HomePage_Banner
HomePage_Banner
HomePage_Banner
HomePage_Banner

ಶಿಕ್ಷಕರ ದಿನಾಚರಣೆ ಪ್ರಯುಕ್ತ ಶ್ರೀರಾಮ ಗೆಳೆಯರ ಬಳಗದಿಂದ ಮುಂಡೂರು ಅಂಗನವಾಡಿ ಕೇಂದ್ರದ ಶರ್ಮಿಳಾ ನಾಡಾಜೆಯವರಿಗೆ ಸನ್ಮಾನ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಶ್ರೀರಾಮ ಗೆಳೆಯರ ಬಳಗ ಪುತ್ತಿಲ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಮುಂಡೂರು ಅಂಗನವಾಡಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಶರ್ಮಿಳಾ ರಮೇಶ ನಾಡಾಜೆಯವರನ್ನು ಸನ್ಮಾನಿಸಿ ಗೌರವ ಸಲ್ಲಿಸಲಾಯಿತು. ಸುಮಾರು 20  ವರ್ಷದಿಂದ ಪ್ರಾಮಾಣಿಕ ಸೇವೆ ಮೂಲಕ ಜನನುರಾಗಿಯಾಗಿರುವ ಶರ್ಮಿಳಾ ರಮೇಶ್ ನಾಡಾಜೆಯವರ ಸನ್ಮಾನ ಕಾರ್ಯಕ್ರಮವನ್ನು ಮುಂಡೂರು ಮತ್ಯುಂಜಯೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಬಾಲಚಂದ್ರ ಗೌಡ ಕಡ್ಯ, ಮುಂಡೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಅನಿಲ್ ಕಣ್ಣರ್ನೂಜಿ, ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ನಾಯ್ಕ್ ಮೊದಲಾದವರು ಶಾಲು ಹಾಕಿ, ಸ್ಮರಣಿಕೆ ಮತ್ತು ಪುಸ್ತಕ ನೀಡಿ ಗೌರವಿಸಿದರು.

ಶ್ರೀರಾಮ ಗೆಳೆಯರ ಬಳಗದ ಗೌರವಾಧ್ಯಕ್ಷ ಅರುಣ್ ಪುತ್ತಿಲ, ಕಾರ್ಯದರ್ಶಿ ದಿನೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸನ್ಮಾನ ಸ್ವೀಕರಿಸಿದ ಶರ್ಮಿಳಾ ಅವರು ಕೃತಜ್ಞತೆ ಸಲ್ಲಿಸಿದರು. ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಹರೀಶ್ ಸ್ವಾಗತಿಸಿದರು. ಧನಂಜಯ ವಂದಿಸಿದರು. ಪ್ರಸಾದ್ ಬಿ.ಕೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.