HomePage_Banner
HomePage_Banner
HomePage_Banner
HomePage_Banner

ತರಗತಿ ಆರಂಭವಾಗುವ ತನಕ ಪಠ್ಯಪುಸ್ತಕ ಅಧ್ಯಾಯನ, ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಿ ತಾಲೂಕು ಮಟ್ಟದ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್‌ನಿಂದಾಗಿ ಗುರು ಶಿಷ್ಯರ ಪದ ಮರೆತಂತಾಗಿದೆ. ಗುರುಶಿಷ್ಯ ಪರಂಪರೆ ಮತ್ತೊಮ್ಮೆ ಬರಬೇಕು. ವಿದ್ಯಾರ್ಥಿಗಳ ಕಳರವ ಕಾಣಬೇಕು ಎಂಬ ನಿಟ್ಟಿನಲ್ಲಿ ಸರಕಾರ ಕೋವಿಡ್ ಮುಕ್ತ ಸಮಾಜಕ್ಕಾಗಿ ಲಸಿಕೆ ಕೊಟ್ಟು ಜನರ ಆರೋಗ್ಯದ ಬಗ್ಗೆ ಕಾಳಜಿ ಮೂಡಿಸಿದೆ. ಅದೇ ರೀತಿ ಶೈಕ್ಷಣಿಕ ಚಟುವಟಿಕೆ ಕುಂಠಿತ ಆಗಬಾರದು ಎಂದು ಉಚಿತ ಪಠ್ಯಪುಸ್ತಕ ವಿತರಣೆ ಮಾಡಿದ್ದು, ತರಗತಿ ಆರಂಭ ಆಗುವ ತನಕ ಪಠ್ಯ ಪುಸ್ತಕ ಅಧ್ಯಾಯನ ಮಾಡಿ, ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಿ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿಯಿಂದ ಸರಕಾರದ ಹಂತದಲ್ಲಿ ಇಲಾಖೆ ಮೂಲಕ ಕೊಡಿಸುವ ಉಚಿತ ಪಠ್ಯ ಪುಸ್ತಕವನ್ನು ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ಮೂಲಕ ತಾಲೂಕು ಮಟ್ಟದ ಪಠ್ಯಪುಸ್ತಕ ವಿತರಣಾ ಕಾರ್ಯಕ್ರಮವನ್ನು ಸೆ.7ರಂದು ಉದ್ಘಾಟಿಸಿ ಮಾತನಾಡಿದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ಶಾಲೆಯಿಂದ ದೂರ ಉಳಿಯವ ಸಂಗತಿ ಕೋವಿಡ್‌ನಿಂದಾಗಿದೆ. ಇಂತಹ ಸನ್ನಿವೇಶದಲ್ಲಿ ವಿದ್ಯಾಗಮ ಯೋಜನೆ ಮೂಲಕ ಮಕ್ಕಳಿಗೆ ಅಧ್ಯಾಪಕರ ಮುಖಾಮುಖಿ ಭೌತಿಕ ಪಾಠ ಮಾಡುವ ಮತ್ತು ಪರೀಕ್ಷೆಗಳನ್ನು ಯಶಸ್ವಿಯಾಗಿ ನೆರೆವೇರಿಸಲಾಗಿದೆ. ಇವತ್ತು ಶೈಕ್ಷಣಿಕ ವರ್ಷದಲ್ಲಿ ಕೋವಿಡ್‌ನಿಂದಾಗಿ ಮಕ್ಕಳು ಪಠ್ಯ ಕ್ರಮದಿಂದ ದೂರ ಇದು, ಶಾಲೆಯಿಂದ ವಂಚಿತರಾಗುವ ಈ ಸನ್ನಿವೇಶದಲ್ಲಿ ಮಕ್ಕಳನ್ನು ಮತ್ತೊಮ್ಮೆ ಶಾಲೆಯ ಚಟುವಟಿಕೆಯಲ್ಲಿ ತೊಡಗಿಸಲು ಸರಕಾರ ಮಕ್ಕಳಿಗೆ ಪಠ್ಯ ಪುಸ್ತಕ ಕೊಟ್ಟು ಮನೆಯಲ್ಲೇ ಹೆತ್ತವರ ಜೊತೆ ಆದಷ್ಟು ಅಧ್ಯಾಯನ ಮಾಡಲು ತಿಳಿಸಿದೆ. ರೆಗ್ಯುಲರ್ ಕ್ಲಾಸ್ ಆಗುವ ತನಕ ಆನ್‌ಲೈನ್‌ಕ್ಲಾಸ್‌ಗೂ ಭಾಗವಹಿಸಿ. ತಂದೆ ತಾಯಿಯರು ಮಗುವಿನ ಶೈಕ್ಷಣಿಕಕ್ಕೆ ಹೆಚ್ಚು ಮಹತ್ವ ಕೊಡಬೇಕು.

