹಣವನ್ನು ಕೊಡಲು ಆಗ್ತಾ ಇಲ್ಲ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬಹಳ ಸ್ಪಷ್ಟವಾದ ಸೂಚನೆಯಂತೆ ೧೫ ದಿನಗಳಿಗೊಮ್ಮೆ ಜನಸಾಮಾನ್ಯರಿಗೆ ಕೂಲಿ ಕೊಡದೆ ಹೋದರೆ ಶೇ.೨೫ ನಿರುದ್ಯೋಗ ಭತ್ಯೆಯನ್ನು ಆ ಖಾತೆದಾರರಿಗೆ ಹಾಕಬೇಕೆಂದಿದೆ. ಆ ಸಂಬಂಧಪಟ್ಟ ಪಿಡಿಒ ಪಿಡಿಗಳು ಕೂಡಾ ಎನ್.ಎಮ್.ಆರ್ ಸರಕಾರಕ್ಕೆ ವರದಿ ಕೊಟ್ಟಿದೆ. ಆದರೆ ಇಲ್ಲಿನ ತನಕ ಹಣ ಬಂದಿಲ್ಲ. ನಮ್ಮ ಸಂಸದರು ಆಡಿಯೋ ಟೇಪ್ ಹಗರಣ ಇನ್ನಿತರ ಕೆಲಸಗಳಲ್ಲಿದ್ದು, ಜನಸಾಮಾನ್ಯರ ಅಹವಾಲು ಕೇಳಲು ಪುರುಸೋತ್ತಿಲ್ಲ ಎಂದು ಮಹಮ್ಮದ್ ಬಡಗನ್ನೂರು ಆರೋಪಿಸಿದರು.

6 ತಿಂಗಳಿನಿಂದ ಪಡಿತರ ಚೀಟಿ ಕೊಡಲು ಆಗುತ್ತಿಲ್ಲ:
ಪಡಿತರ ಚೀಟಿಗಾಗಿ ಅನೇಕ ಮಂದಿ ಇಲಾಖೆ ಅಳೆಯುತ್ತಿದ್ದಾರೆ. ಆದರೆ ಕಳೆದ ೬ ತಿಂಗಳಿನಿಂದ ಪಡಿತರ ಚೀಟಿ ಕೊಡಲು ಆಗುತ್ತಿಲ್ಲ. ಪ್ರಶ್ನಿಸಿದರೆ ಸೈಬರ್ ನೋಂದಾವಣೆ ಮಡಲು ಖಾತೆ ಬಂದ್ ಮಾಡಿದ್ದಾರೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೆಶ್ ಕತ್ತಿ, ವಸತಿ ಸಚಿವರಾದ ಸೋಮಣ್ಣ ಈ ಕುರಿತು ತಲೆ ಕೆಡಿಸುತ್ತಿಲ್ಲ. ಇದರ ಬಗ್ಗೆ ಧ್ವನಿ ಎತ್ತಬೇಕಾಗಿದೆ. ನಮ್ಮ ಶಾಸಕರು ಟೀಕೆಗಲನ್ನು ಸವಾಲು ಆಗಿ ಸ್ವೀಕಾರ ಮಾಡಬೇಕು ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.

