HomePage_Banner
HomePage_Banner
HomePage_Banner
HomePage_Banner

ಪೆರಾಬೆ ಗ್ರಾ.ಪಂ ಘನ ತ್ಯಾಜ್ಯ ಘಟಕ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
  • ಕೋವಿಡ್,ಪ್ರಕೃತಿ ವಿಕೋಪದ ಸಂಧರ್ಭದಲ್ಲೊ ಯಶಸ್ವಿ ಅಡಳಿತ – ಸಚಿವ ಅಂಗಾರ ಎಸ್

ಆಲಂಕಾರು: ಪೆರಾಬೆ ಗ್ರಾ‌.ಪಂ ವ್ಯಾಪ್ತಿಯ ಕೇವಳ ಎಂಬಲ್ಲಿ ಸುಮಾರು 13 ಲಕ್ಷ ವೆಚ್ಚದಲ್ಲಿ ನಿರ್ಮಾಣ ಗೊಂಡ ಘನ ತ್ಯಾಜ್ಯ ಘಟಕ ವನ್ನು ಮೀನುಗಾರಿಕೆ ಮತ್ತು ಬಂದರು,ಒಳನಾಡು ಜಲಸಾರಿಗೆ ಸಚಿವರು ಹಾಗು ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ .ಎಸ್ ರವರು ಉದ್ಘಾಟಿಸಿ ಮಾತನಾಡಿ ಜನರು ಶುಚಿತ್ವಕ್ಕೆ ಅದ್ಯತೆ ನೀಡಬೇಕು ಈ ದೃಷ್ಟಿಯಿಂದ ಪ್ರತಿ ಗ್ರಾಮ ಪಂಚಾಯತ್ ನಲ್ಲಿಯೂ ಘನತ್ಯಾಜ್ಯ ಘಟಕ ವನ್ನು ನಿರ್ಮಾಣ ಮಾಡುವುದಾಗಿ ತಿಳಿಸಿ ಇಲಾಖೆಯಲ್ಲಿರುವ ಕೆಳಮಟ್ಟದಿಂದ ರಾಜ್ಯ ಮಟ್ಟದ ಅಧಿಕಾರಿಗಳ ಮೇಲೆ ನನಗೆ ವಿಶ್ವಾಸ ಇದೆ. ಆ ವಿಶ್ವಾಸಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು ,ಕೆಲಸ ಮಾಡುವ ಸಂಧರ್ಭದಲ್ಲಿ ಸಮಸ್ಯೆಗಳು ಬಂದಾಗ ಅದನ್ನು ಸರಕಾರದ ಗಮನಕ್ಕೆ ತರಬೇಕು. ಸರಕಾರವು ಆ ಸಮಸ್ಯೆಯನ್ನು ಯಾವ ರೀತಿಯಲ್ಲಿ ಪರಿಹಾರ ಮಾಡಬೇಕು ಆ ರೀತಿಯಲ್ಲಿ ಚಿಂತನೆ ಮಾಡುತ್ತದೆ ಎಂದು ತಿಳಿಸಿ , ಕೋವಿಡ್ ಮತ್ತು ಪ್ರಕೃತಿ ವಿಕೋಪದ ಸಂಧರ್ಭದಲ್ಲಿಯೂ ಸರಕಾರ ಯಶಸ್ವಿ ಅಡಳಿತ ನೀಡಿದೆ ಎಂದು ತಿಳಿಸಿ ಘನ ತ್ಯಾಜ್ಯ ಘಟಕದ ನಿರ್ವಹಣೆಯನ್ನು ಸಂಜೀವಿನಿ ಸ್ವ- ಸಹಾಯ ಸಂಘದವರು ಮಾಡಲಿದ್ದು ಸರಕಾರ ಇದಕ್ಕೆ ಸಹಕಾರ ನೀಡಲಿದೆ ಎಂದು ತಿಳಿಸಿದರು.

ಪೆರಾಬೆ ಗ್ರಾ.ಪಂ ಅಧ್ಯಕ್ಷರಾದ ಚಂದ್ರಶೇಖರೈ ಅಗತ್ತಾಡಿ ಸಭೆಯ ಅಧ್ಯಕ್ಷತೆ ವಹಿಸಿದ್ದರು ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಾಲಿನಿಯವರು ಸ್ವಾಗತಿಸಿ,ದನ್ಯವಾದ ಸಮರ್ಪಿಸಿದರು,ಪಂಚಾಯತ್ ಉಪಾಧ್ಯಕ್ಷೆ ಸಂದ್ಯಾ,ಪಂಚಾಯತ್ ಸದಸ್ಯರಾದ ಮೋಹನದಾಸ ರೈ ಪರಾರಿಗುತ್ತು,, ಬಿ.ಕೆ .ಕುಮಾರ,ಸದಾನಂದ, ರಾಜು, ಕೃಷ್ಣ,ವೈ, ಫಯಾಝ್, ವೇದವತಿ,ಲೀಲಾವತಿ,ಮಮತಾ ಶೆಟ್ಟಿ,ಸುಶೀಲಾ,ಕಾವೇರಿ, ಮೋಹಿನಿಯವರು,ಗುತ್ತಿಗೆದಾರ ರಾಜೇಶ್ ಶೆಟ್ಟಿ ಸಂಪ್ಯಾಡಿ, ಬಿ.ಜೆ.ಪಿ ಸುಳ್ಯಮಂಡಲದ ಅಧ್ಯಕ್ಷ ಹರೀಶ್ ಕಂಜಿಪಿಲಿ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.