HomePage_Banner
HomePage_Banner
HomePage_Banner
HomePage_Banner

ಗಾನಸಿರಿಯಲ್ಲಿ Zumba ಫಿಟ್ ನೆಸ್ ತರಗತಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ವಿಶೇಷ ಮತ್ತು ವಿಭಿನ್ನ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿರುವ ಪುತ್ತೂರಿನ ಬೊಳುವಾರು ಆಕ್ಸಿಸ್ ಬ್ಯಾಂಕ್ ಬಳಿ ಇರುವ ಗಾನಸಿರಿ ಕಲಾ ಚಾವಡಿಯಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಗಾಗಿ ಝುಂಬಾ ಫಿಟ್ ನೆಸ್ ತರಗತಿ ಸೆ.೦೬ರಂದು ಉದ್ಘಾಟನೆಗೊಂಡಿತು.ನುರಿತ ಮಹಿಳಾ ತರಬೇತುದಾರರಿಂದ ವಾರದಲ್ಲಿ ಮೂರು ದಿನ ವಿಶೇಷವಾಗಿ ಮಹಿಳೆಯರು, ಪುರುಷರು ಮತ್ತು ಮಕ್ಕಳಿಗಾಗಿ ಪ್ರತ್ಯೇಕ ಬ್ಯಾಚುಗಳಲ್ಲಿ ತರಗತಿಗಳು ನಡೆಯಲಿದೆ.


ತರಗತಿಗಳನ್ನು ಪುತ್ತೂರಿನ ಖ್ಯಾತ ವೈದ್ಯರಾದ ಡಾ.ಗೋಪಿನಾಥ ಪೈ ಯವರು ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ಶಿವಪ್ರಸಾದ್ ಶೆಟ್ಟಿಯವರು ಅತಿಥಿಯಾಗಿ ಆಗಮಿಸಿ ಶುಭ ಹಾರೈಸಿದರು. ಈ Zumba fitness ತರಗತಿಗಳು ದೈಹಿಕ ದೃಢತೆ ಯೊಂದಿಗೆ ಮಾನಸಿಕ ಸ್ವಾಸ್ಥ್ಯವನ್ನು ಹೆಚ್ಚಿಸಲು ಮತ್ತು ವಿಶೇಷವಾಗಿ ಅತಿಯಾದ ಬೊಜ್ಜನ್ನು ನಿವಾರಿಸಿ ತೂಕವನ್ನು ನಿಯಂತ್ರಿಸಿಕೊಳ್ಳಲು ಶೇಕಡಾ ನೂರರಷ್ಟು ಪರಿಣಾಮಕಾರಿ. ತಮ್ಮನ್ನು ತಾವು ಪ್ರೀತಿಸುವವರು ಉತ್ತಮ ಆರೋಗ್ಯಕ್ಕಾಗಿ ತರಗತಿಗಳಿಗೆ ಸೇರಬಹುದು ಎಂದು ಗಾನಸಿರಿ ಸಾರಥಿ ಡಾ.ಕಿರಣ್ ಕುಮಾರ್ ಗಾನಸಿರಿ ಹೇಳಿದರು.

ವೇದಿಕೆಯಲ್ಲಿ ಕಿರಣ್ ಕುಮಾರ್ ರವರ ಮಾತೃಶ್ರೀಯವರಾದ ಶ್ರೀಮತಿ ಭಾರತಿ ಎನ್ ಕೆ ತಿಮ್ಮಪ್ಪ ಪೂಜಾರಿ, ಗಾನಸಿರಿ ಸಹ ಶಿಕ್ಷಕಿ ಕು.ಶ್ರೀಲಕ್ಷ್ಮಿ ಎಸ್ ಪುತ್ತೂರು, ಝುಂಬಾ ಫಿಟ್ ನೆಸ್ ತರಬೇತಿ ನೀಡಲಿರುವ ಮಹಾಲಸಾ ಪೈ ಉಪಸ್ಥಿತರಿದ್ದರು. ಬಹು ಜನರ ಅಪೇಕ್ಷೆ ಮೇರೆಗೆ ಬೆಳಗ್ಗಿನ ಬ್ಯಾಚುಗಳನ್ನೂ ಆರಂಭಿಸಲಾಗಿದ್ದು ಸಾಯಂಕಾಲವೂ ಎರಡು ಬ್ಯಾಚುಗಳಲ್ಲಿ ತರಗತಿಗಳು ನಡೆಯಲಿದೆ. ತರಗತಿಗಳಿಗೆ ಸೇರಲು ಇಚ್ಛಿಸುವವರು ದೂರವಾಣಿ ಸಂಖ್ಯೆ 9901555893 ಯಲ್ಲಿ ಗಾನಸಿರಿ ಮುಖ್ಯಸ್ಥರನ್ನು ಸಂಪರ್ಕಿಸಬಹುದು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.