HomePage_Banner
HomePage_Banner
HomePage_Banner
HomePage_Banner

ಬೆಟ್ಟಂಪಾಡಿ : ಸಾರ್ವಜನಿಕ ಗಣೇಶೋತ್ಸವ ಸಮಾಲೋಚನಾ ಸಭೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ವಠಾರದಲ್ಲಿ ನಡೆಯಲಿರುವ 36 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಪೂರ್ವಭಾವಿ ಸಮಾಲೋಚನಾ ಸಭೆ ಸೆ. 5 ರಂದು ದೇವಾಲಯದ ವಠಾರದಲ್ಲಿ ನಡೆಯಿತು. ಕೊರೊನಾ ಸರಕಾರದ ಮಾರ್ಗಸೂಚಿ ಅನ್ವಯ ಸರಳವಾಗಿ ಧಾರ್ಮಿಕ ವಿಧಿವಿಧಾ‌ನಗಳೊಂದಿಗೆ ನೆರವೇರಿಸುವುದೆಂದು ನಿರ್ಣಯಿಸಲಾಯಿತು.

ಶ್ರದ್ಧಾಂಜಲಿ
ಸಮಿತಿಯ ಆರಂಭದ ಕಾರ್ಯದರ್ಶಿಯಾಗಿ ಗಣೇಶೋತ್ಸವದ ಸ್ಥಾಪನೆ ವೇಳೆ ಶ್ರಮಿಸಿದ ನಿವೃತ್ತ ಮುಖ್ಯಶಿಕ್ಷಕ ತಾರನಾಥ ಶೆಟ್ಟಿ ಕೋರ್ಮಂಡ ಇತ್ತೀಚೆಗೆ ನಿಧನರಾಗಿದ್ದು, ಅವರ ಗೌರವಾರ್ಥ ಇದೇ ವೇಳೆ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಮನಮೋಹನ್ ರೈ ಚೆಲ್ಯಡ್ಕ, ಅಧ್ಯಕ್ಷ ನಾಗೇಶ್ ರೈ ಮೂರ್ಕಾಜೆ, ಪ್ರ. ಕಾರ್ಯದರ್ಶಿ ರಮೇಶ್ ಗೌಡ ಬಳ್ಳಿತ್ತಡ್ಡ, ಮಾಜಿ ಅಧ್ಯಕ್ಷ ಡಾ. ಸುಬ್ರಹ್ಮಣ್ಯ ವಾಗ್ಲೆ, ಸದಸ್ಯರಾದ ದುರ್ಗಾಪ್ರಸಾದ್ ಜೆ., ಸತೀಶ್ ರೈ ಮೂರ್ಕಾಜೆ, ಅರುಣ್ ಪ್ರಕಾಶ್ ರೈ ಮದಕ, ಜಗದೀಶ್ ಸುವರ್ಣ, ಗಣೇಶ್ ಹೊಳ್ಳ, ಜಗನ್ನಾಥ ರೈ ಕೊಮ್ಮಂಡ, ಪ್ರಭಾಕರ ರೈ ಬಾಜುವಳ್ಳಿ, ಮಹೇಶ್ ಕೋರ್ಮಂಡ, ಹರಿಪ್ರಸಾದ್ ಬೆಟ್ಟಂಪಾಡಿ, ಶಿವಕುಮಾರ್ ಬಲ್ಲಾಳ್, ಸತೀಶ್ ಗೌಡ ಪಾರ, ಯೊಗೀಶ್ ಸುವರ್ಣ, ದಿನೇಶ್ ಉಪ್ಪಳಿಗೆ, ಅಕ್ಷಯ್ ಬೆಟ್ಟಂಪಾಡಿ, ಪ್ರವೀಣ್ ಕರ್ನಪ್ಪಾಡಿ, ಶೇಷನ್ ಪಾರ, ಜಗದೀಶ್ ಪಾರ ಹಾಜರಿದ್ದು, ಸಲಹೆ ಸೂಚನೆ ನೀಡಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.