ವಿದ್ಯಾರ್ಥಿಗಳ ರಕ್ಷಣೆಗೆ ನಮ್ಮ ಇಲಾಖೆ ಬದ್ದವಾಗಿದೆ:
ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್ ಅವರು ಮಾತನಾಡಿ ನಮ್ಮ ಶಿಕ್ಷಕರು ಈಗಾಗಲೇ ಎರಡು ಡೋಸ್ ಲಸಿಕೆ ಪಡೆದು ಕೊಂಡಿದ್ದಾರೆ. ಹಾಗಾಗಿ ನಾವು ಶಾಲಾರಂಭಕ್ಕೆ ಸಜ್ಜರಾಗಿದ್ದೇವೆ. ಇಲಾಖೆಯ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆದಿರಬೇಕು. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಿದರೆ ವಿದ್ಯಾರ್ಥಿಗಳಿಗೂ ಕೋವಿಡ್ ಲಸಿಕೆ ಕೊಡಿಸುವ ವಿಚಾರ ಬರಲಿದೆ. ಯಾರು ಭಯ ಪಡುವ ಅಗತ್ಯವಿಲ್ಲ ನಿಮ್ಮೆಲ್ಲರ ರಕ್ಷಣೆಗೆ ನಮ್ಮ ಇಲಾಖೆ ಬದ್ದವಾಗಿದೆ. ಧೈರ್ಯದಿಂದ ಶಾಲೆಗೆ ಬರಬಹುದು. ಮೊಬೈಲ್ ಬಳಗೆ ಎಷ್ಟು ಬೇಕೋ ಅಷ್ಟಕ್ಕೆ ಸೀಮತಿಗೊಳಿಸಿ. ಮಕ್ಕಳು ಅಡ್ಡ ದಾರಿ ಹಿಡಯಬಾರದು. ಪೋಷಕರು ಗಮನಿಸಬೇಕು. ಪೋಷಕರು ಶಿಕ್ಷಕರೊಂದಿಗೆ ಸಂಪರ್ಕದಲ್ಲಿ ಇರಬೇಕು ಎಂದರು. ನಗರಸಭೆ ಅಧ್ಯಕ್ಷ ಕೆ ಜೀವಂಧರ್ ಜೈನ್, ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಇಸಿಒ ಹರಿಪ್ರಸಾದ್ ಉಪಸ್ಥಿತರಿದ್ದರು. ಶಾಲೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಪ್ರಾಸ್ತಾವಿಕವಾಗಿ ಮಾತನಾಡಿ ನಮ್ಮ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ 74.5 ಫಲಿತಾಂಶ ಪಡೆದಿದ್ದೇವೆ. ಅದೇ ರೀತಿ ಶೈಕ್ಷಣಿಕ ವರ್ಷದಲ್ಲಿ 286 ದಾಖಲಾತಿ ಮಾಡಿದ್ದೇವೆ ಎಂದು ಹೇಳಿದರು. ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕ ಪ್ರಾರ್ಥಿಸಿದರು. ಜಿಲ್ಲಾ ಪ್ರಶಸ್ತಿ ಪುರಸ್ಕೃತ ದೈಹಿಕ ಶಿಕ್ಷಣ ಶಿಕ್ಷಕಿ ಗೀತಾಮಣಿ ಅವರು ವಂದಿಸಿದರು. ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.