ಗ್ರಾ.ಪಂಗಳು ಚುಚ್ಚು ಮದ್ದು ಕೊಡುವ ಏಜೆನ್ಸಿಗಳಾಗಿವೆ:
ಶಾಸಕರು ಇವತ್ತು ಕೇವಲ ಕೋವಿಡ್ ಟಾಸ್ಕ್ ಪೊರ್ಸ್‌ಗಳ ಅಧ್ಕ್ಷರಾಗಿ ಅವರ ಅನುದಾನದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಇನ್ನೊಂದು ಕಡೆ ಇವತ್ತು ಗ್ರಾ.ಪಂಗಳು ಮಾಡಬೇಕಾದ ಕೆಲಸ ಬಿಟ್ಟು ಚುಚ್ಚು ಮದ್ದು ಕೊಡುವ ಏಜೆನ್ಸಿಗಳಾಗಿವೆ. ಚುಚ್ಚು ಮದ್ದು ಕೊಡುವಲ್ಲಿ ವಿರೋಧವಿಲ್ಲ. ಆದರೆ ಸಂಧಿಗ್ದ ಕಾಲದಲ್ಲಿ ಕೆಲಸ ಮಾಡಬೇಕು. ಆರೋಗ್ಯ ಇಲಾಖೆಯ ಕಾರ್ಯವನ್ನು ಗ್ರಾ.ಪಂ ಮಾಡುವಂತಾಗಿದೆ. ಗ್ರಾ.ಪಂ ಕಟ್ಟಡಗಳು ಚುಚ್ಚು ಮದ್ದು ಮಾಹಿತಿ ಕೊಡುವ ಪ್ರಚಾರದ ಕಾರ್ಯದ ಕೇಂದ್ರಗಳಾಗಿವೆ. ಶಾಸಕರು ಇದನ್ನು ತಿದ್ದಿಕೊಳ್ಳಬೇಕು ಎಂದು ಮಹಮ್ಮದ್ ಬಡಗನ್ನೂರು ಹೇಳಿದರು.

ವೀಕೆಂಡ್ ಕರ್ಫ್ಯೂ ತೆರವು ಮಾಡಲು ಶಾಸಕರಿಗೆ ಧ್ವನಿಇಲ್ಲ:
ವೀಕೆಂಡ್ ಕರ್ಫ್ಯೂಗೆ ವರ್ತಕರ ಸಂಘವೇ ಸಿಡಿದೆದ್ದಿದೆ. ಆದರೆ ಇದರ ಬಗ್ಗೆ ವೀಕೆಂಡ್ ಕರ್ಫ್ಯೂ ತೆಗೆಯಲು ಇರುವ ಧ್ವನಿ ಶಾಸಕರಿಗೆ ಇಲ್ಲ. ಕೇವಲ ಜಿಲ್ಲಾಧಿಕಾರಿಗಳು ಮಾಡಿದ ಆದೇಶಕ್ಕೆ ಸಹಿ ಹಾಕುವ ಕೆಲಸ ಮಾತ್ರ ಮಾಡುತ್ತಾರೆ. ಕೋವಿಡ್ ಮಾನದಂಡ ಡಿಸಿ ಹೇಳಿದ್ದಾರೆ ಎಂದು ಸಚಿವರು ಸುಮ್ಮನಾಗಿದ್ದಾರೆ. ಒಂದು ಸಮಯ ಬದಲಾವಣೆ ಇವರಿಂದ ಆಗುತ್ತಿಲ್ಲ ಎಂದು ಮಹಮ್ಮದ್ ಬಡಗನ್ನೂರು ಆರೋಪಿಸಿದ ಅವರು ಭ್ರಷ್ಟಾಚಾರದ ವಾಸನೆ ಬಿಜೆಪಿ ಸರಕಾರದಲ್ಲಿದೆ. ಶಾಸಕರ ಕಣ್ಣುಮುಂದಿರುವ ರೈಲ್ವೇ ನಿಲ್ದಾಣ ರಸ್ತೆ ಇನ್ನೂ ದುರಸ್ಥಿ ಆಗಿಲ್ಲ. ಗ್ರಾ.ಪಂಗೆ ಬರುವ ೧೫ನೇ ಹಣಕಾಸು ಮೊಟಕುಗೊಳಿಸುವ ಕೆಲಸ ಬಿಜೆಪಿ ಸರಕಾರ ಮಾಡುತ್ತಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಜಿಲ್ಲಾ ಸಹಕಾರಿ ಕಾಂಗ್ರೆಸ್ ಉಪಾಧ್ಯಕ್ಷ ಕೌಶಲ್ ಪ್ರಸಾದ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್‌ನ ಉಪಾಧ್ಯಕ್ಷ ಮೌರೀಸ್ ಮಸ್ಕರೇನ್ಹಸ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಶಕೂರ್ ಹಾಜಿ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.