HomePage_Banner
HomePage_Banner
HomePage_Banner
HomePage_Banner

ಮನೆ ಬಾಗಿಲಿಗೂ ಬಂದು ಲಸಿಕೆ ಕೊಡುವ ಸಂದೇಶ ನಿನೂತನ ಕೊಂಬೆಟ್ಟು – ಅಟಲ್ ಪಾರ್ಕ್ ಕೋವಿಡ್ ಲಸಿಕೆ ವಿತರಣೆಯಲ್ಲಿ ಸಂಜೀವ ಮಠಂದೂರು

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ನೀಡುವ ಕಾರ್ಯಕ್ರಮವನ್ನು ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ಶಾಲೆಗಳಲ್ಲಿ ಮಾಡಲಾಗುತ್ತಿದೆ. ಆದರೆ ಇವತ್ತು ಅದರಿಂದಲೂ ಕೆಳಗೆ ಬಂದು ಒಂದು ಪಾರ್ಕ್‌ನಲ್ಲೂ ಕೂಡಾ ಲಸಿಕೆ ಕೊಡಿಸುವ ಮೂಲಕ ಜನರ ಮನೆ ಬಾಗಿಲಿಗೆ ಹೋಗಿ ಲಸಿಕೆ ನೀಡಿ ಅವರ ಆರೋಗ್ಯ ಕಾಪಾಡುವ ಕಾಳಜಿ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಆಗುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೊಂಬೆಟ್ಟು ಅಟಲ್ ಪಾರ್ಕ್‌ನಲ್ಲಿ ಸೆ.7ರಂದು 2 ನೇ ಬಾರಿಗೆ ನಡೆಸಿದ ಕೋವಿಡ್ ಲಸಿಕೆ ನೀಡಿಕೆ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿ ಲಸಿಕೆ ಪಡೆಯಲು ಬಂದವರ ಆರೋಗ್ಯಕ್ಷೇಮ ವಿಚಾರಿಸಿ ಮಾತನಾಡಿದರು. ಕೋವಿಡ್ ಬಂದ ಬಳಿಕ ಆರೋಗ್ಯವೇ ಭಾಗ್ಯ ಎಂದು ಸಾಬೀತಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಆರೋಗ್ಯಕ್ಕೆ ಹೆಚ್ಚು ಮಹತ್ವ ಕೊಟ್ಟು  ದೇಶದ ೧೩೫ ಕೋಟಿ ಜನರ ಆರೋಗ್ಯ ಕಾಪಾಡಲು ಹತ್ತಾರು ಉಪಕ್ರಮಗಳನ್ನು ತೆಗೆದು ಕೊಂಡು ವಿಶೇಷವಾಗಿ ಆರೋಗ್ಯದ ಬಗ್ಗೆ ಕಾಳಜಿ ತೋರಿಸಿದ್ದಾರೆ. ಅತಿ ದೊಡ್ಡ ಲಸಿಕೆ ಅಭಿಯಾನ ಮಾಡಿದ್ದು 70  ಕೋಟಿಯಷ್ಟು ಮಂದಿಗೆ ಉಚಿತ ಲಸಿಕೆ ನೀಡಿಕೆ ಪೂರ್ಣಗೊಂಡಿದೆ. ಪುತ್ತೂರಿನಲ್ಲಿ ಮೊನ್ನೆ ಏಕ ಕಾಲದಲ್ಲಿ 20ಸಾವಿರ ಲಸಿಕೆ ಅಭಿಯಾನ ನಡೆಯಿತು. ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ಲಸಿಕೆ ನೀಡುವ ಕಾರ್ಯ ನಿರಂತರ ನಡೆಯುತ್ತಿದೆ. ಇವತ್ತು ಅದರಿಂದಲೂ ಕೆಳಗೆ ಬಂದು ಒಂದು ಪಾರ್ಕ್‌ನಲ್ಲೂ ಕೂಡಾ ಲಸಿಕೆ ಕೊಡಿಸುವ ಮೂಲಕ ಜನರ ಮನೆ ಬಾಗಿಲಿಗೆ ಲಸಿಕಾ ಸೌಲಭ್ಯ ಒದಗಿಸಲಾಗಿದೆ. ಕೊಂಬೆಟ್ಟು ಅಟಲ್ ಗಾರ್ಡನ್ ಇದಕ್ಕೆ ಮಾದರಿಯಾಗಿದೆ. ಮುಂದಿನ ದಿನ ಕೋವಿಡ್ ಮುಕ್ತ ಮತ್ತು ಲಸಿಕೆ ಯುಕ್ತವಾಗಬೇಕೆಂದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್, ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ, ಆಶಾ ಕಾರ್ಯಕರ್ತೆ, ಆರೋಗ್ಯ ಸಹಾಯಕಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.